
ಉಡುಪಿ : ಮಚ್ಚಿನೇಟಿಗೆ ಮಲಗಿದಲ್ಲೆ ಮಸಣ ಸೇರಿದ ಯುವಕ.!ಮಡದಿ ಮಗು ಜೊತೆ ಮಲಗಿದ್ದರು ಬಿಡಲಿಲ್ಲ ಹಂತಕರು.!

news.ashwasurya.in
ಅಶ್ವಸೂರ್ಯ/ಉಡುಪಿ: ಉಡುಪಿ ತಾಲ್ಲೂಕಿನ ಪುತ್ತೂರಿನಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಹಂತಕರ ಗ್ಯಾಂಗ್ ವಿನಯ್ ದೇವಾಡಿಗ (35) ಎಂಬ ವ್ಯಕ್ತಿಯನ್ನು ಲಾಂಗ್ ಮಚ್ಚುಗಳನ್ನು ಮನಬಂದಂತೆ ಬಿಸಿ ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ.
ತಡರಾತ್ರಿ 11 ಗಂಟೆ ಸುಮಾರಿಗೆ ಮೂವರು ದುಷ್ಕರ್ಮಿಗಳ ತಂಡ ವಿನಯ್ ದೇವಾಡಿಗನ ಮನೆಗೆ ನುಗ್ಗಿದ್ದಾರೆ ಎಂದು ತಿಳಿದುಬಂದಿದೆ.!?
ಏಕಾಏಕಿ ರೂಮಿಗೆ ನುಗ್ಗಿದ ಹಂತಕರು :
ರಾತ್ರಿ ಬಾಗಿಲು ಬಡಿದ ಹಂತಕರ ಗ್ಯಾಂಗ್ ಮೊದಲು ಮನೆಯಲ್ಲಿ ವಿನಯ್ ಇದ್ದಾನಾ ಎಂದು ವಿಚಾರಿಸಿದ್ದರಂತೆ. ಸ್ನೇಹಿತರು ಇರಬಹುದು ಎಂದು ಮನೆಯವರು ಒಳಗೆ ಕರೆದುಕೊಂಡಿದ್ದಾರೆ. ಬಳಿಕ ಒಳಗೆ ಬಂದವರೇ ಏಕಾಏಕಿ ವಿನಯ್ ರೂಮಿಗೆ ನುಗ್ಗಿದ್ದಾರೆ.ರೂಮಿನಲ್ಲಿ ಮಲಗಿದ್ದ ವಿನಯ್ ಮೇಲೆ ಲಾಂಗ್‌ನಿಂದ ಮನಬಂದಂತೆ ಕೊಚ್ಚಿ ಕೊಲೆಮಾಡಿದ್ದಾರೆ.ಅದೇನು ಗ್ರಹಚಾರವೋ ತನ್ನದೆ
ಮನೆಯಲ್ಲಿ ಮಡದಿ ಮತ್ತು ಮಗುವಿನ ಜೊತೆ ಮಲಗಿದ್ದ ವಿನಯ್ ರೂಮಿಗೆ ಮೂವರು ಹಂತಕರು ನುಗ್ಗಿದ್ದಾರೆ. ಕೈಯಲ್ಲಿ ಹಿಡಿದಿದ್ದ ತಲವಾರ್ ಅನ್ನು ಮನಬಂದಂತೆ ಬೀಸಿದ್ದಾರೆ.ಮಲಗಿದ್ದ ವಿನಯ್ ಮೇಲೆ ಎಲ್ಲೆಂದರಲ್ಲಿ ಲಾಂಗ್ ಬಿಸಿ ಕೊಚ್ಚಿದ್ದಾರೆ. ವಿನಯ್ ಮಲಗಿದಲ್ಲೆ ಲಾಂಗಿನೇಟಿಗೆ ಮರಣ ಸೇರಿದ್ದಾನೆ ಎನ್ನಲಾಗುತ್ತಿದೆ.!
ವಿನಯ್ ಹೆಂಡತಿಗೂ ಬಿತ್ತಾ ಹಂತಕರ ಲಾಂಗಿನೇಟು.?
ಪತಿಯ ಪ್ರಾಣ ಉಳಿಸಿಕೊಳ್ಳಲು ದುಷ್ಕರ್ಮಿಗಳ ಜೊತೆ ವಿನಯ್ ಪತ್ನಿ ಹೋರಾಡಿದ್ದಾರೆ ಈ ವೇಳೆ ಆಕೆಗೂ ಗಂಭೀರ ಗಾಯಗಳಾಗಿವೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಮಹಜರು ನಡೆಸಿ ಹಂತಕರನ್ನು ಹೆಡೆಮುರಿಕಟ್ಟಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಹತ್ಯೆ ಯಾವ ಕಾರಣಕ್ಕೆ ನೆಡೆದಿದೆ ಎನ್ನುವುದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.



