Headlines

ಬೆಂಗಳೂರು : ರಾಜ್ಯದ 1000 ಸರ್ಕಾರಿ ಶಾಲೆಗಳಿಗೆ ‘ಸ್ಮಾರ್ಟ್ ಬೋರ್ಡ್’ ಜೋತೆಗೆ ಮೇಜು-ಬೆಂಚುಗಳ ವಿತರಣೆ :ಶಿಕ್ಷಣ ಸಚಿವ ಮಧು ಬಂಗಾರಪ್ಪ

ಬೆಂಗಳೂರು : ರಾಜ್ಯದ 1000 ಸರ್ಕಾರಿ ಶಾಲೆಗಳಿಗೆ ‘ಸ್ಮಾರ್ಟ್ ಬೋರ್ಡ್’ ಜೋತೆಗೆ ಮೇಜು-ಬೆಂಚುಗಳ ವಿತರಣೆ :ಶಿಕ್ಷಣ ಸಚಿವ ಮಧು ಬಂಗಾರಪ್ಪ

news.ashwasurya.in

ಅಶ್ವಸೂರ್ಯ/ಬೆಂಗಳೂರು : ರಾಜ್ಯದ 1000 ಸರ್ಕಾರಿ ಶಾಲೆಗಳಿಗೆ ಮೇಜು-ಬೆಂಚುಗಳ ಜೊತೆ ಸ್ಮಾರ್ಟ್ ಬೋರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೇಜು-ಬೆಂಚುಗಳ ಜೊತೆಗೆ ಇಂಟರಾಕ್ಟಿವ್ ಎಲ್.ಇ.ಡಿ ಸ್ಮಾರ್ಟ್ ಪ್ಯಾನೆಲ್ಗಳನ್ನು ಒದಗಿಸಲು ಇಂದು ಸಮಗ್ರ ಶಿಕ್ಷಣ ಕಚೇರಿಯಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳು “ಬೆಂಗಳೂರು ರೋಟರಿ ಕ್ಲಬ್ (RCB) ಸಂಸ್ಥೆ”ಯೊಂದಿಗೆ ಒಡಂಬಡಿಕೆಗೆ (MOU) ಸಚಿವ ಮಧು ಬಂಗಾರಪ್ಪ ಸಹಿ ಮಾಡಿದರು.
“ರೋಟರಿ ಇಂಟರಾಕ್ಟಿವ್ ಲರ್ನಿಂಗ್ 2025-26” ಹೆಸರಿನ ಯೋಜನೆಯಡಿ, ರೋಟರಿ ಕ್ಲಬ್ ತನ್ನ ಟ್ರಸ್ಟ್ ಮುಖಾಂತರ ರಾಜ್ಯದ 1000 ಸರ್ಕಾರಿ ಶಾಲಾ ತರಗತಿಗಳಿಗೆ ಬೆಂಚು-ಮೇಜುಗಳ ಜೊತೆಗೆ ಯುಪಿಎಸ್ ಸೌಲಭ್ಯದೊಂದಿಗೆ 75 ಇಂಚಿನ ಇಂಟರಾಕ್ಟಿವ್ ಪ್ಯಾನಲ್ ಬೋರ್ಡ್ಗಳನ್ನು ಒದಗಿಸಲಿದೆ.

ಸುಮಾರು ₹3.5 ಕೋಟಿ ವೆಚ್ಚದಲ್ಲಿ ಜಾರಿಗೊಳ್ಳುವ ಈ ಯೋಜನೆ 2026ರ ಜೂನ್ 30ರೊಳಗೆ ಪೂರ್ಣಗೊಳ್ಳುವ ಗುರಿ ಹೊಂದಿದ್ದು, ಹೆಚ್ಚುವರಿಯಾಗಿ CSR ನೆರವು ದೊರೆತರೆ 2026-27ರಲ್ಲಿ ಇನ್ನಷ್ಟು ತರಗತಿಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗುವುದು.ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಇದು ಮಹತ್ವದ ಹೆಜ್ಜೆಯಾಗಿದೆ. ಶಿಕ್ಷಣ ಇಲಾಖೆಯ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಎಂಬ ಕಾರ್ಯಕ್ರಮವು ಈಗಾಗಲೇ ಹಳೆಯ ವಿಧ್ಯಾರ್ಥಿಗಳು ಹಾಗೂ ಸಮುದಾಯದ ಬೆಂಬಲವನ್ನು ಪಡೆದುಕೊಂಡಿದೆ. ರೋಟರಿಯ ಈ ಪಾಲ್ಗೊಳ್ಳುವಿಕೆಯಿಂದ ಶಾಲೆಗಳ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಇನ್ನಷ್ಟು ಸಾಧ್ಯವಾಗುತ್ತದೆ. ಈ ಯೋಜನೆಯನ್ನು ಜಾರಿಗೊಳಿಸಲು ಸಹಕಾರ ನೀಡಿದಕ್ಕೆ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಸಾರ್ವಜನಿಕ ಶಿಕ್ಷಣ ಆಯುಕ್ತ ಡಾ. ಕೆ.ವಿ. ತ್ರಿಲೋಕ ಚಂದ್ರ, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕಿ ಶ್ರೀಮತಿ ವಿದ್ಯಾ ಕುಮಾರಿ, ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀ ಸುಖೇನ್, ರೋಟರಿ ಜಿಲ್ಲಾ ಗವರ್ನರ್ ಎಲಿಜಬೆತ್ ಚೆರಿಯನ್ ಹಾಗೂ ಹಿರಿಯ ಅಧಿಕಾರಿಗಳು ಮತ್ತು ರೋಟರಿಯನ್ಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!