
Honey trap: ಬಿಲ್ಡರ್ಗೆ ಹನಿಟ್ರ್ಯಾಪ್ ಹಣ ಮಾಡಲು ಹೋಗಿ ಜೈಲು ಸೇರಿದ್ಲಾ ಲೇಡಿ ಕೀರ್ತಿ ಪಟೇಲ್..!
ಬಿಲ್ಡರ್ಗೆ ಹನಿಟ್ರ್ಯಾಪ್ ಕೋಟಿ ಕೋಟಿ ಹಣಕ್ಕೆ ಬೇಡಿಕೆಯಿಟ್ಟು ಅಂದರ್ ಅದ್ಲಾ “ಹನಿ” ಲೇಡಿ ಕೀರ್ತಿ ಪಟೇಲ್.!
ಸೋಷಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ಕೀರ್ತಿ ಪಟೇಲ್ ಬಂಧಿತ ಆರೋಪಿ. ಇನ್ಸ್ಟಾಗ್ರಾಮ್ನಲ್ಲಿ 13 ಲಕ್ಷ ಫಾಲೋವರ್ಸ್ ಹೊಂದಿದ್ದಳಂತೆ.!
news.ashwasurya.in
ಅಶ್ವಸೂರ್ಯ/ಗಾಂಧೀನಗರ: ಬಿಲ್ಡರ್ನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು ಬ್ಲ್ಯಾಕ್ಮೇಲ್ ಮಾಡಿ ಕೋಟ್ಯಂತರ ರೂ.ಗೆ ಬೇಡಿಕೆಯಿಟ್ಟಿದ್ದ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಹೆಸರು ಮಾಡಿದ್ದ ಯುವತಿಯೊಬ್ಬಳನ್ನು ಸೂರತ್ ಪೊಲೀಸರು ಅಹಮದಾಬಾದ್ನಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ಕೀರ್ತಿ ಪಟೇಲ್ ಬಂಧಿತ ಆರೋಪಿಯಾಗಿದ್ದು ಇನ್ಸ್ಟಾಗ್ರಾಮ್ನಲ್ಲಿ 13 ಲಕ್ಷ ಫಾಲೋವರ್ಸ್ ಹೊಂದಿದ್ದಾಳಂತೆ.! ಈಕೆಯ ವಿರುದ್ಧ ಕಳೆದ ವರ್ಷ ಜೂ.02ರಂದೇ ಪ್ರಕರಣ ದಾಖಲಾಗಿತ್ತು.
ಪ್ರಾಥಮಿಕ ಮಾಹಿತಿ ಪ್ರಕಾರ, ಸೂರತ್ನಲ್ಲಿ ಓರ್ವ ಬಿಲ್ಡರ್ನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡು, ಬಳಿಕ ಬ್ಲ್ಯಾಕ್ಮೇಲ್ ಮಾಡಲು ಪ್ರಾರಂಭಿಸಿದ್ದಳಂತೆ.?
ನಂತರ ಕೋಟ್ಯಾಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದಳಂತೆ.? ಈ ಕುರಿತು ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಿ ಕೀರ್ತಿ ತಲೆಮರೆಸಿಕೊಂಡಿದ್ದಳು. ಎಫ್ಐಆರ್ನಲ್ಲಿ ಎ1 ಆರೋಪಿಯ ಹೊರತಾಗಿ ಇನ್ನೂ ನಾಲ್ವರ ಹೆಸರನ್ನು ಉಲ್ಲೇಖಿಸಲಾಗಿತ್ತು. ಆ ನಾಲ್ವರನ್ನು ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಪೊಲೀಸರು ಬಂಧಿಸಿದ್ದರು. ಇದಲ್ಲದೇ ಸುಲಿಗೆ ಹಾಗೂ ಭೂಕಬಳಿಕೆ ಆರೋಪಗಳು ಆರೋಪಿ ಕೀರ್ತಿ ಪಟೇಲ್ ಮೇಲಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಈ ಕುರಿತು ಉಪಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಮಾತನಾಡಿ, ಪ್ರಕರಣ ದಾಖಲಾದ ಸ್ವಲ್ಪ ಸಮಯದ ನಂತರ ಸೂರತ್ ನ್ಯಾಯಾಲಯ ಆರೋಪಿಯ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ತಲೆಮರೆಸಿಕೊಂಡಿದ್ದ ಆರೋಪಿ ಕೀರ್ತಿ ಪಟೇಲ್ಳನ್ನು ಪತ್ತೆಹಚ್ಚಲು ಕಳೆದ 10 ತಿಂಗಳಿನಿಂದ ಪ್ರಯತ್ನಿಸುತ್ತಿದ್ದೆವು. ಆರೋಪಿ ಪೊಲೀಸರಿಗೆ ದಾರಿ ತಪ್ಪಿಸುವ ಉದ್ದೇಶದೊಂದಿಗೆ ದಿನೇ ದಿನೇ ಊರು ಬದಲಾಯಿಸುವುದು, ಸಿಮ್ ಕಾರ್ಡ್ ಬದಲಾಯಿಸುವುದನ್ನು ಮಾಡುತ್ತಿದ್ದಳು. ನಮ್ಮ ತಾಂತ್ರಿಕ ತಂಡ, ಸೈಬರ್ ತಜ್ಞರು ಹಾಗೂ ಬೇರೆ ಬೇರೆ ಪೊಲೀಸ್ ಠಾಣೆಯೊಂದಿಗೆ ಸಂಪರ್ಕದಲ್ಲಿದ್ದ ನಾವು ಕೊನೆಗೆ ಇನ್ಸ್ಟಾಗ್ರಾಂ ಸಹಾಯದಿಂದ ಆರೋಪಿಯನ್ನು ಅಹಮದಾಬಾದ್ನ ಸರ್ಖೇಜ್ ಪ್ರದೇಶದಲ್ಲಿ ಪತ್ತೆಹಚ್ಚಿ ಬಂಧಿಸದ್ದೇವೆ ಎಂದು ತಿಳಿಸಿದ್ದಾರೆ.
ಸದ್ಯ ಆರೋಪಿಯ ಹೇಳಿಕೆಗಳನ್ನು ದಾಖಲಿಸಿ, ತನಿಖೆ ಮುಂದುವರಿಸಿದ್ದೇವೆ. ಜೊತೆಗೆ ಸಾರ್ವಜನಿಕರು ಸುಲಿಗೆಯಂತಹ ಯಾವುದೇ ತೊಂದರೆಯಲ್ಲಿ ಸಿಲುಕಿಕೊಂಡಿದ್ದರೂ ಪೊಲೀಸ್ ಠಾಣೆಗೆ ಹಾಗೂ ಎಸಿಪಿ, ಡಿಸಿಪಿ ಕಚೇರಿಗೆ ದೂರು ಸಲ್ಲಿಸಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


