ಹಾಸನ: ತಾಳಿ ಕಟ್ಟುವ ವೇಳೆ ಲವ್ವರ್ ಎಂಟ್ರಿ.! ವರನ ಕೈಯಿಂದ ತಾಳಿ ಕಸಿದುಕೊಂಡ ಪ್ರೇಮಿ.!ಅ ನಂತರ ಮದುವೆ ಬೇಡ ಎಂದ ವಧು.! ಮಂಟಪಕ್ಕೆ ಪೊಲೀಸರ ಎಂಟ್ರಿ…!ಮುಂದೇನಾಯ್ತು.?

ASHWASURYA/SHIVAMOGGA
ತಾಳಿ ಕಟ್ಟುವ ಶುಭ ವೇಳೆ ಕಲ್ಯಾಣ ಮಂಟಪಕ್ಕೆ ಲವ್ವರ್ ಎಂಟ್ರಿ! ವರನ ಕೈಯಿಂದ ಮಾಂಗಲ್ಯ ಸರವನ್ನೆ ಕಿತ್ತುಕೊಂಡ ಪ್ರೇಮಿ ಮುಂದೇನಾಯ್ತು?
ವಧು ಮಂಜುಳ ( ಹೆಸರು ಬದಲಾಯಿಸಲಾಗಿದೆ) ನನ್ನನ್ನು ಪ್ರೀತಿ ಮಾಡುತ್ತಿದ್ದಾಳೆ. ತಾನು ಪ್ರೀತಿ ಮಾಡುತ್ತಿದ್ದ ವಿಷಯವನ್ನು ಮುಚ್ಚಿಟ್ಟು ಮದುವೆಗೆ ಮುಂದಾಗಿದ್ದಾಳೆ ಎಂದು ಲವ್ವರ್ ನವೀನ್ ಆರೋಪಿಸಿದ್ದಾನೆ.
ತಾಳಿ ಕಟ್ಟುವ ಶುಭ ವೇಳೆ ವಧುವಿನ ಪ್ರಿಯಕರ ಆಗಮಿಸಿ ಗಲಾಟೆ ಮಾಡಿದ್ದರಿಂದ ಮದುವೆಯೊಂದು ಮುರಿದು ಬಿದ್ದಿದೆ. ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಇಂದು ಬೇಲೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ ಮಂಜುಳ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯ ಮದುವೆ ಶಿವಮೊಗ್ಗ ಮೂಲದ ಪ್ರಮೋದ್ಕುಮಾರ್ ಎಂಬವರ ಜೊತೆ ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಯವಾಗಿತ್ತು. ಇನ್ನೇನು ತಾಳಿ ಕಟ್ಟುವ ವೇಳೆ ಕಲ್ಯಾಣಮಂಟಪಕ್ಕೆ ಬಂದ ಲವ್ವರ್ ನವೀನ್ ಮದುವೆಗೆ ಅಡ್ಡಿಪಡಿಸಿದ್ದಾನೆ. ನವೀನ್ ಹಾಸನ ಹೊರವಲಯದ ಗವೇನಹಳ್ಳಿಯ ನಿವಾಸಿ ಎಂದು ತಿಳಿದು ಬಂದಿದೆ.
news.ashwasurya.in
ಅಶ್ವಸೂರ್ಯ/ಹಾಸನ: ವಧು ಕಣ್ಣೀರು ಹಾಕುತ್ತಾ ನನಗೆ ಈ ಮದುವೆ ಬೇಡವೇ ಬೇಡ ಎಂದು ಹಸೆಮಣೆಯಿಂದ ಎದ್ದಿದ್ದಾಳೆ.ಕಾರಣ ಮಾಂಗಲ್ಯ ಕಟ್ಟುವ ಶುಭ ವೇಳೆಗೆ ವಧುವಿನ ಪ್ರೀಯಕರ ನವೀನ್ ಆಗಮನವಾಗಿದೆ ನವೀನ್ ಬಂದ ಬಂದವನೆ ವರನ ಕೈಯಲಿದ್ದ ಮಾಂಗಲ್ಯ ಸರವನ್ನು ಕಸಿದುಕೊಂಡಿದ್ದಾನೆ.!ಇದು ಏನು ನೆಡೆಯುತ್ತಿದೆ ಎಂದು ಅರಿವಾಗದೆ ವಧು ಹಾಗೂ ವರನ ಕಡೆಯವರು ಶಾಕ್ ಆಗಿದ್ದಾರೆ.!
ಹಸೆಮಣೆಯಲ್ಲಿ ಕುಳಿತು ಮದುವೆ ಆಗಬೇಕೆನ್ನುವ ಹೊತ್ತಿಗೆ ವಧುವಿನ ಪ್ರೀಯಕರ ಮಂಟಪಕ್ಕೆ ಬಂಧು ಮದುವೆ ಮನೆಯ ಸಂಭ್ರಮವನ್ನೆ ಹಾಳು ಗೇಡವಿದ್ದಾನೆ.?

ಹಾಸನದ ಭೂವನಹಳ್ಳಿಯ ಯುವತಿಗೆ ಗುರು ಹಿರಿಯರ ಇಚ್ಛೆಯಂತೆ ಶಿವಮೊಗ್ಗ ಮೂಲದ ವರ ಪ್ರಮೋದ್ ಜೊತೆಗೆ ಮದುವೆ ನಿಶ್ಚಯವಾಗಿತ್ತು. ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಸಂಭ್ರಮದಿಂದ ನಡೆಯಬೇಕಾಗಿದ್ದ ಮದುವೆ ಅರ್ಧಕ್ಕೆ ನಿಂತು ಹೋಗಿದೆ. ಇಷ್ಟುದಿನ ಸುಮ್ಮನೆ ಇದ್ದ ಯುವತಿ ಮಂಟಪಕ್ಕೆ ತನ್ನ ಲವ್ವರ್ ಬರುತ್ತಿದ್ದಹಾಗೆ ನನಗೆ ಮದುವೆ ಬೇಡ ಎಂದಿದ್ದಾಳೆ. ಇದಕ್ಕೆ ಕಾರಣ ಪ್ರೀತಿ, ತಾನು ಇಷ್ಟಪಟ್ಟ ಹುಡುಗನನ್ನೇ ಮದುವೆಯಾಗಬೇಕು ಎಂದು ಯುವತಿ ಮದುವೆ ನಿರಾಕರಿಸಿದ್ದಾಳೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಮಂಟಪದಲ್ಲಿ ಗೊಂದಲ ಹಾಗೂ ಗದ್ದಲ.?
ವಧು ಕಣ್ಣೀರು ಹಾಕುತ್ತಾ ನನಗೆ ಈ ಮದುವೆ ಬೇಡ ಎಂದಿದ್ದಾಳೆ. ಆಕೆಯ ಮಾತು ಕೇಳಿ ವರ ಹಾಗೂ ಗಂಡಿನ ಮನೆಯವರು ಶಾಕ್ ಆಗಿದ್ದಾರೆ. ಕಲ್ಯಾಣ ಮಂಟಪದಲ್ಲಿ ಗೊಂದಲ ಹಾಗೂ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಹೆಣ್ಣಿನ ಅಪ್ಪ-ಅಮ್ಮ ಹಾಗೂ ಕುಟುಂಬಸ್ಥರು ಯುವತಿಯನ್ನು ಎಷ್ಟೇ ಮನವರಿಕೆ ಮಾಡಿದ್ರು. ಆಕೆ ಒಪ್ಪಲಿಲ್ಲ.
ಮದುವೆ ಮಂಟಪಕ್ಕೆ ಪೊಲೀಸರ ಎಂಟ್ರಿಯಾಗಿದೆ.
ಎಷ್ಟೇ ಮನವೊಲಿಸಿದರೂ ಮದುವೆಗೆ ವಧು ಒಪ್ಪಿಲ್ಲ. ಬಳಿಕ ಗಂಡಿನ ಕಡೆಯವರು ಕೂಡ ಗಲಾಟೆ ಮಾಡಿದ್ರು. ಈ ವೇಳೆ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ಪೊಲೀಸರ ಬಳಿ ಕೂಡ ಯುವತಿ ತಾನು ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ.ಈ ಪ್ರಕರಣ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಧುವನ್ನು ಆಕೆಯ ಲವ್ವರ್ ನವೀನ್ನನ್ನು ಪೊಲೀಸರು ಕಲ್ಯಾಣ ಪಂಟಪದಿಂದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಹಾಸನ ಬಡಾವಣೆ ಠಾಣೆಯಲ್ಲಿ ಪೊಲೀಸರು ವಧು ಮತ್ತು ಆಕೆಯ ಪ್ರೀಯತಮನ ವಿಚಾರಣೆ ನಡೆಸುತ್ತಿದ್ದಾರೆ. ವಧು, ವರನ ಸಂಬಂಧಿಗಳು ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದಾರೆ. ವಧುವಿನ ಹೇಳಿಕೆ ಮೇಲೆ ಪ್ರಕರಣ ನಿಂತಿದ್ದು. ವಧುವಿನ ಕಡೆಯವರಿಂದ ಮೋಸವಾಗಿದೆ ಎಂದು ದೂರು ನೀಡಲು ವರನ ಸಂಬಂಧಿಕರು ಮುಂದಾಗಿದ್ದಾರೆ. ಮಾನಸಿಕವಾಗಿ, ಆರ್ಥಿಕವಾಗಿ ನಮಗೆ ನಷ್ಟವಾಗಿದೆ ಎಂದು ದೂರು ದಾಖಲಿಸಲು ವರನ ಕುಟುಂಬಸ್ಥರು ಮುಂದಾಗಿದ್ದಾರೆ.


