ಶಿವಮೊಗ್ಗ : ಈದ್ ಮಿಲಾದ್ ಹಾಗೂ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಸಭೆ : ಮಿಥುನ್ ಕುಮಾರ್ ಜಿ.ಕೆ. ಐ.ಪಿ.ಎಸ್.

news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಮಿಥುನ್ ಕುಮಾರ್ ಜಿ.ಕೆ. ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ, ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಶಾಂತಿ ಸಭೆಯನ್ನು ಆಯೋಜಿಸಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.

♦️ ಶಿವಮೊಗ್ಗ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಠಾಣಾ ಮಟ್ಟ, ಉಪ ವಿಭಾಗ ಮಟ್ಟ ಹಾಗೂ ಜಿಲ್ಲಾ ಮಟ್ಟದ ಹಲವು ಸಭೆಗಳನ್ನು ನಡೆಸಲಾಗಿರುತ್ತದೆ . ಈ ಸಂದರ್ಭದಲ್ಲಿ ಸಲಹೆ, ಸೂಚನೆ ಹಾಗೂ ಪಾಲಿಸಬೇಕಾದ ಕ್ರಮಗಳ ಬಗ್ಗೆ ತಿಳಿಸುತ್ತಾ ಬಂದಿದ್ದೇವೆ, ಮುಖ್ಯವಾದ ವಿಚಾರವೇನೆಂದರೆ ಪ್ರತೀ ವರ್ಷವೂ ಸಹಾ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಉತ್ತಮ ಸಹಕಾರವನ್ನು ನೀಡುತ್ತಿದ್ದು, ನಿಮ್ಮ ಸಹಕಾರಕ್ಕೆ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ, ಹಾಗೆಯೇ ಈ ವರ್ಷವೂ ಸಹಾ ನಿಮ್ಮಿಂದ ಸಹಕಾರವನ್ನು ಆಶಿಸುತ್ತೇವೆ.

♦️ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಸಮಾಜದ ಪ್ರಮುಖ ಮುಖಂಡರುಗಳಿಗೆ ನಾಯಕಯತ್ವವನ್ನು ನೀಡಿದ್ದು , ಸ್ಥಳೀಯವಾಗಿ ಯಾವುದೇ ಸಮಸ್ಯೆಗಳಾಗದಂತೆ ನೀವುಗಳು ಮುಂದಾಳತ್ವವನ್ನು ವಹಿಸುತ್ತೀರೆಂಬ ನಂಬಿಕೆಯಿಂದ ಹಾಗೂ ಯಾವುದೇ ಸಮಸ್ಯೆ ಬಂದರೆ ಬಗೆಹರಿಸಿಕೊಂಡು ಮುಂದೆ ಹೋಗುತ್ತೀರೆಂಬ ನಂಬಿಕೆಯಿಂದ ನಾಯಕತ್ವವನ್ನು ನೀಡಿದ್ದು, ಅದೇ ನಂಬಿಕೆಯ ಆಧಾರದ ಮೇಲೆ ನಿಮ್ಮನ್ನು ಈ ದಿನ ಇಲ್ಲಿ ಕರೆಸಿರುತ್ತೇವೆ. ಆ ನಂಬಿಕೆಯನ್ನು ನೀವೆಲ್ಲರೂ ಉಳಿಸಿಕೊಳ್ಳುತ್ತೀರೆಂಬ ಭರವಸೆ ನಮಗಿದೆ.

♦️ ನಾವು ಪ್ರತೀ ಸಭೆಗಳಲ್ಲಿ ಹೇಳುವ ಹಾಗೆ ನಿಮಗೆ ಯಾವುದೇ ನಿರ್ಬಂಧಗಳನ್ನು ಹಾಕುವುದು ನಮ್ಮ ಉದ್ದೇಶ ಅಲ್ಲ , ಬದಲಾಗಿ ಸಾಮೂಹಿಕವಾಗಿ ಹಬ್ಬವನ್ನು ಆಚರಣೆ ಮಾಡುವಾಗ ನಿಮ್ಮ ಆಚರಣೆಗಳಿಗೆ ಸಹಕಾರ ನೀಡಲು ನಾವು ಕೆಲವು ಸೂಚನೆಗಳನ್ನು ನೀಡುತ್ತೇವೆ, ಅದನ್ನು ನಿಬಂಧನೆಗಳೆಂದು ತೀರ್ಮಾನ ಮಾಡಬೇಡಿ, ಬದಲಾಗಿ ಸಹಕಾರವೆಂದು ಪರಿಗಣಿಸಿ, ಆದ್ದರಿಂದ ಇಲ್ಲಿ ಯಾರೆಲ್ಲಾ ಬಂದಿದ್ದೀರಿ ಅವರಿಗೆ ಅವರದ್ದೇ ಆದ ಕೆಲವು ಜವಾಬ್ದಾರಿಗಳು ಇರುತ್ತದೆ.
♦️ ಪ್ರಮುಖವಾಗಿ ಈದ್ -ಮಿಲಾದ್ ನಲ್ಲಿ ನಾವು ನೋಡಿ ಗಮನಿಸಿರೋದು ಅಂದ್ರೆ ನಮ್ಮ ಅಧಿಕಾರಿಗಳು ಹೇಳುವ ಪ್ರಕಾರ Rally ಗಳು ಪ್ರತ್ಯೇಕವಾಗಿ ಬರುತ್ತವೆ . ಅದೇ ರೀತಿ ಗಣೇಶ ಮೆರವಣಿಗೆಯಲ್ಲೂ ಕೂಡ ಹಾಗೆ ಆಗುತ್ತೆ. ಆದ್ದರಿಂದ ಈ ಬಾರಿ ಪ್ರತೀ ಮೆರವಣಿಗೆಗೂ ಸಿಬ್ಬಂದಿಗಳ ಇರುವ ಹಾಗೆ ಯೋಜನೆಯನ್ನು ಮಾಡಿಕೊಂಡಿರುತ್ತೇವೆ.

♦️ ಹಿಂದೂ ಮಹಾಸಭಾ ಗಣಪತಿಗೆ ರಾಜ್ಯದ ಎಲ್ಲಾ ಕಡೆಯಿಂದ ಸಾರ್ವಜನಿಕರು ಬರುತ್ತಾರೆ. ಜನರು ಹೆಚ್ಚಾದಂತೆ ಅದರಿಂದಲೂ ಸಹಾ ಕೆಲವು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಮೆರೆವಣಿಗೆ ಸಮಯದಲ್ಲಿ ಕೆಲವರು ಕಟ್ಟಡಗಳ ಮೇಲೆ ಹತ್ತುವುದು, ಇಳಿಯುವುದು ಮಾಡುತ್ತಾ ಇರುತ್ತಾರೆ ಆ ಸಮಯದಲ್ಲಿ ನಮ್ಮ ಪೊಲೀಸ್ ಇಲಾಖೆಯಿಂದ ಮಫ್ತಿ ಸಿಬ್ಬಂದಿಗಳ ನಿಯೋಜನೆ ಮಾಡಿರುತ್ತೇವೆ. ಅಂತಹ ಸಮಯದಲ್ಲಿ ನೀವು ಅಂತವರಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಬೇಕಾಗುತ್ತದೆ .
♦️ ಅಂತಹ ಸಮಯದಲ್ಲಿ ನಮ್ಮ ಇಲಾಖೆಯವರು ಬಂದು ವಾಗ್ವಾದ ಮಾಡುವುದು ಸರಿ ಎನ್ನಿಸುವುದಿಲ್ಲ, ಆದ್ದರಿಂದ ನೀವುಗಳು ಸಹಾ ಮುಂದಾಳತ್ವವನ್ನು ವಹಿಸಕೊಳ್ಳಬೇಕಾಗುತ್ತದೆ.
♦️ ಈದ್-ಮಿಲಾದ್ ಕಮಿಟಿಯಿಂದ ಆಗಿರಬಹುದು ಅಥವಾ ಗಣಪತಿ ಮಂಡಳಿಯಿಂದ ಆಗಿರಬಹುದು ಪ್ರತೀ ಬಾರಿ 5 ರಿಂದ 6 ಜನ ಸ್ವಯಂಸೇವಕರನ್ನು ನೀವು ನಿಯೋಜನೆ ಮಾಡಿ ಮೆರವಣಿಗೆಗೂ 1 ಗಂಟೆ ಮುಂಚಿತವಾಗಿ ನಮ್ಮ ಅಧಿಕಾರಿಗಳ ಮುಂದೆ ಹಾಜರುಪಡಿಸಿದರೆ ಅವರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಲು ಅನುಕೂಲವಾಗುತ್ತದೆ.
♦️ ತಾವು ಆರ್ಗನೈಸ್ ಮಾಡುವ ಪಬ್ಲಿಕ್ ಅಡ್ರೆಸ್ ಸಿಸ್ಟಮ್ ( ಮೈಕ್ ಸಿಸ್ಟಮ್) ನಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲದಂತೆ ನೋಡಿಕೊಳ್ಳಬೇಕು, ನಮ್ಮ ಇಲಾಖೆಯ ಅಧಿಕಾರಿಗಳೂ ಸಹ ಅದನ್ನು ಬಳಕೆ ಮಾಡಿಕೊಳ್ಳುವ ಹಾಗೆ ಇರಬೇಕು ಹಾಗೂ ಈ ಬಾರಿ ಕಡ್ಡಾಯವಾಗಿ ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಅನ್ನು ಅಳವಡಿಕೆ ಮಾಡಿಕೊಳ್ಳಬೇಕು , ನಾವು ಕೊಡುವ ಸಲಹೆ ಸೂಚನೆಗಳು 200 ರಿಂದ 300 ಮೀಟರ್ ವರೆಗೂ ಕೇಳಿಸುವ ಹಾಗೆ ಇರಬೇಕು.
♦️ ಕಳೆದ ವರ್ಷ ನೀಡಿದ ಹಾಗೆ ಈ ವರ್ಷವೂ ಸಹ ಮೆರವಣಿಗೆ ಸಮಯದಲ್ಲಿ ಸಮೂಹ ನಿರ್ವಹಣೆ, ಸರಗಳ್ಳತನ ಹಾಗೂ ಸ್ವತ್ತು ಕಳವು ಪ್ರಕರಣಗಳಿಗೆ ಸಂಬಂಧಿಸಿದ ಹಾಗೆ ಜಾಗೃತಿ ನೀಡುವಂತಹ ಸಂದೇಶಗಳನ್ನು ಕೊಡಲಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಯಿಂದ ಅದನ್ನು ಕೂಡ ನೀವು ಪ್ರಚಾರ ಮಾಡಿ.
♦️ ಪೊಲೀಸ್ ಇಲಾಖೆಯು ಇಷ್ಟೆಲ್ಲಾ ಮುಂಜಾಗ್ರತೆಯನ್ನು ವಹಿಸಲು ಮೂಲ ಕಾರಣವೇನೆಂದರೆ ಹಬ್ಬಕ್ಕೆ ಯಾವುದೇ ರೀತಿಯ ತೊಂದರೆಯಾಗದೇ, ಎಲ್ಲಾ ಸುಸೂತ್ರವಾಗಿ ನಡೆದುಕೊಂಡು ಹೋಗಲಿ ಎಂದು ಕ್ರಮ ಕೈಗೊಳ್ಳುವುದಾಗಿರುತ್ತದೆ . ಪೊಲೀಸ್ ಇಲಾಖೆಯಿಂದ ಈಗಾಗಲೇ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿರುತ್ತೇವೆ, ಹಾಗೆಯೇ ನೀವು ಕೂಡ ನಮ್ಮ ಇಲಾಖೆಗೆ ಸಹಕಾರ ನೀಡಿರಿ.

♦️ ಕಳೆದ ಬಾರಿಯ ಹಾಗೆಯೇ ಈ ಬಾರಿಯೂ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳು ಒಂದೇ ಬಾರಿಗೆ ಬಂದಿದ್ದು, ನಾವು ಸಾಮರಸ್ಯವನ್ನು ಸಾರಲು ಇದು ಸದಾವಕಾಶವನ್ನು ನೀಡಿರುತ್ತದೆ. ನಾಳೆಯೂ ಕೂಡ ಜಿಲ್ಲಾ ಮಟ್ಟದ ಸಭೆ ನಡೆಯಲಿದ್ದು, ಆ ಸಂದರ್ಭದಲ್ಲಿ ನೀವು ಸಭೆಗೆ ಹಾಜರಾಗಿ ತಮ್ಮ ಅಹವಾಲು ಅಥವಾ ಪ್ರಶ್ನೆಗಳಿದ್ದರೆ, ನಿಮ್ಮ ಸಮಸ್ಯೆಗಳಿದ್ದರೆ ತಿಳಿಸಿ.
♦️ಗಣೇಶ ಹಾಗೂ ಈದ್ ಮಿಲಾದ್ ಮೆರವಣಿಗೆಯ ಸಂಬಂಧ ರಾಜ್ಯದ ವಿವಿಧ ಭಾಗಗಳಿಂದ ಅಧಿಕಾರಿ ಹಾಗೂ ಸಿಬ್ಬಂಧಿಗಳನ್ನು ನೇಮಕ ಮಾಡಲಿದ್ದು , ಅವಶ್ಯಕವಾದ ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದು, ಹಬ್ಬವನ್ನು ಯಾವುದೇ ತೊಂದರೆ ಇಲ್ಲದೇ ಸುಲಭವಾಗಿ ನಡೆಸಿಕೊಂಡು ಹೋಗಲು ಬೇಕಾದ ಸಲಹೆ ಸೂಚನೆಗಳನ್ನು ನೀಡಿರುತ್ತದೆ.
ಈ ಸಂದರ್ಭದಲ್ಲಿ ಕಾರಿಯಪ್ಪ ಎ. ಜಿ. ಹೆಚ್ಚುವರಿ ಅಧೀಕ್ಷಕರು, – 1 ಶಿವಮೊಗ್ಗ ಜಿಲ್ಲೆ. ರಮೇಶ್ ಕುಮಾರ್ ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, – 2 ಶಿವಮೊಗ್ಗ ಜಿಲ್ಲೆ. ಜಿಲ್ಲೆಯ ಎಲ್ಲಾ ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ನಿರೀಕ್ಷಕರು ಹಾಗೂ ಪ್ರಮುಖರು, ಸಾರ್ವಜನಿಕರುಗಳು ಉಪಸ್ಥಿತರಿದ್ದರು.



