ED ದಾಳಿ : ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆ ಕಛೇರಿಯ ಮೇಲೆ ED ದಾಳಿ ಕಂತೆ ಕಂತೆ ಹಣ, ಚಿನ್ನ ಪತ್ತೆ.! ಪಪ್ಪಿ ಅರೆಸ್ಟ್.!

news.ashwasurya.in
ಕಾಂಗ್ರೆಸ್ ಶಾಸಕ ಪಪ್ಪಿ ಮನೆಯಲ್ಲಿ12 ಕೋಟಿ ನಗದು, 6 ಕೋಟಿ ಮೌಲ್ಯದ ಚಿನ್ನ, 10 ಕೆ.ಜಿ ಬೆಳ್ಳಿ ವಶಕ್ಕೆ ಪಡೆದ ಇ.ಡಿ
Puppies Casino Gold, Ocean Rivers Casino, Puppies Casino Pride, Ocean 7 Casino, Big Daddy Casino in Goa have been raided. Veerendra runs several online betting sites under the names of Puppy King 567, Raja 567, Puppies 003, Ratna Gaming etc.

ಅಶ್ವಸೂರ್ಯ/ಚಿತ್ರದುರ್ಗ : ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಇ.ಡಿ ದಾಳಿ ನಡೆಸಿದ ಸಂದರ್ಭ ಕೋಟಿ ಕೋಟಿ ಕಂತೆ ಕಂತೆ ಹಣ, ಚಿನ್ನ ಹಾಗೂ ಕೆಜಿ ಗಟ್ಟಲೆ ಬೆಳ್ಳಿ ಪತ್ತೆಯಾದ ಬೆನ್ನಿಗೆ ED ವೀರೇಂದ್ರ ಪಪ್ಪಿಯವರನ್ನು ಸಿಕ್ಕಿಂನ (Sikkim) ಗ್ಯಾಂಗ್ಟಕ್ನಲ್ಲಿ ಬಂಧಿಸಿದೆ.
ಈಗಾಗಲೇ ವೀರೇಂದ್ರ ಪಪ್ಪಿಯವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿರುವ ಇ.ಡಿ ಟ್ರಾನ್ಸಿಟ್ ವಾರೆಂಟ್ ಮೇಲೆ ಬೆಂಗಳೂರು ಕೋರ್ಟ್ ಹಾಜರುಪಡಿಸಲಿದ್ದಾರೆ
ವೀರೇಂದ್ರ ಪಪ್ಪಿಯ 5
ಅಕ್ರಮ ಆನ್ಲೈನ್ ಮತ್ತು ಆಫ್ಲೈನ್ ಬೆಟ್ಟಿಂಗ್ಗೆ ಸಂಬಂಧಿಸಿದಂತೆ ಶುಕ್ರವಾರ ಮುಂಜಾನೆ ಚಿತ್ರದುರ್ಗದ ಕಾಂಗ್ರೆಸ್ ಶಾಸನ ವೀರೇಂದ್ರ ಪಪ್ಪಿ ಮತ್ತು ಇತರರ ಮೇಲೆ ಒಟ್ಟು 30 ಸ್ಥಳಗಳಲ್ಲಿ ದಾಳಿ ನಡೆಸಿ ಇ.ಡಿ ದಾಖಲೆ ಪರಿಶೀಲನೆ ಮಾಡಿದೆ. ಈ ವೇಳೆ 12 ಕೋಟಿ ನಗದು, 1 ಕೋಟಿ ವಿದೇಶಿ ಹಣ, 6 ಕೋಟಿ ಮೌಲ್ಯದ ಚಿನ್ನ, 10 ಕೆಜಿ ಬೆಳ್ಳಿ, 17 ಬ್ಯಾಂಕ್ ಖಾತೆ ಹಾಗೂ 2 ಬ್ಯಾಂಕ್ ಲಾಕರ್ಗಳನ್ನು ಇ.ಡಿ ಸೀಜ್ ಮಾಡಿದೆ.

ಚಿತ್ರದುರ್ಗ ಜಿಲ್ಲೆಯಾದ್ಯಂತ 6, ಬೆಂಗಳೂರು ನಗರ 10, ಜೋಧ್ಪುರ 3, ಹುಬ್ಬಳ್ಳಿ 1, ಮುಂಬೈ 2 ಮತ್ತು ಗೋವಾದಲ್ಲಿರುವ ಪಪ್ಪೀಸ್ ಕ್ಯಾಸಿನೊ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೊ, ಪಪ್ಪೀಸ್ ಕ್ಯಾಸಿನೊ ಪ್ರೈಡ್, ಓಷನ್ 7 ಕ್ಯಾಸಿನೊ, ಬಿಗ್ ಡ್ಯಾಡಿ ಕ್ಯಾಸಿನೊಗಳ ಮೇಲೆ ದಾಳಿ ನಡೆಸಲಾಗಿದೆ. ವೀರೇಂದ್ರ ಪಪ್ಪಿ ಕಿಂಗ್ 567, ರಾಜ 567, ಪಪ್ಪೀಸ್ 003, ರತ್ನ ಗೇಮಿಂಗ್ ಇತ್ಯಾದಿಗಳ ಹೆಸರಿನಲ್ಲಿ ಹಲವಾರು ಆನ್ಲೈನ್ ಬೆಟ್ಟಿಂಗ್ ಸೈಟ್ಗಳನ್ನು ನಡೆಸುತ್ತಿದ್ದಾರೆ.

ವೀರೇಂದ್ರ ಪಪಿ ಸಹೋದರ ಕೆಸಿ ತಿಪ್ಪೇಸ್ವಾಮಿ ದುಬೈನಿಂದ ಡೈಮಂಡ್ ಸಾಫ್ಟ್ಟೆಕ್, ಟಿಆರ್ಎಸ್ ಟೆಕ್ನಾಲಜೀಸ್, ಪ್ರೈಮ್ 9 ಟೆಕ್ನಾಲಜೀಸ್ ಎಂಬ 3 ವ್ಯವಹಾರ ಸಂಸ್ಥೆಗಳನ್ನು ನಿರ್ವಹಿಸುತ್ತಿದ್ದಾರೆ. ಈ ಘಟಕಗಳು ಕೆಸಿ ವೀರೇಂದ್ರ ಅವರ ಕಾಲ್ ಸೆಂಟರ್ ಸೇವೆಗಳು ಮತ್ತು ಗೇಮಿಂಗ್ ವ್ಯವಹಾರಕ್ಕೆ ಸಂಬಂಧಿಸಿವೆ ಎಂದು ಇ.ಡಿ ತಿಳಿಸಿದೆ.

1 ಕೋಟಿ ಫಾರಿನ್ ಕರೆನ್ಸಿ ಪತ್ತೆ
ಇದಲ್ಲದೇ ಎಂಜಿಎಂ ಕ್ಯಾಸಿನೊ, ಮೆಟ್ರೋಪಾಲಿಟನ್ ಕ್ಯಾಸಿನೊ, ಬೆಲಾಜಿಯೊ ಕ್ಯಾಸಿನೊ, ಮರೀನಾ ಕ್ಯಾಸಿನೊದಲ್ಲಿ ಕ್ಯಾಸಿನೊ ಆಭರಣ, ವಿವಿಧ ಬ್ಯಾಂಕುಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳು, ತಾಜ್, ಹಯಾತ್ ಮತ್ತು ಲೀಲಾ ಪಂಚತಾರಾ ಹೋಟೆಲ್ಗಳ ಐಷಾರಾಮಿ ಆತಿಥ್ಯ ಸದಸ್ಯತ್ವ ಕಾರ್ಡ್ಗಳು, 6 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಇದರ ಜೊತೆಗೆ ಐಷಾರಾಮಿ ಕಾರು, 12 ಕೋಟಿ ಮೌಲ್ಯದ ಇಂಡಿಯನ್ ಕರೆನ್ಸಿ, 1 ಕೋಟಿ ಫಾರಿನ್ ಕರೆನ್ಸಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ದಿಢೀರ್ ಇಡಿ ದಾಳಿಗೆ ಕಾರಣ ಏನು?
ಗೇಮಿಂಗ್ ಆ್ಯಪ್ಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ, ಅಕ್ರಮ ಆಸ್ತಿ ಮತ್ತು ತೆರಿಗೆ ವಂಚನೆ ಆರೋಪ ಪಪ್ಪಿ ವಿರುದ್ಧ ಕೇಳಿಬಂದಿತ್ತು. ಈ ಕುರಿತು ಗೋವಾದಲ್ಲಿ 2 ಪ್ರಕರಣ ದಾಖಲಾಗಿತ್ತು. ಇದನ್ನಾಧರಿಸಿ ಇಡಿ ದಾಳಿ (ED Raid) ನಡೆಸಿದೆ ಎಂದು ತಿಳಿದುಬಂದಿದೆ.



