
ಅಹಮದಾಬಾದ್ : ತಾಯಿ ಮುಂದೆಯೇ ಮಗಳನ್ನ ಕಾಲುವೆಗೆ ತಳ್ಳಿದ ನೀಚ ತಂದೆ.!
news.ashwasurya.in
ಅಶ್ವಸೂರ್ಯ/ಅಹಮದಾಬಾದ್ : ಭೋರ್ಗರೆದು ಹರಿಯುತ್ತಿದ್ದ ಕಾಲುವೆಗೆ ತನ್ನ ಏಳು ವರ್ಷದ ಮಗಳನ್ನು ತಳ್ಳಿ ಕೊಲೆ ಮಾಡಿದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿ ಮುಂದೆಯೇ ಮಗಳನ್ನು ಕೊಲೆಮಾಡಿದ್ದರು ಗಂಡನ ಬೆದರಿಕೆಗೆ ಹೆದರಿ ಮಗಳ ಹತ್ಯೆಯನ್ನು ಕಣ್ಣಾರೆ ನೋಡಿದ್ದರು ಸುಮ್ಮನಿದ್ದ ತಾಯಿ.! ಒಂದು ತಿಂಗಳ ಬಳಿಕ ಸತ್ಯ ಹೇಳಿ ಮಗಳ ಕೊಲೆಯ ಸತ್ಯವನ್ನು ಬಯಲು ಮಾಡಿದ್ದಾಳೆ.!
ಗಂಡ ಅಹಮಾದಾಬಾದ್‌ನ ನರ್ಮದಾ ಕಾಲುವೆಗೆ ಏಳು ವರ್ಷದ ಮಗಳನ್ನು ತಳ್ಳಿ ಕೊಲೆ ಮಾಡಿರುವ ತಂದೆಯನ್ನು ಪೊಲೀಸರು ಈಗ ಬಂಧಿಸಿದ್ದಾರೆ. ತಾಯಿ ಮುಂದೆಯೇ ಈ ಕೊಲೆ ನಡೆದಿದ್ದು, ಗಂಡ ಬೆದರಿಕೆ ಹಾಕಿದ್ದರಿಂದ ಮಹಿಳೆ ಸುಮ್ಮನಾಗಿದ್ದಳು. ವಿಜಯ್ ಸೋಲಂಕಿ ಬಂಧಿತ ತಂದೆ. ಏಳು ವರ್ಷದ ಭೂಮಿಕಾ ತಂದೆ ಕಾಲುವೆಗೆ ತಳ್ಳಿದ್ದರಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ಜೂನ್ 10ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರಂಭದಲ್ಲಿ ಮಗಳ ಸಾವಿನ ರಹಸ್ಯವನ್ನು ತಾಯಿ ಕೂಡ ಗಂಡನಿಗೆ ಹೆದರಿ ಮರೆಮಾಡಿದ್ದಳು. ಹೆಚ್ಚು ದಿನ ಸತ್ಯ ಮುಚ್ಚಿಡಲು ಸಾಧ್ಯವಾಗದ ಕಾರಣ ಪೊಲೀಸರಿಗೆ ಮಗಳ ಸಾವಿನ ಅಷ್ಟು ಸತ್ಯವನ್ನು ತಿಳಿಸಿದ್ದಾಳೆ. ವಿಜಯ್ ಸೋಲಂಕಿ ಮತ್ತು ಅಂಜನಾ ಸೋಲಂಕಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು. ವಿಜಯ್ ಸೋಲಂಕಿಗೆ ಗಂಡು ಮಗು ಬೇಕಿತ್ತು!

ಜೂನ್ 10ರಂದು ವಿಜಯ್ ಸೋಲಂಕಿ ಪತ್ನಿ ಮತ್ತು ಹಿರಿಯ ಮಗಳು ಭೂಮಿಕಾ ಜೊತೆ ದೇವಸ್ಥಾನಕ್ಕೆ ಹೋಗುತ್ತಿದ್ದವನು. ಇದೇ ಸಮಯದಲ್ಲಿ ಅಂಜನಾ ತನ್ನ ತವರು ಮನೆಗೆ ಹೋಗುವಂತೆ ಹೇಳಿದ್ದಾಳೆ. ಇದಕ್ಕೆ ಗಂಡ ವಿಜಯ್ ಸೋಲಂಕಿ ಒಪ್ಪಿಲ್ಲ. ಈ ಸಂಬಂಧ ವಿಜಯ್ ಸೋಲಂಕಿ ಮತ್ತು ಅಂಜನಾ ಮಧ್ಯೆ ರಸ್ತೆಯಲ್ಲೆ ಗಲಾಟೆಯಾಗಿದೆ. ಈ ವೇಳೆ ಮಾರ್ಗ ಮಧ್ಯೆ ವಿಜಯ್ ಸೋಲಂಕಿ ನರ್ಮದಾ ಕಾಲುವೆ ಬಳಿ ಬೈಕ್ ನಿಲ್ಲಿಸಿದ್ದಾನೆ. ನನಗೆ ಗಂಡು ಮಗು ಬೇಕಿತ್ತು. ಆದ್ರೆ ನೀನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಿಯಾ ಎಂದು ಹೇಳಿ ಏಳು ವರ್ಷದ ಮಗಳು ಭೂಮಿಕಾಳನ್ನು ತುಂಬಿ ಹರಿಯುತ್ತಿದ್ದ ನರ್ಮದಾ ಕಾಲುವೆಗೆ ತಳ್ಳಿದ್ದಾನೆ.! ನೀಚ ತಂದೆ
ಯಾರಿಗಾದರೂ ಮಗಳ ಸಾವಿನ ಸತ್ಯ ಹೇಳಿದರೆ ಹೆಂಡತಿಗೆ ವಿಚ್ಚೇದನ ಕೊಡುವುದಾಗಿ ಹೆದರಿಸಿದ್ದಾನೆ.
ಪೊಲೀಸರ ಮುಂದೆ ಕಾಲುವೆಯಲ್ಲಿ ಮಗಳು ಮೀನು ನೋಡಲು ಹೋದಾಗ ಆಯತಪ್ಪಿ ಕಾಲುವೆಗೆ ಬಿದ್ದಿದ್ದಾಳೆ ಎಂದು ವಿಜಯ್ ಸೋಲಂಕಿ ಮತ್ತು ಅಂಜನಾ ಹೇಳಿಕೆ ದಾಖಲಿಸಿದ್ದರು. ಪೊಲೀಸರು ಸಹ ಇದೇ ಹೇಳಿಕೆಯನ್ನು ಸತ್ಯ ಎಂದು ನಂಬಿದ್ದರು. ಸತ್ಯ ಹೇಳಿದ್ರೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದನು. ಇದರಿಂದ ಅಂಜನಾ ಸತ್ಯ ಹೇಳದೇ ಗಂಡ ಆಜ್ಞೆಯಂತೆ ಅಂದು ಪಾಲಿಸಿ ಸುಮ್ಮನಿದ್ದಳು.
ಮಗಳ ಸಾವಿನ ಸತ್ಯ ಬಚ್ಚಿಡಲಾಗದೆ ಒಂದು ತಿಂಗಳ ಬಳಿಕ ಮಗಳು ಭೂಮಿಕಾ ಸಾವಿನ ಅಷ್ಟು ಸತ್ಯವನ್ನು ಅಂಜನಾ ಪೊಲೀಸರ ಮತ್ತು ಮಾಧ್ಯಮದವರ ಎದುರು ಹೇಳಿದ್ದಾಳೆ. ಮೀನು ತೋರಿಸುವ ನೆಪದಲ್ಲಿ ಕಾಲುವೆ ಬಳಿ ಕರೆದುಕೊಂಡು ಹೋಗಿ ನನ್ನ ಮಗಳನ್ನು ಆಕೆಯ ತಂದೆಯೆ ತಳ್ಳಿ ಕೊಂದಿದ್ದಾನೆ ಎಂದು ಅಂಜನಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಅಂಜನಾ ಹೇಳಿಕೆ ಬೆನ್ನಲ್ಲೇ ಪೊಲೀಸರು ವಿಜಯ್ ಸೋಲಂಕಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.


