ಶ್ರೀನಗರ : ಮೂವತ್ತೈದು ವರ್ಷಗಳ ನಂತರ ಸರಳಾ ಭಟ್ ಹತ್ಯೆ ಕೇಸ್ ಮರು ತನಿಖೆ.!! 8 ಕಡೆ ದಾಳಿ ನಡೆಸಿದ ತನಿಖಾ ದಳ.
ಸರಳಾ ಭಟ್ : 30 ವರ್ಷಗಳ ನಂತರ ಸರಳಾ ಭಟ್ ಹತ್ಯೆ ಕೇಸ್ ಮರು ತನಿಖೆ! 8 ಕಡೆ ದಾಳಿ ನಡೆಸಿದ ತನಿಖಾ ತಂಡ ಮೂರುವರೆ ದಶಕಗಳ ಹಿಂದೆ ಹತ್ಯೆಗೀಡಾದ ಕಾಶ್ಮೀರಿ ಪಂಡಿತ ಮಹಿಳೆ ಸರಳಾ ಭಟ್ ಅವರ ಹತ್ಯೆಯ ತನಿಖೆಯನ್ನು ಪುನರಾರಂಭಿಸಲಾಗಿದೆ. 35 ವರ್ಷಗಳ ನಂತರ ಸರಳಾ ಭಟ್ ಅವರ ಕೊಲೆ ಪ್ರಕರಣವನ್ನು ರಾಜ್ಯ ತನಿಖಾ ಸಂಸ್ಥೆ ಮರು ತನಿಖೆ ನಡೆಸುತ್ತಿದೆ…..

news.ashwasurya.in

ಅಶ್ವಸೂರ್ಯ/ಶ್ರೀನಗರ : ಮೂವತ್ತೈದು ವರ್ಷದ ಸರಳಾ ಭಟ್ ಪ್ರಕರಣ ಮರು ತನಿಖೆ.!ದೇಶವನ್ನೇ ಬೆಚ್ಚಿ ಬಿಳಿಸಿದ ಮೂರುವರೆ ದಶಕಗಳ ಹಿಂದೆ ಹತ್ಯೆಗೀಡಾದ ಕಾಶ್ಮೀರಿ ಪಂಡಿತ ಮಹಿಳೆ ಸರಳಾ ಭಟ್ ಅವರ ಹತ್ಯೆಯ ತನಿಖೆಯನ್ನು ಮತ್ತೆ ಪುನರಾರಂಭಿಸಲಾಗಿದೆಮೂವತ್ತೈದು ವರ್ಷಗಳ ನಂತರ ಸರಳಾ ಭಟ್ ಅವರ ಕೊಲೆ ಪ್ರಕರಣವನ್ನು ರಾಜ್ಯ ತನಿಖಾ ಸಂಸ್ಥೆ ಮರು ತನಿಖೆ ನಡೆಸುತ್ತಿದ್ದು ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ತನಿಖಾ ಸಂಸ್ಥೆ ಶ್ರೀನಗರದಲ್ಲಿ ಎಂಟು ಸ್ಥಳಗಳಲ್ಲಿ ದಾಳಿ ನಡೆಸಿದೆ. 1990 ರ ದಶಕದ ಆರಂಭದಲ್ಲಿ ನಡೆದ ಕಾಶ್ಮೀರಿ ಪಂಡಿತೆ ಹತ್ಯೆ ಪ್ರಕರಣದ ತನಿಖೆಯನ್ನು ಪುನರಾರಂಭಿಸಲು ಆಡಳಿತ ನಿರ್ಧರಿಸಿದ ನಂತರ ಸರಳಾ ಭಟ್ ಪ್ರಕರಣವನ್ನು ಮರು ತನಿಖೆ ಮಾಡಲು ಮುಂದಾಗಿದೆ.
35 ವರ್ಷಗಳ ಹಿಂದೆ, 1990ರ ಏಪ್ರಿಲ್‌ನಲ್ಲಿ ಶ್ರೀನಗರದ SKIMS ಆಸ್ಪತ್ರೆಯಲ್ಲಿ ಕಾಶ್ಮೀರಿ ಪಂಡಿತ ಮಹಿಳೆ ಸರಳಾ ಭಟ್‌ರವರ ಅಪಹರಣ ಮತ್ತು ಭೀಕರ ಹತ್ಯೆ ನಡೆದಿತ್ತು.

ಈಗ ಈ ಪ್ರಕರಣದ ಮರು ತನಿಖೆಯನ್ನು ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ (SIA) ತನಿಖೆ ಕೈಗೇತ್ತಿಕೊಂಡಿದ್ದು, ಶ್ರೀನಗರದ ಎಂಟು ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದೆ ಎಂದು ವರದಿಯಾಗಿದೆ. ಈ ದಾಳಿಗಳು ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ (JKLF) ಸೇರಿದಂತೆ ಭಯೋತ್ಪಾದಕ ಗುಂಪುಗಳೊಂದಿಗೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ.
ಪ್ರಕರಣದ ಹಿನ್ನೆಲೆ :
ಸರಳಾ ಭಟ್, 27 ವರ್ಷದ ಕಾಶ್ಮೀರಿ ಪಂಡಿತ ಮಹಿಳೆಯಾಗಿದ್ದು, ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 1990ರ ಏಪ್ರಿಲ್ 19ರಂದು SKIMS ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ JKLF ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿ ದಾರುಣವಾಗಿ ಹತ್ಯೆಗೀಡಾದರು. ಈ ಘಟನೆಯು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲಿನ ದಾಳಿಗಳ ಒಂದು ಭಾಗವಾಗಿತ್ತು. 35 ವರ್ಷಗಳ ನಂತರ, ಈ ಪ್ರಕರಣದ ತನಿಖೆಯನ್ನು SIA ಮರು ಆರಂಭಿಸಿದೆ, ಇದು ಸರಳಾ ಭಟ್ ಹತ್ಯೆಗೆ ನ್ಯಾಯ ಸಿಗುವ ಹೊಸ ಭರವಸೆಯನ್ನು ಹುಟ್ಟುಹಾಕಿದೆ.

ಸರಳಾ ಭಟ್ ಪ್ರಕರಣ ಮರು ತನಿಖೆ.! ಸರಳಾ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ
ದಾಳಿಯ ವಿವರಗಳು.?
SIA ತಂಡವು ಶ್ರೀನಗರದ ಎಂಟು ಸ್ಥಳಗಳಲ್ಲಿ, JKLF ಅಧ್ಯಕ್ಷರ ಮನೆ ಸೇರಿದಂತೆ,ಇನ್ನಿತರವಸ್ಥಳದಲ್ಲಿ ದಾಳಿಗಳನ್ನು ನಡೆಸಿದೆ ಎಂದು ವರದಿಯಾಗಿದೆ. ಈ ದಾಳಿಗಳಲ್ಲಿ ಯಾವುದೇ ಬಂಧನ ಅಥವಾ ವಸ್ತು ವಶಪಡಿಸಿಕೊಳ್ಳಲಿಲ್ಲವೆಂದು SIA ತಿಳಿಸಿದೆ. ಆದರೆ, ಈ ಕಾರ್ಯಾಚರಣೆಯು ಪ್ರಕರಣದಲ್ಲಿ ಹೊಸ ಸಾಕ್ಷ್ಯಗಳನ್ನು ಕಂಡುಹಿಡಿಯುವ ಗುರಿಯನ್ನು ಹೊಂದಿದೆ.

ಹತ್ಯೆಯ ವಿವರ :
1990ರ ಏಪ್ರಿಲ್ 18ರಂದು, ಸರಳಾ ಭಟ್ ಅವರನ್ನು SKIMSನ ಹಬ್ಬಾ ಖಾತೂನ್ ಹಾಸ್ಟೆಲ್‌ನಿಂದ JKLF ಉಗ್ರಗಾಮಿಗಳು ಅಪಹರಿಸಿದರು. ಅವರನ್ನು “ಪೊಲೀಸ್ ಮಾಹಿತಿದಾರ” ಎಂದು ಆರೋಪಿಸಲಾಯಿತು. ಏಪ್ರಿಲ್ 19ರ ಬೆಳಗ್ಗೆ, ಶ್ರೀನಗರದ ಉಮರ್ ಕಾಲೊನಿ, ಮಲ್ಲಾಬಾಗ್‌ನಲ್ಲಿ ಅವರ ಶವವನ್ನು ಕಂಡುಹಿಡಿಯಲಾಯಿತು. ಶವದ ಮೇಲೆ ಗುಂಡಿನ ಗಾಯಗಳಿದ್ದವು, ಮತ್ತು ಕೆಲವು ವರದಿಗಳ ಪ್ರಕಾರ, ಅವರನ್ನು ಹತ್ಯೆಗೆ ಮೊದಲು ಚಿತ್ರಹಿಂಸೆಗೊಳಪಡಿಸಲಾಗಿತ್ತು ಮತ್ತು ಗುಂಡಿನ ದಾಳಿಗೆ ಒಳಗಾಗಿದ್ದರು ಎನ್ನಲಾಗಿದೆ.
35 ವರ್ಷಗಳ ನಂತರ ಮರು ತನಿಖೆ
2023ರಲ್ಲಿ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಆಡಳಿತವು ಕಾಶ್ಮೀರಿ ಪಂಡಿತರ ವಿರುದ್ಧದ ಐತಿಹಾಸಿಕ ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದ ಕೆಲವು ಪ್ರಕರಣಗಳನ್ನು ಮರು ತೆರೆಯಲು ನಿರ್ಧರಿಸಿತು. ಇದರ ಭಾಗವಾಗಿ, ಸರಳಾ ಭಟ್‌ರ ಹತ್ಯೆ ಪ್ರಕರಣವನ್ನು SIAಗೆ ವರ್ಗಾಯಿಸಲಾಯಿತು. ಆಗಸ್ಟ್ 12, 2025ರಂದು, SIA ಶ್ರೀನಗರದ ಎಂಟು ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿತು, ಇದರಲ್ಲಿ JKLFನ ಮಾಜಿ ನಾಯಕ ಪೀರ್ ನೂರುಲ್ ಮತ್ತು ಯಾಸಿನ್ ಮಲಿಕ್‌ನ ಮನೆಗಳು ಸೇರಿವೆ. ಯಾಸಿನ್ ಮಲಿಕ್, JKLFನ ಮಾಜಿ ಮುಖ್ಯಸ್ಥ, ಈಗ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.



