ಶಿವಮೊಗ್ಗ : ಅಧಿಕಲಾಭದ ಆಸೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ.ಯಾಮಾರಿ 2 ಕೋಟಿ ಕಳಕೊಂಡ ವೈದ್ಯ..!?
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ ಶಿವಮೊಗ್ಗ : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭದ ಆಸೆಗೆ ಬಿದ್ದು ಶಿವಮೊಗ್ಗ ಮೂಲದ ವೈದ್ಯರೊಬ್ಬರು 2 ಕೋಟಿ ರೂಪಾಯಿ ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.!
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ಫೇಸ್‌ಬುಕ್‌ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿದ ವೈದ್ಯರೊಬ್ಬರು ಸರಿಯಾಗಿ ತಿಳಿದುಕೊಂಡು ಹೂಡಿಕೆ ಮಾಡಬೇಕಾದ ವ್ಯಕ್ತಿ ಅರಿಯುವ ಮುನ್ನವೇ 2 ಕೋಟಿ ರೂಪಾಯಿ ಹೂಡಿಕೆಮಾಡಿ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ವೈದ್ಯರೊಬ್ಬರು ಜಾಹೀರಾತಿನ ಮೇಲಿನ ಲಿಂಕ್ ಕ್ಲಿಕ್ ಮಾಡಿ, ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿದ್ದಾರೆ. ಕೂಡಲೇ ಅವರನ್ನು ವಾಟ್ಸ್ಆ್ಯಪ್ ಗ್ರೂಪ್ ಒಂದಕ್ಕೆ ಸೇರಿಸಿಕೊಂಡು ಹೂಡಿಕೆ ಕುರಿತು ಮಾಹಿತಿ ನೀಡಲಾಗಿದೆ. ಆರಂಭದಲ್ಲಿ 5 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದ ವೈದ್ಯರಿಗೆ 65 ಸಾವಿರ ರೂ. ಲಾಭಾಂಶ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಂತರ 1.5 ಕೋಟಿ ರೂ. ಹೂಡಿಕೆ ಮಾಡಿದರೆ 25 ಕೋಟಿ ರೂ. ಲಾಭ ಗಳಿಸಬಹುದು ಎಂದು ನಂಬಿಸಿದ್ದರು. ಇಷ್ಟು ಹಣವಿರದ ಹಿನ್ನೆಲೆ ವೈದ್ಯರು ತಮ್ಮ ಇಬ್ಬರು ಸ್ನೇಹಿತರಿಂದ ಹಣ ಹೂಡಿಕೆ ಮಾಡಿಸಿದ್ದರು. ಲಾಭದಲ್ಲಿ ಮೂವರು ಹಂಚಿ ಕೊಳ್ಳುವ ಕುರಿತು ಮಾತನಾಡಿಕೊಂಡಿದ್ದರು. 1.50 ಕೋಟಿ ರೂ. ಹೂಡಿಕೆ ಮತ್ತು ತೆರಿಗೆ ಹಣವನ್ನು ಪಾವತಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹೂಡಿಕೆ ಮತ್ತು ಲಾಭಾಂಶದ ಕುರಿತು ವಿಚಾರಿಸಲು ಕರೆ ಮಾಡಿದಾಗ ವಂಚನೆಗೊಳಗಾಗಿದ್ದು ಅರಿವಿಗೆ ಬಂದಿದೆ. ಈ ಹಿನ್ನೆಲೆ 2.19 ಕೋಟಿ ರೂ. ವಂಚನೆಯಾಗಿದೆ ಎಂದು ಆರೋಪಿಸಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ…


