ವಿಮಾನ ದುರಂತ || ಪ್ರೀತಿಸಿ ಗೆದ್ದರು ಮದುವೆಯಾಗಲು ವಿಧಿ ಬಿಡಲಿಲ್ಲ.!! ನಿಶ್ಚಿತಾರ್ಥ ಮುಗಿಸಿ ಹೊರಟ ಜೋಡಿ ಮಸಣಕ್ಕೆ.!!

ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಅಹಮದಾಬಾದ್ : ಲಂಡನ್ನಿಂದ ಪ್ರೇಮಿಗಳಿಬ್ಬರು ಭಾರತಕ್ಕೆ ಬಂದು ಸೂರತ್ನಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು ವಾಪಾಸು ಲಂಡನ್ಗೆ ಹೊರಟಿದ್ದ ಜೋಡಿ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಮೃತರನ್ನು ಹಾರ್ದಿಕ್ ಹಾಗೂ ವಿಭೂತಿ ಎಂದು ಗುರುತಿಸಲಾಗಿದೆ. ವಿಭೂತಿ ಲಂಡನ್ನಲ್ಲಿ ಫಿಸಿಯೋಥೆರಪಿ ಮಾಸ್ಟರ್ಸ್ ಮಾಡುತ್ತಿದ್ದು, ಹಾರ್ದಿಕ್ ಲಂಡನ್ನಲ್ಲಿ ಅಮೆಜಾನ್ ಉದ್ಯೋಗಿಯಾಗಿದ್ದರು. ಅಲ್ಲಿಯೇ ಭೇಟಿಯಾಗಿ, ಇಬ್ಬರ ನಡುವೆ ಲವ್ ಶುರುವಾಗಿತ್ತು.ಇಬ್ಬರು ಮನೆಯವರಿಗೆ ತಿಳಿಸಿ ಮದುವೆಯಾಗಲು ಒಪ್ಪಿಗೆ ಪಡೆದಿದ್ದರು. 10 ದಿನ ರಜೆ ಹಾಕಿ ಎಂಗೇಜ್ಮೆಂಟ್ ಮಾಡಿಕೊಳ್ಳಲು ಲಂಡನ್ ನಿಂದ ಭಾರತಕ್ಕೆ ಊರಿಗೆ ಬಂದಿದ್ದರು.ಪ್ರೀತಿಸಿ ಮನೆಯವರ ಒಪ್ಪಿಗೆಯೂ ಪಡೆದು ಪ್ರೀತಿಸಿ ಗೆದ್ದ ಜೋಡಿ ಎಂಗೇಜ್ಮೆಂಟ್ ಮುಗಿಸಿ ಮದುವೆಯ ಕನಸು ಕಂಡು ಲಂಡನ್ಗೆ ವಾಪಸ್ ಹೋಗವಾಗ ವಿಮಾನ ದುರಂತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.ವಿಧಿ ಎಲ್ಲವನ್ನೂ ಕೊಟ್ಟು ಸಂತೋಷದಿಂದ ದಾಂಪತ್ಯ ಜೀವನಕ್ಕೆ ಕಾಲಿಡಬೇಕೆನ್ನುವ ಸಂಧರ್ಭದಲ್ಲಿಯೆ ಸಾವಿನ ಮನೆ ಸೇರಿದ್ದಾರೆ.

ಮೃತರನ್ನು ನೆನೆದು ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ. ಅಹಮದಾಬಾದ್ ವಿಮಾನ ದುರಂತ – ಸಾವಿನ ಸಂಖ್ಯೆ 265ಕ್ಕೆ ಏರಿಕೆ. ಗುರುವಾರ ಅಹಮದಾಬಾದ್ನಲ್ಲಿ ಅಪಘಾತಗೊಂಡ ಏರ್ ಇಂಡಿಯಾ (Air India) ವಿಮಾನದಲ್ಲಿ 12 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಈ ಅವಘಡದಲ್ಲಿ 241 ಜನ ಸಾವನ್ನಪ್ಪಿದ್ದಾರೆ. ಓರ್ವ ಮಾತ್ರ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾರೆ.


