ಎಸ್‌ಎಸ್ಎಲ್‌ಸಿ ಫಲಿತಾಂಶ : ಪರೀಕ್ಷೆ ಫಲಿತಾಂಶ ಪ್ರಕಟ, ಮೊದಲ ಸ್ಥಾನದಲ್ಲಿ ದಕ್ಷಿಣ ಕನ್ನಡ. ನಾಲ್ಕನೆ ಸ್ಥಾನದಲ್ಲಿ ಶಿವಮೊಗ್ಗ. ಕಲಬುರಗಿಗೆ ಕೊನೆ ಸ್ಥಾನ
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಬೆಂಗಳೂರು, ಮೇ 2- ಕಳೆದ ಮಾರ್ಚ್ 29ರಿಂದ ಏಪ್ರಿಲ್ 4ರವರೆಗೂ ನಡೆದಿದ್ದ 2024-25ರ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಒಟ್ಟು ಶೇ.62.34ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಟಿಯಲ್ಲಿಂದು ಫಲಿತಾಂಶ ಪ್ರಕಟಿಸಿದರು. ತಮ್ಮ ಸರ್ಕಾರ ಅಧಿಕಾರ ಬಂದ ಬಳಿಕ ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿತ್ತು ಎಂದು ತಿಳಿಸಿದರು.
ಕಳೆದ ವರ್ಷದ ಶೇ.53ರಷ್ಟಿರಿಂದ ಶೇ.8ರಷ್ಟು ಸುಧಾರಣೆ ಕಂಡಿದೆ. ಶೇಕಡವಾರು ಶೇ.62.34ರಷ್ಟಿದೆ. ಶೇಕಡವಾರು 60ಕ್ಕಿಂತ ಹೆಚ್ಚು ಅಂಕ ಪಡೆದವರು ಕಳೆದ ವರ್ಷ ಶೇ.62ರಷ್ಟಿದ್ದರೂ, ಈ ಬಾರಿ ಶೇ.75ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಕಳೆದ ವರ್ಷ 625 ಪೂರ್ಣ ಅಂಕ ಪಡೆದವರು ಇಬ್ಬರು ಮಾತ್ರ ಇದ್ದರೂ, ಈ ಬಾರಿ 25 ಮಕ್ಕಳು ಪೂರ್ಣ ಅಂಕಗಳನ್ನು ಪಡೆದಿದ್ದಾರೆ. ಅದರಲ್ಲಿ ಇಬ್ಬರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿದ್ದಾರೆ ಎಂದು ಹೇಳಿದ್ದಾರೆ.
ಮರು ಮೌಲ್ಯಮಾಪನಕ್ಕೆ ಆ್ಯಪ್ ರೂಪಿಸಲಾಗಿದ್ದು, ಅದರಲ್ಲಿ ಅರ್ಜಿ ಸಲ್ಲಿಸಬಹುದು. ಕಳೆದ ವರ್ಷದ ಫಲಿತಾಂಶ ಶೇ.53ರಷಾಗಿತ್ತು. ಸರ್ಕಾರ ಗ್ರೆಸ್ ಮಾಕ್ 9 ಕೊಟ್ಟಿದ್ದರಿಂದ ಟ್ಟು ಫಲಿತಾಂಶ ಶೇ.73ರಷ್ಟಕ್ಕೆ ಹೆಚ್ಚಾಗಿತ್ತು. ಕಲಿಕೆಯಲ್ಲಿ ಹಿಂದುಳಿದವರಿಗೆ ಗ್ರೆಸ್ ಮಾರ್ಕ್ ಅನಿವಾರ್ಯವಾಗಿತ್ತು. ಜೊತೆಗೆ ಪರೀಕ್ಷೆ 2 ಮತ್ತು 3 ಹಂತಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು ಎಂದರು.
ಆನಂತರ ಸಿಎಂ ಅವರ ಸೂಚನೆ ಮೇರೆಗೆ ಬಹಳಷ್ಟು ಸುಧಾರಣೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ವಿಶೇಷ ತರಗತಿಗಳನ್ನು ನಡೆಸಲಾಗಿದೆ. ಶಾಲಾ ಕೊಠಡಿ ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಿ ವಿಶೇಷ ತರಗತಿ ಆಯೋಜಿಸಲಾಗಿದೆ. 13 ಸಾವಿರ ಅಥಿತಿ ಶಿಕ್ಷಕರ ನೇಮಿಸಲಾಗಿದೆ, ಈ ಎಲ್ಲಾ ಕ್ರಮಗಳಿಂದ ಫಲಿತಾಂಶ ಸುಧಾರಣೆಯಾಗಿದೆ ಎಂದು ಹೇಳಿದರು.
1 ರಿಂದ 9ನೆ ತರಗತಿಯವರೆಗೂ ವಿದ್ಯಾರ್ಥಿಗಳು ಸಾಮರ್ಥ್ಯ ಪರೀಕ್ಷೆಗೆ ಸೂಕ್ತ ವ್ಯವಸ್ಥೆಗಳಿಲ್ಲ, ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೂ ಆತಂರಿಕ ಮೌಲ್ಯಮಾಪನ ನಡೆಸಲಾಗಿದೆ ಎಂದರು.












