ಧರ್ಮಸ್ಥಳ ‘ರಹಸ್ಯ ಸಮಾಧಿ’ಪ್ರಕರಣ ಧರ್ಮ ರಾಜಕಾರಣ ಎಂದ ಬಿಜೆಪಿಗೆ ಡಿಕೆಶಿ, ಪರಮೇಶ್ವರ್ ತಿರುಗೇಟು.
news.ashwasurya.in
ಅಶ್ವಸೂರ್ಯ/ಧರ್ಮಸ್ಥಳ: ಪೊಲೀಸ್ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ
ಧರ್ಮಸ್ಥಳ ಪ್ರಕರಣ ಕುರಿತು ತನಿಖೆಗೆ ಸರ್ಕಾರ SIT ರಚಿಸಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವರ ಭೇಟಿಗೆ ಆಗಮಿಸಿದ ಪ್ರಣವ್ ಮೊಹಂತಿ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಚರ್ಚೆಯ ಬಳಿಕ ಮಾತನಾಡಿದ ಗೃಹ ಸಚಿವರಾದ ಪರಮೇಶ್ವರ್ ಎಸ್‌ಐಟಿ ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿ ಕೊಟ್ಟಿದ್ದೇವೆ. ಅವರೆಲ್ಲಾ ಜವಾಬ್ದಾರಿ ಸ್ಥಾನದಲ್ಲಿರೋ ಹಿರಿಯ ಅಧಿಕಾರಿಗಳು ಅವರವರ ಜವಾಬ್ದಾರಿಯನ್ನು ನಿಭಾಯಿಸ್ತಾರೆ. ಯಾರೂ ಹಿಂದೆ ಸರಿಯುವ ಬಗ್ಗೆ ಮಾತನಾಡಿಲ್ಲ. ನನಗಾಗಲಿ, ಸರ್ಕಾರಕ್ಕಾಗಲಿ ಆ ಬಗ್ಗೆ ಏನೂ ಹೇಳಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಧರ್ಮಸ್ಥಳದ ಕೇಸ್ ಬಗ್ಗೆ ಜನ ಸಮುದಾಯ, ಪ್ರಗತಿಪರ ಚಿಂತಕರು ಸೇರಿ ಹಲವರು ತನಿಖೆ ಮಾಡಬೇಕು ಅಂತ ಒತ್ತಾಯ ಮಾಡಿದ್ರು. ಹಲವರು ದೂರು ಕೂಡ ಕೊಟ್ಟಿದ್ದಾರೆ. ತನಿಖೆ ಮಾಡಿದ್ರೇನೆ ಆಗಿದೆಯ್ಯೋ ಆಗಿಲ್ವೋ ಅನ್ನೋದು ಗೊತ್ತಾಗೋದು. ಹೀಗಾಗಿ ತನಿಖೆಗೆ ಆದೇಶ ಮಾಡಿದ್ದೇವೆ. ಏನೂ ಆಗಿಲ್ಲ ಅಂದ್ರೆ ಯಡಿಯೂರಪ್ಪ ಅವ್ರು ಹೇಳಿದ ಹಾಗೇ ವರದಿ ಬರಲಿದೆ ಎಂದು ಪರಮೇಶ್ವರ್ ಹೇಳಿದ್ರು.
ಪ್ರಣವ್ ಮೊಹಂತಿ ನನಗೆ ಜವಾಬ್ದಾರಿ ಕೊಟ್ಟಿದ್ದೀರಾ ನಾನು ಜವಾಬ್ದಾರಿ ಹೊತ್ತು ತನಿಖೆ ಮಾಡ್ತೀನಿ ಅಂತ ಹೇಳಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರೋ ಹಿರಿಯ ಅಧಿಕಾರಿಗಳು ತನಿಖೆ ಮಾಡಲಿದ್ದಾರೆ ಎಂದು ಪರಮೇಶ್ವರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೋಮ್ ಮಿನಿಸ್ಟರ್ ಹ್ಯಾಂಡಲ್ ಮಾಡ್ತಾರೆ’
ಧರ್ಮಸ್ಥಳ ಕೇಸ್ SIT ರಚನೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಮಾತಾಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ಇದನ್ನ ಹೋಮ್ ಮಿನಿಸ್ಟರ್ ಹ್ಯಾಂಡಲ್ ಮಾಡ್ತಿದ್ದಾರೆ. ಹಿರಿಯ ಅಧಿಕಾರಿಗಳಿಗೆ ತನಿಖೆಗೆ ಕೊಟ್ಟಿದ್ದಾರೆ. ಅವರು ತನಿಖೆಯನ್ನ ಮಾಡ್ತಾರೆ ಎಂದು ಡಿಸಿಎಂ ಹೇಳಿದ್ದಾರೆ.

ಸತ್ಯಾಸತ್ಯತೆ ಗೊತ್ತಾಗಬೇಕು’
ಧರ್ಮ ರಾಜಕಾರಣ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್ ಅವ್ರು ಬಿಜೆಪಿಯವರು ಏನು ಬೇಕಾದ್ರೂ ಹೇಳಲಿ. ಕೋರ್ಟ್ಗೆ ಯಾರೋ ಹೇಳಿಕೆ ಕೊಟ್ಟಿದ್ದರು. ಅದರ ಆಧಾರದ ಮೇಲೆ ತನಿಖೆಯಾಗ್ತಿದೆ. ಸತ್ಯಾಸತ್ಯತೆ ಏನು ಅನ್ನೋದು ಗೊತ್ತಾಗುತ್ತೆ ಎಂದು ಡಿಕೆಶಿ ಹೇಳಿದ್ದಾರೆ.
ಮೀಡಿಯಾದವರು ದೊಡ್ಡದಾಗಿ ಮಾಡ್ತಿದ್ದೀರಾ?ನಿಮಗೂ ಗೌರವ ಕೊಡಬೇಕಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಪಾತ್ರ ಹೆಚ್ಚಿದೆ. ನಿಮ್ಮ ಮಾತು ಗೌರವಿಸಬೇಕು. ನಿಮ್ಮ ಹಿತವಚನವನ್ನು ಕೇಳಬೇಕಲ್ವಾ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.


