ಶಿವಮೊಗ್ಗ ಮಹಾನಗರ ಪಾಲಿಕೆ ಭ್ರಷ್ಟರ ಕೊಂಪೆಯಾಗಿದೆ.ದಿನದಿಂದ ದಿನಕ್ಕೆ ಲಂಚಬಾಕರ ಹಸಿವು ಮಿತಿ ಮೀರಿದೆ.. ಯಾವುದೇ ವಿಭಾಗದಲ್ಲೂ ಲಂಚ ಕೊಡದೆ ಕೆಲಸ ಮಾಡಿಕೊಳ್ಳುವುದು ಕಷ್ಟ ಎನ್ನಿವ ಮಟ್ಟಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆ ಗೋಚರಿಸುತ್ತಿದೆ.ಅದರಲ್ಲೂ ಕಂದಾಯ ವಿಭಾಗ. Birth certificate, death certificate,ವಿಭಾಗದಲ್ಲಿ ಹಣ ಹಿಡಿದುಕೊಂಡು ಕ್ಯೂ ನಿಲ್ಲುವ ಪರಿಸ್ಥಿತಿ ಇದೆಯಂತೆ.!? ಇನ್ನೂ ಕಾಮಗಾರಿ ವಿಭಾಗ ಮತ್ತು ಹೆಲ್ತ್ ವಿಭಾಗದಲ್ಲಿ ಕೇಳುವುದೆ ಬೇಡ…ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಅಡಿಯಿಂದ ಮುಡಿವೆಗೂ ಲಂಚದ ಹಣದ ದಾಹ ಮಿತಿ ಮೀರಿದೆ…ಶಿವಮೊಗ್ಗ ಮಹಾನಗರ ಪಾಲಿಕೆಗೆ ಚುನಾವಣೆ ನೆಡೆಯದೆ ವರ್ಷಗಳೆ ಉರುಳಿದ ಕಾರಣಕ್ಕೆ ಆಯುಕ್ತರರಾಗಿ ಬರುವುದಕ್ಕೆ ದೊಡ್ಡಮಟ್ಟದ ಪೈಪೋಟಿ ನೆಡೆಯುತ್ತದೆ…ಎಂದರೆ ನೀವು ಯೋಚಿಸ ಬೇಕಿದೆ….ಯಾವ ಯಾವ ವಿಭಾಗದಲ್ಲಿ ಲಂಚಕ್ಕಾಗಿ ಹಸಿದು ಕುಳಿತಿರುವ ಅಧಿಕಾರಿಗಳ ಕರ್ಮಕಾಂಡದ ವರದಿಯನ್ನು ನಿಮ್ಮ ಮುಂದೆ ತರುವ ಪ್ರಯತ್ನದಲ್ಲಿ ಪತ್ರಿಕೆ ಮುಂದಾಗಿದೆ…ನಾ ನವನಲ್ಲಾ….ನಾ ನವನಲ್ಲಾ…ಎನ್ನುವ ಭ್ರಷ್ಟರ ಮುಖವಾಡ ಕಳಚಬೇಕಿದೆ….
ಶಿವಮೊಗ್ಗ : ಮಹಾನಗರ ಪಾಲಿಕೆ ಅಶ್ರಯ ವಿಭಾಗದ ಭ್ರಷ್ಟ ಅಧಿಕಾರಿ ಶಶಿಧರ್ ಹಣದ ಸಮೇತ ಲೊಕಾಯುಕ್ತ ಖೆಡ್ಡಕ್ಕೆ.!
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಭ್ರಷ್ಟಾಚಾರದ ಮಾಹಾ ಕೊಂಪೆಯಾದ ಶಿವಮೊಗ್ಗ ಮಹಾನಗರ ಪಾಲಿಕೆಯ ಭ್ರಷ್ಟನೊಬ್ಬನನ್ನು ಲೋಕಾಯುಕ್ತರು ಅಧಿಕಾರಿಗಳು ಖೆಡ್ಡಕ್ಕೆ ಕೆಡವಿಕೊಂಡಿದ್ದಾರೆ.
ದೂರುದಾರರಾದ ಮೊಹ್ಮದ್ ಆಸೀಫ್ ಉಲ್ಲಾ ಅವರು ಟೈಲ್ಸ್ ಕೆಲಸಮಾಡಿಕೊಂಡು ಜೀವನ ನೆಡೆಸುತ್ತಿದ್ದು ಬೊಮ್ಮನಕಟ್ಟೆಯ ಆಶ್ರಯ ಬಡಾವಣೆಯಲ್ಲಿ ವಾಸವಾಗಿದ್ದರೆ. ಮೊಹ್ಮದ್ ಆಸೀಫ್ ಉಲ್ಲಾ ಅವರು ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಮನೆಯೊಂದನ್ನು ಅಮ್ಯಾದ್ ಅಲಿ ಅವರಿಂದ ಇತ್ತೀಚೆಗೆ ಖರೀದಿಸಿದ್ದು ಸದರಿ ಮನೆಯನ್ನು ತನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಈ ವಿಚಾರವಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆಶ್ರಯ ವಿಭಾಗದ ಸಮುದಾಯ ಸಂಘಟನಾಧಿಕಾರಿಯಾದ ಶಶಿಧರ ರವರನ್ನು ಭೇಟಿ ಮಾಡಿ ವಿಚಾರಿಸಿದಾಗ, ಸದರಿಯವರು ಸ್ಥಳ ಮಹಜರು ನಡೆಸಿ, ದಾಖಲಾತಿಗಳನ್ನು ಪರಿಶೀಲನೆ ಮಾಡುವುದಾಗಿ ತಿಳಿಸಿ, ಪಿರ್ಯಾದಿ ಹೆಸರಿಗೆ ಖಾತೆ ಮಾಡಿಕೊಡಲು 10,000/-ರೂಗಳ ಲಂಚದ ಹಣಕ್ಕೆ ಭೇಡಿಕೆ ಇಟ್ಟಿರುತ್ತಾರೆ. ಸದರಿ ಸಂಭಾಷಣೆಯನ್ನು ದೂರುದಾರರಾದ ಮಹ್ಮದ್ ಆಸೀಪ್ ಉಲ್ಲಾ ಅವರು ವಾಯ್ಸ್ ರೇಕಾರ್ಡ್ ಮಾಡಿಕೊಂಡಿರುತ್ತಾರೆ.

ಪಿರ್ಯಾದುದಾರರಿಗೆ ಅವರ ಹೆಸರಿಗೆ ಮನೆ ಖಾತೆ ಮಾಡಿಕೊಡಲು ಶಶಿಧರ್ ರವರಿಗೆ ಲಂಚದ ಹಣ ನೀಡಲು ಇಷ್ಟವಿಲ್ಲದೆ ಇದ್ದುದ್ದರಿಂದ ಸದರಿ ಸಮುದಾಯ ಸಂಘಟನಾಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ದಿವಸ ದಿನಾಂಕ:-29-08-2025 ರಂದು ಲೋಕಾಯುಕ್ತರ ಕಚೇರಿಗೆ ತೆರಳಿ ನೀಡಿದ ದೂರಿನ ಮೇರೆಗೆ ಕಲಂ:7(a) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988. (ತಿದ್ದುಪಡಿ ಕಾಯಿದೆ-2018) ರೀತ್ಯಾ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ದಿನಾಂಕ:-29-08-2025 ರಂದು ಸಂಜೆ 04.15 ಗಂಟೆಯ ಸುಮಾರಿಗೆ ಶಿವಮೊಗ್ಗ ನಗರದ ನೆಹರೂ ರಸ್ತೆಯ ನೇತಾಜಿ ಸುಭಾಷಚಂದ್ರ ಭೋಸ್ ವಾಣಿಜ್ಯ ಸಂಕೀರ್ಣದ ಮೂರನೆ ಮಹಡಿಯಲ್ಲಿರುವ ಆಶ್ರಯ ಕಛೇರಿಯಲ್ಲಿ ಆಪಾದಿತ ಅಧಿಕಾರಿ ಪಿರ್ಯಾದಿಯಿಂದ 10,000/-ರೂ ಲಂಚದ ಹಣವನ್ನು ಪಡೆದುಕೊಂಡ ಸಮಯದಲ್ಲಿ ಹಣದ ಸಮೇತ ಟ್ರ್ಯಾಪ್ ಮಾಡಲಾಗಿದ್ದು ಮತ್ತು ಲಂಚದ ಹಣವನ್ನು ಜಪ್ತಿ ಪಡಿಸಿಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾದಿತ ಅಧಿಕಾರಿಯಾದ ಭ್ರಷ್ಟ ಶಶಿಧರ್ ಎ.ಪಿ, ಸಮುದಾಯ ಸಂಘಟನಾ ಅಧಿಕಾರಿ, ಆಶ್ರಯ ಕಛೇರಿ, ಮಹಾನಗರ ಪಾಲಿಕೆ, ಶಿವಮೊಗ್ಗ ರವರನ್ನು ತನಿಖೆ ಸಂಬಂಧ ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ರಾದ ರುದ್ರೇಶ್.ಕೆ.ಪಿ, ರವರು ಕೈಗೊಂಡಿರುತ್ತಾರೆ.

ಸದರಿ ದಾಳಿಯ ಕಾರ್ಯಾಚರಣೆಯಲ್ಲಿ ಮಂಜುನಾಥ್ ಚೌಧರಿ.ಎಂ. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಬಿ.ಪಿ. ಚಂದ್ರಶೇಖರ್. ಪೊಲೀಸ್ ಉಪಾಧೀಕ್ಷಕರು, ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರಾದ ರುದ್ರೇಶ್.ಕೆ.ಪಿ,ರವರು ಟ್ರ್ಯಾಪ್ ಮಾಡಿದ್ದು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗಳಾದ ಗುರುರಾಜ ಎನ್ ಮೈಲಾರ್, ವೀರಬಸಪ್ಪ ಎಲ್ ಕುಸಲಾಪುರ, ಸಿಬ್ಬಂದಿಯವರಾದ ಯೋಗೇಶ್.ಜಿ.ಸಿ, ಸಿ.ಹೆಚ್.ಸಿ, ಮಂಜುನಾಥ.ಎಂ. ಸಿ.ಹೆಚ್.ಸಿ, ಟೀಕಪ್ಪ ಸಿಹೆಚ್ಸಿ ಸುರೇಂದ್ರ ಹೆಚ್.ಜಿ. ಸಿಹೆಚ್ಸಿ, ಪ್ರಶಾಂತ್ ಕುಮಾರ್ ಹೆಚ್. ಸಿ.ಪಿ.ಸಿ, ದೇವರಾಜ್.ವಿ. ಸಿಪಿಸಿ, ಪ್ರಕಾಶ್ ಬಾರಿಮರದ ಸಿಪಿಸಿ, ಅರುಣ್ ಕುಮಾರ್.ಯು.ಬಿ.ಸಿ.ಪಿ.ಸಿ, ಆದರ್ಶ್ ಸಿ.ಪಿ.ಸಿ, ಚಂದ್ರಿಬಾಯಿ.ಎಸ್. ಮ.ಪಿ,ಸಿ, ಪ್ರದೀಪ ಎ.ಹೆಚ್.ಸಿ, ಗಂಗಾಧರ ಎಪಿಸಿ, ಆನಂದ, ಎ.ಪಿ.ಸಿ, ಗೋಪಿ ಎ.ಪಿ.ಸಿ ರವರು ಹಾಜರಿರುತ್ತಾರೆ.
ಇನ್ನೂ ಶಿವಮೊಗ್ಗ ಮಹಾನಗರ ಪಾಲಿಕೆಗೆ ಈ ಹಿಂದಿನ ಆಯುಕ್ತರು ವರ್ಗಾವಣೆಯಾಗಿ ಹೊಸ ಆಯುಕ್ತರು ಕಾಲಿಡುತ್ತಿದ್ದಂತೆ ನಿವೃತ್ತಿ ಅಂಚಿನಲ್ಲಿರುವ ಭ್ರಷ್ಟನೊಬ್ಬ ಮಾಡಿದ ಭ್ರಷ್ಟಾಚಾರ ಬಯಲಾಗುವ ಹೆದರಿಕೆಯಿಂದ ಕರ್ತವ್ಯಕ್ಕೆ ಬಾರದೆ ದೂರ ಉಳಿದಿದ್ದಾನೆಂದರೆ ಅವನು ಮಾಡಿರುವ ಭ್ರಷ್ಟಾಚಾರ ಯಾವ ಮಟ್ಟಕ್ಕೆ ಇರಬಹುದು ಎನ್ನುವುದನ್ನು ನೀವೆ ಯೋಚಿಸಿ…ಇವನ ಅಷ್ಟು ಅಸಲಿಯತ್ತು ಬಯಲಾಗ ಬೇಕಾದರೆ ಅವನ ಮನೆಯ ಮೇಲೆ ಲೋಕಾಯುಕ್ತರು ದಾಳಿ ನೆಡೆಸಬೇಕಿದೆ…!?ಈಗಾಗಲೇ ಒಂದು ಬಾರಿ ಲೋಕಾಯುಕ್ತರ ಖೆಡ್ಡಕ್ಕೆ ಬಿದ್ದು ಚಡ್ಡಿ ಕಳಚಿಕೊಂಡಿದ್ದಾನೆ ಇವನು ಶಿವಮೊಗ್ಗ ಮಹಾನಗರ ಪಾಲಿಕೆಯ ಮೆತ್ತನೆ ಕಳ್ಳ.. ಅದೇನೊ ಅಂತರಾಲ್ಲ ಗಡಿಗೆ ಸಿದ್ಧ ಒಳ ಒಳಗೆ ಮೆಯ್ದಾ….


