Headlines

ಪ್ರತಿ ಜಿಲ್ಲೆಗೂ IAS ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಿಸಿದ ರಾಜ್ಯ ಸರಕಾರ..! ಶಿವಮೊಗ್ಗಕ್ಕೆ ಬಿಬಿ ಕಾವೇರಿ, ಉಡುಪಿಗೆ ರೋಹಿಣಿ ಸಿಂಧೂರಿ ನೇಮಕ

ಅಶ್ವಸೂರ್ಯ/ಬೆಂಗಳೂರು : ಆಡಳಿತಕ್ಕೆ ಚುರುಕು ಮುಟ್ಟಿಸುವ ಸಲುವಾಗಿ ರಾಜ್ಯ ಸರ್ಕಾರವು ಎಲ್ಲಾ ಜಿಲ್ಲೆಗಳಿಗೂ ಐಎಎಸ್ ಅಧಿಕಾರಿಗಳನ್ನು ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ರಾಜ್ಯದ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳ ಜಾರಿ ಮತ್ತು ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ಕುರಿತು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಮಾಡಲು ಸರ್ಕಾರದ ಅವರ ಮುಖ್ಯ ಕಾರ್ಯದರ್ಶಿಗಳು / ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಬಿಬಿ ಕಾವೇರಿ, ಉಡುಪಿ ಜಿಲ್ಲೆಗೆ ರೋಹಿಣಿ ಸಿಂಧೂರಿ,ಚಿಕ್ಕಮಗಳೂರು ಜಿಲ್ಲೆಗೆ ರಾಜೇಂದ್ರ ಕುಮಾರ್ ಕಠಾರಿಯಾ ಅವರನ್ನು ನೇಮಿಸಿ ಆದೇಶಿಸಿದೆ.

ಬಿಬಿ ಕಾವೇರಿ –ಶಿವಮೊಗ್ಗ

ಡಾ.ಶಮ್ಲಾ ಇಕ್ಬಾಲ್ – ದಾವಣಗೆರೆ

ಡಾ.ಎಸ್ ಸೆಲ್ವಕುಮಾರ್ – ಮೈಸೂರು

ವಿ ಅನ್ಬುಕುಮಾರ್ – ಮಂಡ್ಯ

ಡಾ.ಎಂ ವಿ ವೆಂಕಟೇಶ – ಚಾಮರಾಜನಗರ

ನವೀನ್ ರಾಜ್ ಸಿಂಗ್ – ಹಾಸನ

ಡಾ.ಎನ್ ವಿ ಪ್ರಸಾದ್ – ಕೊಡಗು

ರಾಜೇಂದ್ರ ಕುಮಾರ್ ಕಠಾರಿಯಾ – ಚಿಕ್ಕಮಗಳೂರು

ರೋಹಿಣಿ ಸಿಂಧೂರಿ ದಾಸರಿ – ಉಡುಪಿ

ತುಳಸಿ ಮದ್ದಿನೇನಿ – ದಕ್ಷಿಣ ಕನ್ನಡ

ದೀಪ ಚೋಳನ್ – ತುಮಕೂರು

ಡಾ.ವಿ ರಾಮ್ ಪ್ರಸಾತ್ ಮನೋಹರ್ – ಧಾರವಾಡ

ರಮಣ ದೀಪ್ ಚೌಧರಿ – ಗದಗ

ಉಜ್ವಲ್ ಕುಮಾರ್ ಘೋಷ್ – ವಿಜಯಪುರ

ಸುಮಷಾ ಗೋಡಬೋಲೆ- ಉತ್ತರ ಕನ್ನಡ

ಮೊಹಮ್ಮದ್ ಮೊಹಸಿನ್ – ಬಾಗಲಕೋಟೆ

ಪಂಕಜ್ ಕುಮಾರ್ ಪಾಂಡೆ – ಕಲಬುರ್ಗಿ

ಮನೋಜ್ ಜೈನ್ – ಯಾದಗಿರಿ

ರಿತೇಶ್ ಕುಮಾರ್ ಸಿಂಗ್ – ರಾಯಚೂರು

ಕೆ.ಪಿ ಮೋಹನ್ ರಾಜ್ – ಕೊಪ್ಪಳ

ಡಾ.ಕೆವಿ ತ್ರಿಲೋಕ್ ಚಂದ್ರ – ಬಳ್ಳಾರಿ

ಡಿ.ರಣದೀಪ್ – ಬೀದರ್

ಡಾ.ಆರ್ ವಿಶಾಲ್ – ಹಾವೇರಿ

ಸಮೀರ್ ಶುಕ್ಲಾ- ವಿಜಯನಗರ

ಹರ್ಷ ಗುಪ್ತ – ಬೆಂಗಳೂರು ನಗರ

ಡಾ.ಪಿಸಿ ಜಾಫರ್ – ಬೆಂಗಳೂರು ಗ್ರಾಮಾಂತರ

ವಿ.ರಶ್ಮಿ ಮಹೇಶ್ – ರಾಮನಗರ

ಅಮಲಾನ್ ಆದಿತ್ಯ ಬಿಸ್ವಾಸ್ – ಚಿತ್ರದುರ್ಗ

ಡಾ.ಏಕ್ ರೂಪ್ ಕೌರ್ – ಕೋಲಾರ

ವಿಪುಲ್ ಬನ್ಸಾಲ್ – ಬೆಳಗಾವಿ

ಡಾ.ಎನ್ ಮಂಜುಳ – ಚಿಕ್ಕಬಳ್ಳಾಪುರ

Leave a Reply

Your email address will not be published. Required fields are marked *

Optimized by Optimole
error: Content is protected !!