
ನಿವೃತ್ತ IPS ಅಧಿಕಾರಿಯನ್ನು ಚಾಕುವಿನಿಂದ ಇರಿದು ಕೊಂದ ಪತ್ನಿ.! ನರಳಿ ನರಳಿ ಪ್ರಾಣ ಬಿಟ್ರ ಓಂ ಪ್ರಕಾಶ್.!?
ASHWASURYA/SHIVAMOGGA
news.ashwasuryain
ಅಶ್ವಸೂರ್ಯ/ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ (68) ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾರೆ.ಓಂ ಪ್ರಕಾಶ್ ಅವರ ಹೆಚ್ಎಸ್ಆರ್ ಲೇಔಟ್ನ ಮನೆಯಲ್ಲಿ ಸಂಜೆ 4 ಗಂಟೆ ಸುಮಾರಿಗೆ ಪತ್ನಿ ಪಲ್ಲವಿ ಅವರೇ ಓಂ ಪ್ರಕಾಶ್ ಅವರನ್ನು ಚಾಕುವಿನಿಂದ 8 ರಿಂದ10 ಬಾರಿ ಎದೆ, ಹೊಟ್ಟೆ ಭಾಗಕ್ಕೆ ಇರಿದು ಕೊಂದಿದ್ದಾರೆ.
ಈ ವೇಳೆ, ಸುಮಾರು 10-15 ನಿಮಿಷ ರಕ್ತದ ಮಡುವಿನಲ್ಲಿ ಓಂ ಪ್ರಕಾಶ್ ನರಳಿ ನರಳಿ ಪ್ರಾಣ ಬಿಟ್ಟಿರುವುದು ಬೆಳಕಿಗೆ ಬಂದಿವೆ. ಈ ವೇಳೆ ಚಾಕುವಿನಿಂದ ಇರಿದಿದ್ದ ಪತ್ನಿ ಗಂಡನ ನರಳಾಟ ನೋಡುತ್ತಾ ನಿಂತಿದ್ದರಂತೆ.! ಕೆಳಗಿನ ಮಹಡಿಯ ಹಾಲ್ ಸಂಪೂರ್ಣ ರಕ್ತಸಿಕ್ತವಾಗಿತ್ತು. ಸ್ಥಳ ಮಹಜರು ನಡೆಸಿದ ಪೊಲೀಸರು, ಪತ್ನಿ ಪಲ್ಲವಿ ಮತ್ತು ಮಗಳನ್ನು ವಶಕ್ಕೆ ಪಡೆದ್ದಾರೆ. ಓಂ ಪ್ರಕಾಶ್ ಹತ್ಯೆಯಾದ ಸ್ಥಳದಲ್ಲಿದ್ದ ಚಾಕುವನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಮಗ ಸೊಸೆ ಊಟಕ್ಕೆಂದು ಹೊರಗಡೆ ಹೋದ ಸಂಧರ್ಭದಲ್ಲಿ ಓಂ ಪ್ರಕಾಶ್ ಅವರ ಹೆಂಡತಿ ಪಲ್ಲವಿ, ಮಗಳು ಕೃತಿಕಾ ಸೇರಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬೆನ್ನಲ್ಲೇ ಡಿಜಿ ಅಲೋಕ್ಮೋಹನ್, ಬೆಂಗಳೂರು ಕಮಿಷನರ್ ದಯಾನಂದ್ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹತ್ಯೆಯಾದ ಸ್ಥಳದ ಪರಿಶೀಲನೆ ನೆಡೆಸಿದರು.

ಓಂ ಪ್ರಕಾಶ್ ದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ಸಾಗಿಸಲಾಗಿದೆ. ಬಿಹಾರದ ಚಂಪಾರಣ್ ಮೂಲದ ಓಂ ಪ್ರಕಾಶ್ 1981ನೇ ಕೇಡರ್ನ ಐಪಿಎಸ್ ಅಧಿಕಾರಿ, ರಾಷ್ಟ್ರಪತಿಗಳ ಪದಕ ಪಡೆದಿದ್ದರು. 2015ರಲ್ಲಿ 3 ವರ್ಷ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು.ರೌಡಿಗಳ ಪಾಲಿಗೆ ಖಡಕ್ ಅಧಿಕಾರಿಯಾಗಿದ್ದ ಓಂ ಪ್ರಕಾಶ್ ರಾಜ್ಯದ 38ನೇ ಡಿಜಿ & ಐಜಿಪಿ ಆಗಿದ್ದ ಓಂ ಪ್ರಕಾಶ್ ಹತ್ಯೆ ಪತ್ನಿಯಿಂದಲೇ ನೆಡೆದಿರುವುದು ದುರಂತವೆ ಹೌದು..!?


