
ಕನ್ನಡದ ಹಿರಿಯ ನಟಿ ಪಂಚಭಾಷ ತಾರೆ ಬಿ. ಸರೋಜಾದೇವಿ ವಿಧಿವಶ.!
news.ashwasurya. in
ಕನ್ನಡ ಚಿತ್ರರಂಗದ ಅಭಿನಯ ಸರಸ್ವತಿ ಬಿ. ಸರೋಜಾದೇವಿ ನಿಧನರಾಗಿದ್ದಾರೆ.. ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಯಶವಂತಪುರದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು..
ಸ್ಯಾಂಡಲ್ವುಡ್ನ ಪ್ರಮುಖ ನಟಿ ಬಿ.ಸರೋಜಾದೇವಿ ಅವರನ್ನು ‘ಅಭಿನಯ ಸರಸ್ವತಿ’ ಎಂದು ಕರೆಯಲಾಗುತ್ತಿತ್ತು.. ಇವರು ಕನ್ನಡ, ತೆಲಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿಯೂ ನಟಿಸಿ ಖ್ಯಾತಿ ಪಡೆದದ್ದರು.. 1955 ರಿಂದ 1984ರವರೆಗೂ ಸತತ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು..
ನಟಿ ಸರೋಜಾದೇವಿ ಅವರಿಗೆ 1969ರಲ್ಲಿ ಪದ್ಮಶ್ರೀ ಪ್ರಶಸ್ತಿ 1992ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿತ್ತು.. ಇದಲ್ಲದೇ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನಿಂದ ಕಲೈಮಾಮಣಿ ಪ್ರಶಸ್ತಿಯೂ ದೊರಕಿದೆ..
ಕನ್ನಡ ಚಿತ್ರರಂಗಕ್ಕೆ ಸರೋಜಾದೇವಿ ಅವರ ಕೊಡುಗೆ ಅಪಾ ಎಂದರೇ ಅತಿಶಯೋಕ್ತಿಯಲ್ಲ.. ಈ ಮಹಾನ್ ನಟಿ ಕಿತ್ತೂರು ಚೆನ್ನಮ್ಮ, ಭಕ್ತ ಕನಕದಾಸ, ಬೆಟ್ಟದ ಹೂವು, ನಾಗಕನ್ಯೆ, ಮಹಾಕವಿ ಕಾಳಿದಾಸ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು.. ಅಲ್ಲದೇ ಇವರು ಕರ್ಪೂರ ಕರಸಿ, ಪಾಂಡುರಂಗ ಮಹಾತ್ಯಂ, ತಿರುಮಣಂ, ನಾಡೋಡಿ ಮನ್ನನ್ನಂತಹ ತಮಿಳು ಚಿತ್ರಗಳಲ್ಲಿಯೂ ಅಭಿನಯಿಸಿದ್ದರು..
ಅಶ್ವಸೂರ್ಯ/ಬೆಂಗಳೂರು : 1955ರಲ್ಲಿ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಬಿ ಸರೋಜಾ ದೇವಿ ಅವರು ಮತ್ತೆಂದೂ ಹಿಂತಿರುಗಿ ನೋಡಲೇ ಇಲ್ಲ. ಮುಂದಿನ ಮೂರು ದಶಕಗಳ ಕಾಲ ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗವನ್ನು ತಮ್ಮ ಅದ್ಭುತ ಅಭಿನಯದಿಂದ ಆಳಿದರು. ಆದರೆ ಇಲ್ಲಿ ಬೇಸರದ ಸಂಗತಿ ಎಂದರೆ ಬಿ ಸರೋಜಾದೇವಿಯವರು ಕೊನೆಯದಾಗಿ ಕನ್ನಡದಲ್ಲಿ ಅಪ್ಪು ಜೊತೆ ನಟಿಸಿದ್ದರು. 2019ರಲ್ಲಿ ತೆರೆಕಂಡ ನಟ ಸಾರ್ವಭೌಮ ಸಿನಿಮಾದಲ್ಲಿ ನಟಿಸಿದ್ದರು. ಇಂದು ಇಬ್ಬರು ಕೂಡ ನಮ್ಮ ಜೊತೆಗಿಲ್ಲ.
ಅಪ್ಪು ಹೋದ ನೋವನ್ನೇ ಇನ್ನೂ ಅಭಿಮಾನಿಗಳು ಮರೆಯುವ ಮುನ್ನ ಕನ್ನಡ ಚಿತ್ರರಂಗಹ ಹಿರಿಯ ನಟಿ ಬಿ ಸರೋಜಾದೇವಿ ಅಗಲಿಕೆ ನೋವು ಕನ್ನಡಿಗರನ್ನು ಕಾಡಿದೆ.

ಅಣ್ಣಾವ್ರ ಜೊತೆಯೂ ನಟಿಸಿದ್ದರು ಬಿ.ಸರೋಜಾದೇವಿ.
ಕನ್ನಡದಲ್ಲಿ ವರನಟ ಡಾ. ರಾಜ್ಕುಮಾರ್ ಅವರೊಂದಿಗೆ ಸರೋಜಾ ದೇವಿ ಅವರ ಜೋಡಿ ಎಂದರೆ ಅದು ಗೆಲುವಿನ ಸೂತ್ರವೇ ಆಗಿತ್ತು. ‘ಕಿತ್ತೂರು ಚೆನ್ನಮ್ಮ’ನಾಗಿ ಅವರ ಗತ್ತು, ‘ಸ್ಕೂಲ್ ಮಾಸ್ಟರ್’ ಚಿತ್ರದ ಮುಗ್ಧತೆ, ‘ಅಮರಶಿಲ್ಪಿ ಜಕಣಾಚಾರಿ’ಯ ಚೆಲುವು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಅಭಿನಯಕ್ಕೊಂದು ಹೊಸ ಭಾಷ್ಯ ಬರೆದವರು
ಸರೋಜಾ ದೇವಿ ಅವರ ಯಶಸ್ಸಿನ ಗುಟ್ಟು ಅವರ ಸೌಂದರ್ಯ ಮಾತ್ರವಾಗಿರಲಿಲ್ಲ. ಪಾತ್ರಗಳಿಗೆ ಜೀವ ತುಂಬುವ ಅವರ ಸಾಮರ್ಥ್ಯ ಅನನ್ಯವಾಗಿತ್ತು. ದುಃಖದ ದೃಶ್ಯಗಳಲ್ಲಿ ಕಣ್ಣೀರು ಹಾಕದೆ, ಕೇವಲ ಕಣ್ಣಿನ ನೋಟದಲ್ಲೇ ನೋವನ್ನು ವ್ಯಕ್ತಪಡಿಸುತ್ತಿದ್ದ ಅವರ ನಟನೆಗೆ ‘ಅಭಿನಯ ಶಾರದೆ’ ಎಂಬ ಬಿರುದು ತಾನಾಗಿಯೇ ಒಲಿದು ಬಂದಿತ್ತು.
ಸರೋಜಾದೇವಿಯ ನಗು, ನಾಟ್ಯ, ಸಂಭಾಷಣೆ ಹೇಳುವ ರೀತಿ ಎಲ್ಲವೂ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿತ್ತು. ಅವರು ಕೇವಲ ನಟಿಯಾಗಿರಲಿಲ್ಲ, ಅದೆಷ್ಟೋ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದರು.
ಪದ್ಮಭೂಷಣ, ಪದ್ಮಶ್ರೀ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಸರೋಜಾ ದೇವಿ ಅವರು ಭೌತಿಕವಾಗಿ ಅಗಲಿದ್ದರೂ, ಅವರ ನೂರಾರು ಚಿತ್ರಗಳು ಮತ್ತು ಅಮರ ಪಾತ್ರಗಳ ಮೂಲಕ ಕನ್ನಡಿಗರ ಹೃದಯಗಳಲ್ಲಿ ಶಾಶ್ವತವಾಗಿ ಜೀವಂತವಾಗಿರುತ್ತಾರೆ. ಅಭಿನಯ ದೇವತೆಗೆ ನಮ್ಮೆಲ್ಲರ ಭಾವಪೂರ್ಣ ಶ್ರದ್ಧಾಂಜಲಿ.
750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ಕೋಟ ಶ್ರೀನಿವಾಸ್ ರಾವ್ ವಿಧಿವಶ
ಹೈದರಾಬಾದ್ : ತೆಲುಗು ಚಿತ್ರರಂಗದ ಹೆಸರಾಂತ ಹಿರಿಯ ಕಲಾವಿದ ಕನ್ನಡದ ಪುನೀತ್ ಜೊತೆಗೂ ಅಭಿನಯಿಸಿದ್ದ ಕಲಾವಿದ,
ಕನ್ನಡ ಸೇರಿದಂತೆ 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬಹುಭಾಷಾ ನಟ ಕೋಟ ಶ್ರೀನಿವಾಸ ರಾವ್ (83) ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕೋಟ ಶ್ರೀನಿವಾಸ್ ರಾವ್ ಹೈದರಾಬಾದ್ನಲ್ಲಿರುವ ತಮ್ಮ ಮನೆಯಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದರು. ಹಿರಿಯ ನಟನ ನಿಧನಕ್ಕೆ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೋಟ ಶ್ರೀನಿವಾಸ್ ರಾವ್ ಮಗ ತೀರಿಕೊಂಡ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ
ಖಳನಾಯಕ, ಪೋಷಕರ ಪಾತ್ರ ಹಾಗೂ ಹಾಸ್ಯನಟನಾಗಿ ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಶ್ರೀನಿವಾಸ್ ರಾವ್ ರಂಗಭೂಮಿಯಿಂದ ಬಂದ ನಟ ತಮ್ಮದೇ ಆದ ನಟನಾ ಶೈಲಿಯಿಂದ ಜನರ ಮನ ಗೆದ್ದಿದ್ರು. ವಿಶೇಷವಾಗಿ ನಟ ಬಾಬು ಮೋಹನ್ ಅವರೊಂದಿಗೇ ಅವರು ಸುಮಾರು 60 ಚಿತ್ರಗಳಲ್ಲಿ ನಟಿಸಿದ್ದಾರೆ.
1942ರ ಜುಲೈ 10 ರಂದು ಕೃಷ್ಣ ಜಿಲ್ಲೆಯ ಕಂಕಿಪಾಡುವಿನಲ್ಲಿ ಜನಿಸಿದ ಕೋಟ ಶ್ರೀನಿವಾಸ ರಾವ್, ಸಿನಿಮಾ ರಂಗ ಪ್ರವೇಶಿಸುವುದಕ್ಕೆ ಮುನ್ನ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದರು. ಇದರ ಜೊತೆ ಜೊತೆಗೆ 20 ವರ್ಷಗಳ ಕಾಲ ರಂಗಭೂಮಿಯ ವೇದಿಕೆಯಲ್ಲಿ ನಟನೆಯಲ್ಲಿ ಅನುಭವ ಪಡೆದಿದ್ದರು. ಚಲನಚಿತ್ರಗಳಿಗೆ ಪಾದಾರ್ಪಣೆ ಮಾಡಿದ ಕೋಟ ಶ್ರೀನಿವಾಸ್ ರಾವ್, ತಮ್ಮ ವಿಶಿಷ್ಟ ಶೈಲಿಯ ಹಾಸ್ಯದ ಮೂಲಕ ಚಿತ್ರರಸಿಕರನ್ನು ಮೆಚ್ಚಿಸಿದರು.


