ಶಿವಮೊಗ್ಗ : ಎರೆಡು ಬೈಕ್‌ಗಳ ನಡುವೆ ಅಪಘಾತ.!15 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವತಿ ಬಲಿ.!
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಇನ್ನೇನು 15 ದಿನಗಳಲ್ಲಿ ಅ ಯುವತಿ ಹಸೆಮಣೆ ಏರಬೇಕಾಗಿತ್ತು. ಆದರೆ, ವಿಧಿಯಾಟವೇ ಬೇರೆ. ಮದುವೆಯಾಗಿ ಗಂಡನ ಮನೆ ಸೇರಬೇಕಾಗಿದ್ದ ಯುವತಿ ಅಪಘಾತಕ್ಕೆ ಬಲಿಯಾಗಿ ಮಸಣ ಸೇರಿದ್ದಾಳೆ.
ಈ ಅಪಘಾತ ನಡೆದಿರೋದು ಶಿವಮೊಗ್ಗ ನಗರದ ರಾಷ್ಟ್ರೀಯ ಹೆದ್ದಾರಿ ಮಲವಗೊಪ್ಪ ಬಳಿಯ ಶುಗರ್ ಫ್ಯಾಕ್ಟರಿ ಸಮೀಪದಲ್ಲಿ. ದುಮ್ಮಳ್ಳಿಯ 26 ವರ್ಷದ ಕವಿತಾ ಮೃತ ದುರ್ದೈವಿ.

ಕವಿತಾ ತನ್ನ ಸಹೋದರ ಸಂತೋಷನೊಂದಿಗೆ ಬೈಕ್ ನಲ್ಲಿ ಕೇಲಸಕ್ಕೆಂದು ಶಿವಮೊಗ್ಗಕ್ಕೆ ಬರುತ್ತಿರುವಾಗ ಎದುರಿನಿಂದ ಬಂದ ಮತ್ತೊಂದು ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಸಂತೋಷ್ ರಸ್ತೆಯ ಫುಟ್ ಪಾತ್ ಕಡೆ ಬಿದ್ದಿದ್ದು, ಹಿಂಬದಿ ಕುಳಿತ್ತಿದ್ದ ಸಹೋದರಿ ಕವಿತಾ ರಸ್ತೆ ಮಧ್ಯೆ ಬಿದ್ದಿದ್ದಾರೆ. ಇದೇ ವೇಳೆ ವೇಗವಾಗಿ ಬರುತ್ತಿದ್ದ ಖಾಸಗಿ ನಗರ ಸಾರಿಗೆ ಬಸ್ ಕವಿತಾಳ ತಲೆ ಮೇಲೆಯೇ ಹರಿದಿದೆ.ಇದರ ಪರಿಣಾಮ ಕವಿತಾ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಆವರಿಸಿದೆ.


