Headlines

ಧರ್ಮಸ್ಥಳ: ನೇತ್ರಾವತಿ ಸ್ನಾನಘಟ್ಟದ ಸಮೀಪ ವಕೀಲರ ಜೋತೆಗೆ ಬಂದ ಸಾಕ್ಷಿ ದೂರುದಾರ..!

ಧರ್ಮಸ್ಥಳ: ನೇತ್ರಾವತಿ ಸ್ನಾನಘಟ್ಟದ ಸಮೀಪ ವಕೀಲರ ಜೋತೆಗೆ ಬಂದ ಸಾಕ್ಷಿ ದೂರುದಾರ..!

news.ashwasurya.in

ಅಶ್ವಸೂರ್ಯ/ಧರ್ಮಸ್ಥಳ : “ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದಿದ್ದ ದೂರುದಾರ”
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪ ಬಂದಿದ್ದಾರೆ ಎನ್ನಲಾಗಿದೆ.!
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ನ್ಯಾಯಾಲಯ ದಲ್ಲಿ ಹೇಳಿಕೆ ನೀಡಿದ್ದ ಸಾಕ್ಷಿ ದೂರುದಾರ ಬುಧವಾರ ತಾನು ಹೂತು ಹಾಕಿದ್ದ ಮೃತದೇಹಗಳ ಬಗ್ಗೆ ಮಾಹಿತಿ ನೀಡಲು ತನ್ನ ವಕೀಲರೊಂದಿಗೆ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪ ಬಂದಿರುವುದಾಗಿ ತಿಳಿದುಬಂದಿದೆ.

ಬುಧವಾರ ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಬಂದ ಇವರು ನಾಲ್ಕು ಗಂಟೆಯ ಸುಮಾರಿಗೆ ಹಿಂತಿರುಗಿ ಹೋಗಿದ್ದಾರೆ ಎನ್ನಲಾಗಿದ್ದು ಕಾರಿನಲ್ಲಿದ್ದ ವಕೀಲರು, ಸಾಕ್ಷಿ ದೂರುದಾರ ಕಾರಿನಿಂದ ಇಳಿಯದೆ ಮುಚ್ಚಿದ್ದ ವಾಹನದಲ್ಲಿಯೇ ಸುಮಾರು ಒಂದು ಗಂಟೆಯ ಸಮಯ ಕಳೆದಿದ್ದಾರೆ ಎಂದು ತಿಳಿದುಬಂದಿದೆ.
ಸಾಕ್ಷಿ ದೂರುದಾರ ಹಾಗೂ ವಕೀಲರು ಒಂದು ಗಂಟೆಯ ಕಾಲ ಸದ್ರಿ ಸ್ಥಳದಲ್ಲಿ ಇದ್ದರೂ ಯಾವುದೇ ಪೊಲೀಸ್ ಅಧಿಕಾರಿಗಳು ಈ ಸ್ಥಳಕ್ಕೆ ಬರಲಿಲ್ಲ. ಪ್ರಕರಣದ ತನಿಖೆಯ ಜವಾಬ್ದಾರಿ ಇರುವ ಬೆಳ್ತಂಗಡಿ ಗ್ರಾಮೀಣ ವೃತ್ತ ನಿರೀಕ್ಷಕರು ಹಾಗೂ ಪಿ.ಎಸ್.ಐ ಅವರು ಧರ್ಮಸ್ಥಳ ಠಾಣೆಯಲ್ಲಿ ಬೆಳಗ್ಗಿನಿಂದಲೂ ಇದ್ದು ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರಂತೆ.!
ನೇತ್ರಾವತಿ ಸ್ನಾನಘಟ್ಟದವರೆಗೆ ಬಂದ ಸಾಕ್ಷಿ ದೂರುದಾರ ಮತ್ತು ವಕೀಲರ ತಂಡ ಧರ್ಮಸ್ಥಳ ಠಾಣೆಗೂ ಭೇಟಿ ನೀಡಲಿಲ್ಲ ಎಂದು ತಿಳಿದುಬಂದಿದೆ.
ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಶವಗಳನ್ನು ಹೂತು ಹಾಕಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಸಾಕ್ಷಿ ದೂರುದಾರ ಜು.11ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದು, ಅಲ್ಲದೆ ತಾನು ಹೂತು ಹಾಕಿದ್ದ ಮೃತದೇಹವೊಂದನ್ನು ಹೊರತೆಗೆದಿರುವುದಾಗಿ ಹೇಳಿದ್ದು ಅದರ ಕಳೇಬರವನ್ನು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರಂತೆ.!?

Leave a Reply

Your email address will not be published. Required fields are marked *

Optimized by Optimole
error: Content is protected !!