Headlines

ಶಿವಮೊಗ್ಗ: ಮೆಗ್ಗಾನ್ ಭೋದನಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದ ಲೋಕಾಯುಕ್ತ ಅಧೀಕ್ಷಕರಾದ ಮಂಜುನಾಥ್ ಚೌದರಿ ಎಂ.ಹೆಚ್ ಮತ್ತು ಅಧಿಕಾರಿಗಳ ತಂಡ, ಔಷದ ದಾಸ್ತಾನು ವಿಭಾಗದಲ್ಲಿ ಗೋಲ್ ಮಾಲ್ ನೆಡೆದಿರುವ ಶಂಕೆ.!

ಅಶ್ವಸೂರ್ಯ/ಶಿವಮೊಗ್ಗ: ಈ ದಿವಸ ದಿನಾಂಕ 26-05-2025 ರಂದು ಸಂಜೆ 04:00 ಗಂಟೆಗೆ ಶ್ರೀ ಮಂಜುನಾಥ್ ಚೌದರಿ ಎಂ.ಹೆಚ್ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಅಧಿಕಾರಿಗಳಾದ ರುದ್ರೇಶ್ ಕೆ.ಪಿ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಗಳೊಂದಿಗೆ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಭೋದನಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಮೆಗ್ಗಾನ್ ಭೋದನಾ ಆಸ್ಪತ್ರೆಯ ಔಷದ ದಾಸ್ತಾನು ವಿಭಾಗಕ್ಕೆ ದೀಡಿರ್ ಭೇಟಿ ನೀಡಿ ಪರಿಶೀಲನೆಯನ್ನು ಕೈಗೊಂಡಿದ್ದಾರೆ.

ಈ ಸಮಯದಲ್ಲಿ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಭೋಧನಾ ಆಸ್ಪತ್ರೆಯ ಕ್ಷ ಕಿರಣ ಕೊಠಡಿಯ ಪಕ್ಕದಲ್ಲಿರುವ ಒಂದು ಕೊಠಡಿಯಲ್ಲಿ ಅನಧೀಕೃತವಾಗಿ ಔಷದಿಗಳನ್ನು ಸಂಗ್ರಹಿಸಿದ್ದು, ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಭೋಧನಾ ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಗೋಪಿನಾಥ್ ಫಾರ್ಮಸಿ ರವರನ್ನು ವಿಚಾರಿಸಿದಾಗ ಗೋಪಿನಾಥ್ ಅವರು ಅಕ್ರಮವಾಗಿ ಸಂಗ್ರಹಿಸಲಾದ ಔಷಧಗಳಿಗೆ ಸಂಭಂಧಿಸಿದಙತೆ ಯಾವುದೇ ಸಮಂಜಸವಾದ ಮಾಹಿತಿಯನ್ನು ಮತ್ತು ದಾಖಲಾತಿಗಳನ್ನು ನೀಡಿರುವುದಿಲ್ಲ ಮತ್ತು ಸದರಿ ಔಷದಿಗಳು ದಾಸ್ತಾನು ರಿಜಿಸ್ಟರ್‌ನಲ್ಲಿಯೂ ಸಹ ನಮೂದಿಸಿರುವುದಿಲ್ಲದೆ ಇರುವುದು ಕಂಡು ಬಂದಿದ್ದು. ಸದರಿ ಔಷದಿಗಳ ಮೇಲೆ Not For Sale ಎಂದು ನಮೂದು ಕೂಡ ಇರುವುದಿಲ್ಲ ಎಲ್ಲಾ ಔಷದಿಗಳ ಮೇಲೆ ಎಂ.ಆರ್.ಪಿ ನಮೂದು ಇದ್ದು, ಇದು ಕಾನೂನು ಬಾಹಿರವಾಗಿರುವುದು ಕಂಡು ಬಂದಿರುತ್ತದೆ. ಹಾಗೂ ಈ ಬಗ್ಗೆ ಆಸ್ಪತ್ರೆಯ ಫಾರ್ಮಸಿಸ್ಟ್‌ಗಳು ಸಮಂಜಸವಾದ ಉತ್ತರವನ್ನು ನೀಡಿರುವುದಿಲ್ಲ. ಸದರಿ ಔಷದಿಗಳ ಅಂದಾಜು ಮೌಲ್ಯ ಸುಮಾರು 3.5 ಲಕ್ಷಗಳಾಗುತ್ತದೆ. ಈ ಬಗ್ಗೆ ದಾಖಲಾತಿಗಳನ್ನು ಸಂಗ್ರಹಿಸಿದ್ದು ಮುಂದಿನ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ
ಶಿವಮೊಗ್ಗ ಪೊಲೀಸ್ ಅಧೀಕ್ಷಕರಾದ ಮಂಜುನಾಥ ಚೌದರಿ ಎಂ.ಹೆಚ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!