ಸೆಪ್ಟೆಂಬರ “6” ರಂದು ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಕಾರ್ಯಕ್ರಮ ಕಳೆದ “5” ವರ್ಷದಂತೆ “6”ನೇ ವರ್ಷವು 10,000 ಮಂದಿ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿರುವ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್. ಸುಂದರೇಶ್..

ಶಿವಮೊಗ್ಗ | ಸೆ. 6 ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ,10,000 ಮಂದಿ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ : ಹೆಚ್ ಎಸ್ ಸುಂದರೇಶ್ , ಸೂಡಾ ಅಧ್ಯಕ್ಷರು.

news.ashwasurya.in
ಅಶ್ವಸೂರ್ಯ /ಶಿವಮೊಗ್ಗ ಸೆ.04 : ಶಿವಮೊಗ್ಗ ನಗರದಲ್ಲಿ ರಾಜ್ಯದ ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆಯನ್ನು ಸೆಪ್ಟೆಂಬರ್ 6 ರಂದು ಹಮ್ಮಿಕೊಳ್ಳಲಾಗಿದ್ದು. ಮೆರವಣಿಗೆಯು ಭೀಮೇಶ್ವರ ದೇವಸ್ಥಾನದಿಂದ ಆರಂಭವಾಗಿ ಪಿ ಎಂ ಮುಖ್ಯ ರಸ್ತೆ-ರಾಮಣ್ಣ ಶ್ರೇಷ್ಠಿ ಪಾರ್ಕ್-ಗಾಂಧಿ ಬಜಾರ್ ಮುಖ್ಯ ರಸ್ತೆ, ಮತ್ತು ಬಸವೇಶ್ವರ ದೇವಸ್ಥಾನದಿಂದ ಸಾಗಿ ಎಸ್ ಎನ್ ಸರ್ಕಲ್ -ಎ.ಎ.ಸರ್ಕಲ್- ನೆಹರು ರಸ್ತೆ- ಗೋಪಿ ಸರ್ಕಲ್- ದುರ್ಗಿಗುಡಿ ಮಾರ್ಗವಾಗಿ ಮಹಾವೀರ ಸರ್ಕಲ್ – ಡಿವಿಎಸ್ ಸರ್ಕಲ್ –ಕಾನ್ವೆಂಟ್ ರಸ್ತೆ – ಕೋಟೆ ರಸ್ತೆ ಮಾರ್ಗವಾಗಿ ಭೀಮೇಶ್ವರ ದೇವಸ್ಥಾನದ ಹತ್ತಿರ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಈ ಮೆರವಣಿಗೆಯ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರ ಜೋತೆಗೆ ರಾಜ್ಯದ ಸುಪ್ರಸಿದ್ದ ಡೊಳ್ಳು ಕುಣಿತ,ವೀರಗಾಸೆ, ಹುಲಿವೇಷ ಇನ್ನೂ ಹತ್ತು ಹಲವು ಕಲಾತಂಡಗಳು ಈ ಗಣಪತಿಯ ಅದ್ದೂರಿ ಮೆರವಣಿಗೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು.

ಮೆರವಣಿಗೆಯಲ್ಲಿ ಭಾಗವಹಿಸುವ ಭಕ್ತರಿಗಾಗಿ ಕಳೆದ ಐದು ವರ್ಷದಿಂದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು, ಹಾಲಿ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರು ಈ ಬಾರಿಯು ಸುಮಾರು 10,000 ಮಂದಿ ಭಕ್ತರಿಗೆ ಪ್ರತಿ ಸಲದಂತೆ ಈ ಬಾರಿಯು ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ.

ಗಾಂಧಿ ಬಜಾರಿನ ” ಶ್ರೀ ಬಸವೇಶ್ವರ ದೇವಸ್ಥಾನ ” ದ ಮುಂಬಾಗದಲ್ಲಿ ಭಕ್ತರಿಗೆ ಅನ್ನಸಂತರ್ಪಣೆಯನ್ನು ಎರ್ಪಡಿಸಲಾಗಿದ್ದು ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತರು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಮನವಿ ಮಾಡಿದ್ದಾರೆ.


