ಶಿವಮೊಗ್ಗ : ಸಿಟಿ ಸೆಂಟರ್ ನ “ಭಾರತ್” ಸಿನಿಮಾದಲ್ಲಿ “ದಾಸರಹಳ್ಳಿ” ಯಶಸ್ವಿ ಎರಡನೇ ವಾರದತ್ತ…

ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: “ದಾಸರಹಳ್ಳಿ” ಕನ್ನಡ ಬಿಗ್ ಬಾಸ್ ಖ್ಯಾತಿಯ ಧರ್ಮ ಕೀರ್ತಿರಾಜ್ ನಾಯಕ ನಟನಾಗಿ ಅಭಿನಯಿಸಿರುವ ಕನ್ನಡ ಚಲನಚಿತ್ರ.ಈಗಾಗಲೇ ತೆರೆಕಂಡು ಯಶಸ್ವಿ ಮೂರನೇ ವಾರದಲ್ಲಿ ಮುನ್ನುಗ್ಗುತ್ತಿರುವ ಈ ಚಿತ್ರದಲ್ಲಿ ತೇಜಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಧರ್ಮ ಕೀರ್ತಿರಾಜ್ ತನ್ನ ಹಳ್ಳಿಯಾದ ದಾಸರಹಳ್ಳಿಗೆ ವಿದೇಶದಿಂದ ಮರಳುವುದರೊಂದಿಗೆ ಪ್ರಾರಂಭವಾಗುತ್ತದೆ.

ಅವನು ತನ್ನ ಬಾಲ್ಯದ ಸ್ನೇಹಿತ ಕುಮಾರ್ (ಉಮೇಶ್) ಮತ್ತು ಅವನ ಪ್ರಿಯತಮೆ ಮಯೂರಿ (ನೇಹಾ) ಜೊತೆ ಮತ್ತೆ ಒಂದಾಗುತ್ತಾನೆ. ತೇಜಸ್ ವಿದೇಶದಲ್ಲಿ ಅಧ್ಯಯನ ಮಾಡಿ ನಂತರ ತನ್ನ ಹಳ್ಳಿಯನ್ನು ಆಧುನಿಕ ಪಟ್ಟಣವಾಗಿ ಪರಿವರ್ತಿಸುವ ಕನಸನ್ನು ಕಲ್ಪಿಸಿಕೊಳ್ಳುತ್ತಾನೆ.

ತೇಜಸ್ ಯುಎಸ್ಎಗೆ ಪ್ರಯಾಣ ಬೆಳೆಸುತ್ತಿದ್ದಂತೆ, ಚಿತ್ರವು ತನ್ನ ಗಮನವನ್ನು ಗ್ರಾಮಸ್ಥರ ಕಡೆಗೆ ತಿರುಗಿಸುತ್ತದೆ – ಗ್ರಾಮದಲ್ಲಿ ಕುಡಿತದ ಚಟಕ್ಕೆ ಬಿದ್ದ ಪುರುಷರು ಮನೆ ಸಂಸಾರದ ಜವಾಬ್ದಾರಿಯನ್ನೆ ಮರೆತು ಹೋಗಿರುತ್ತಾರೆ, ಇತ್ತ ತಮ್ಮ ಮನೆ ಮಕ್ಕಳು ಬದುಕು ದೂಡಲು ಸಂಪಾದಿಸುವ ಜವಾಬ್ದಾರಿಯಿಂದ ಬಳಲುತ್ತಿರುವ ಮಹಿಳೆಯರು ಮತ್ತು ಅಸಮತೋಲಿತ ವಾತಾವರಣದ ಹೊರೆಯನ್ನು ಮೌನವಾಗಿ ಹೊರುವ ಮಕ್ಕಳು.
ಗ್ರಾಮಸ್ಥರು ತಮ್ಮ ನ್ಯೂನತೆಗಳನ್ನು ಮೀರಿ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಕಥೆಯೊಂದಿಗೆ ಸಾಗುವ ಚಿತ್ರ “ದಾಸರಹಳ್ಳಿ” ಅಭಿವೃದ್ಧಿಯ ಉದಯವನ್ನು ನೋಡುತ್ತದೆಯೇ? ಮತ್ತು ಮುಖ್ಯವಾಗಿ, ತೇಜಸ್ ಬದಲಾದ ಮತ್ತು ಆಶಾದಾಯಕ ವಾತಾವರಣಕ್ಕೆ ಸಾಕ್ಷಿಯಾಗಲು ಹಿಂತಿರುಗುತ್ತಾನೆಯೇ? ಈ ಪ್ರಶ್ನೆಗಳು ಕಥೆಯ ತಿರುಳನ್ನು ರೂಪಿಸುತ್ತವೆ.

ಚಿತ್ರವು ಹಳ್ಳಿಯಲ್ಲಿ ಮದ್ಯ ವ್ಯಸನದಿಂದ ಸಮಸ್ಯೆಯನ್ನು ಮತ್ತು ಅದು ಕುಟುಂಬಗಳನ್ನು ಹೇಗೆ ನಿರ್ಣಾಮದ ಅಂಚಿಗೆ ತಂದಿಡುತ್ತದೆ ಎನ್ನುವುದನ್ನು ತಿಳಿಸಲು ಹೊರಟಿರುವ ಚಿತ್ರ.! ಸಂಸಾರ ಸಮೇತರಾಗಿ ಚಿತ್ರಮಂದಿರಕ್ಕೆ ಬಂದು ನೋಡವಂತಹ ಒಂದು ಉತ್ತಮ ಚಿತ್ರ “ದಾಸರಹಳ್ಳಿ”
ಧರ್ಮ ಕೀರ್ತಿರಾಜ್ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ.ಸಾಕಷ್ಟು ಹಿರಿಯ ನಟರ ಸಮೂಹವೆ ಈ ಚಿತ್ರದಲ್ಲಿದೆ.ಈ ಚಿತ್ರದಲ್ಲಿ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದ್ದು ಒಂದೆರಡು ಫೈಟ್ ಗಳು ಚಿತ್ರದ ಘನತೆಯನ್ನು ಹೆಚ್ಚಿಸಿದೆ.ಒಂದೆರಡು ಹಾಡುಗಳು ಚಿತ್ರದ ಜೀವಾಳವಾಗಿದೆ. ಸಮಾಜಕ್ಕೆ ಉತ್ತಮ ಸಂದೇಶ ಹೊತ್ತುತಂದಿರುವ “ದಾಸರಹಳ್ಳಿ” ಚಿತ್ರಕ್ಕೆ ಶಿವಮೊಗ್ಗದ ಯುವ ನಿರ್ಮಾಪಕ ಉಮೇಶ್ ಬಂಡವಾಳ ಹೂಡಿದ್ದಾರೆ. ಎಂ ಆರ್ ಶ್ರೀನಿವಾಸ್ ಪರಿಕಲ್ಪನೆ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ .ಚಿತ್ರ ಈಗಾಗಲೇ ರಾಜ್ಯಾದ್ಯಂತ ಮೂರನೇ ವಾರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಸಿಟಿ ಸೆಂಟರ್ ಮಾಲ್ ನ “ಭಾರತ್” ಸಿನಿಮಾ ಸೆಂಟರ್ ನಲ್ಲಿ ಯಶಸ್ವಿ ಎರಡನೇ ವಾರದಲ್ಲಿ ಪ್ರದರ್ಶನ ಕಾಣುತ್ತಿದ್ದು ಶಿವಮೊಗ್ಗ ನಗರದ ಕನ್ನಡ ಚಿತ್ರರಸಿಕರು “ದಾಸರಹಳ್ಳಿ” ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಿ ನಮ್ಮೂರ ಯುವ ನಿರ್ಮಾಪಕನಿಗೆ ಶಕ್ತಿ ತುಂಬಬೇಕಿದೆ..

