ಮಾನ್ಯ ಕಂದಾಯ ಸಚಿವರಾದ ಕೃಷ್ಣಭೈರೇಗೌಡರಿಗೆ ಬಡವರ ಪರ ಮನವಿ ಸಲ್ಲಿಸಿದ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ 13 ಸಾವಿರಕ್ಕೂ ಹೆಚ್ಚು ಬಡ ಕುಟುಂಬಗಳು ಮನೆ ಕಟ್ಟಿಕೊಂಡು ಹಲವಾರು ವರ್ಷಗಳಿಂದ ಬದುಕು ದೂಡುತ್ತಿದ್ದಾರೆ. ಸದರಿ ಮನೆಗಳಿಗೆ ಪಾಲಿಕೆ ವತಿಯಿಂದ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ. ಆದರೆ ಹಲವು ವರ್ಷಗಳು ಕಳೆದರೂ ಸದರಿ ಮನೆಗಳಿಗೆ ಖಾತೆ ಇಲ್ಲದೆ ಬಡವರು ಮಧ್ಯಮ ವರ್ಗದ ಜನ ಸರ್ಕಾರದ ಕೆಲವು ನಿಯಮಾವಳಿಗಳಿಂದ ಆತಂಕದಲ್ಲಿ ವಾಸಿಸುವಂತಾಗಿದೆ. ಅದ್ದರಿಂದ ಸರ್ಕಾರದಿಂದ ಅಕ್ರಮ ಸಕ್ರಮ ದಡಿಯಲ್ಲಿ ಸದರಿ ಕಂದಾಯ ಭೂಮಿಯಲ್ಲಿ ವಾಸುಸುತ್ತಿರುವ ಮನೆಗಳಿಗೆ ಖಾತೆ ಮಾಡಲು ಆದೇಶ ಮಾಡುವುದರಿಂದ ಪಾಲಿಕೆಗೆ ಆದಾಯ ತೆರಿಗೆ ಸಂದಾಯವಾಗುವುದರ ಜೊತೆಗೆ ಸದರಿ ನಿವಾಸಿಗಳಿಗೆ ಯಾವುದೇ ಆತಂಕ ಇಲ್ಲದೆ ಜೀವನ ನಡೆಸಲು ಸಹಕಾರಿಯಾಗುತ್ತದೆಂದು ಈ ಮೂಲಕ ವಿನಂತಿಸುತ್ತೇವೆ ಎಂದು
ಮಹಾನಗರ ಪಾಲಿಕೆಯ ವಿರೋಧಪಕ್ಷದ
ನಾಯಕಿ
ರೇಖಾ ರಂಗನಾಥ್ ಇಂದು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಕಂದಾಯ ಸಚಿವರಾದ ಕೃಷ್ಣಭೈರೇಗೌಡರಿಗೆ ಮನವಿ ಸಲ್ಲಿಸಿದರು.