Headlines

ದೆಹಲಿ : Instagram ನಲ್ಲಿ ಪರಿಚಯವಾದ ಗೆಳತಿ ಮೇಲೆ ಅತ್ಯಾಚಾರ: ಹಿಂದಿ ಕಿರುತೆರೆ ನಟ ಆಶಿಶ್ ಕಪೂರ್ ಬಂಧನ.!?

Instagram ನಲ್ಲಿ ಪರಿಚಯವಾದ ಗೆಳತಿ ಮೇಲೆ ಅತ್ಯಾಚಾರ: ಹಿಂದಿ ಕಿರುತೆರೆ ನಟ ಆಶಿಶ್ ಕಪೂರ್ ಬಂಧನ.!?

ಅಶ್ವಸೂರ್ಯ/ಮುಂಬೈ : ಸಂತ್ರಸ್ತೆಗೆ ಅಶಿಶ್ ಕಪೂರ್ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದರು. ಆರಂಭದಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಕಪೂರ್, ಆತನ ಸ್ನೇಹಿತ, ಸ್ನೇಹಿತನ ಪತ್ನಿ ಮತ್ತು ಇಬ್ಬರು ಅಪರಿಚಿತರ ಹೆಸರನ್ನು ಉಲ್ಲೇಖಿಸಲಾಗಿತ್ತು.
ಮನೆಯಲ್ಲಿ ನಡೆದ ಪಾರ್ಟಿಯೊಂದರಲ್ಲಿ ಮಹಿಳೆಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜನಪ್ರಿಯ ನಟ ಆಶಿಶ್ ಕಪೂರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ ತಿಂಗಳ ‌ಎರಡನೆ ವಾರದಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗಿದೆ. ಕಪೂರ್ ತನ್ನ ಮೇಲೆ ವಾಶ್‌ರೂಮ್‌ನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಸಂತ್ರಸ್ತೆ ಇನ್‌ಸ್ಟಾಗ್ರಾಮ್ ಮೂಲಕ ಕಪೂರ್‌ ಸಂಪರ್ಕಕ್ಕೆ ಬಂದಿದ್ದಳು. ಆರಂಭದಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಕಪೂರ್, ಆತನ ಸ್ನೇಹಿತ, ಸ್ನೇಹಿತನ ಪತ್ನಿ ಮತ್ತು ಇಬ್ಬರು ಅಪರಿಚಿತರ ಹೆಸರನ್ನು ಉಲ್ಲೇಖಿಸಲಾಗಿತ್ತು.

ಆದರೆ, ನಂತರ ಸಂತ್ರಸ್ತೆ ತನ್ನ ಹೇಳಿಕೆಯನ್ನು ಬದಲಾಯಿಸಿ, ಕೇವಲ ಆಶಿಶ್ ಕಪೂರ್ ಮಾತ್ರ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿಸಿದ್ದಾಳೆ.ದ್ವಂದ್ವ ಹೇಳಿಕೆಯು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ಘಟನೆಯನ್ನು ವಿಡಿಯೊದಲ್ಲಿ ದಾಖಲಿಸಲಾಗಿದೆ ಎಂದು ಆಕೆ ಆರೋಪಿಸಿದ್ದರೂ, ಪೊಲೀಸರಿಗೆ ಇದುವರೆಗೆ ಯಾವುದೇ ವಿಡಿಯೊ ಸಾಕ್ಷ್ಯ ಸಿಕ್ಕಿಲ್ಲ.
ಈ ಘಟನೆಯ ಬಗ್ಗೆ ತನಿಖೆ ಮುಂದುವರಿದಿದ್ದು, ಕಪೂರ್‌ನನ್ನು ವಿಚಾರಣೆಗೊಳಪಡಿಸಲಾಗಿದೆ. ಸಂತ್ರಸ್ತೆಯ ಆರೋಗ್ಯ ಪರೀಕ್ಷೆಗಾಗಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಶಿಶ್ ಕಪೂರ್ ಟಿವಿ ಉದ್ಯಮದಲ್ಲಿ ಗುರುತಿಸಿಕೊಂಡಿದ್ದು, ‘BOSS: ವಿಶೇಷ ಸೇವೆಗಳ ಬಾಪ್’, ‘ಚಲ್ಲೇ ಚಲ್ತಿ’, ‘ಶಾದಿ ಮೇ ಜರೂರ್ ಆನಾ’ ಮತ್ತು ‘ಮೊಲ್ಕಿ ರಿಶ್ಟನ್ ಕಿ ಅಗ್ನಿಪರೀಕ್ಷಾ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸತ್ಯಾಸತ್ಯತೆ ಪೊಲೀಸರ ತನಿಖೆಯಿಂದಷ್ಟೆ ಬಯಲಾಗ ಬೇಕಿದೆ..

Leave a Reply

Your email address will not be published. Required fields are marked *

Optimized by Optimole
error: Content is protected !!