ಶಿವಾನಿಯನ್ನು ಹೆತ್ತು, ಸಾಕಿ ಸಲಹಿದ ಆಕೆಯ ತಾಯಿಯೆ.!ಮಗಳ ಮದುವೆಗೆ ವಿಲನ್ ಆಗಿದ್ದಾಳೆ.ಮಗಳು ಮದುವೆಯಾಗಬೇಕಿದ್ದ ವರನೊಂದಿಗೆ (ಭಾವಿ ಅಳಿಯನ) ವಧುವಿನ ತಾಯಿ ಓಡಿ ಹೋಗಿದ್ದಾಳೆ.!
ಕಳೆದ ಕೆಲವು ಸಮಯದ ಹಿಂದಷ್ಟೇ ಶಿವಾನಿ ಮತ್ತು ರಾಹುಲ್ ಮದುವೆ ಎರಡು ಮನೆಯವರ ಹಿರಿಯರ ಸಮ್ಮುಖದಲ್ಲಿ ಮದುವೆ ನಿಶ್ಚಯವಾಗಿತ್ತು. ಆದರೆ ಶಿವಾನಿಯ ಜೊತೆಗೆ ವರ ರಾಹುಲ್ ಮಾತನಾಡುವುದಕ್ಕಿಂತ ಆಕೆಯ ತಾಯಿ ಅನಿತಾ ಜೊತೆಗೇ ಮಿತಿ ಮೀರಿ ಮಾತನಾಡುತ್ತಿದ್ದನಂತೆ. ಭಾವಿ ಅಳಿಯ ಅತ್ತೆ ಆಗುವವರ ಜೊತೆಗೆ ಮಾತನಾಡುತ್ತಿದ್ದಾನೆ ಎಂದು ಎಲ್ಲರೂ ಈ ಬಗ್ಗೆ ತಲೆ ಕೆಡಸಿಕೊಳ್ಳದೆ ಸುಮ್ಮನಾಗಿದ್ದರು. ಆದರೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ರಾಹುಲ್ – ಅನಿತಾರ ನಡುವೆ ಮಾತಿಗೆ ನಡುವೆ ಸಲುಗೆ ಬೆಳೆದು ಪ್ರೀತಿಗೆ ಜಾರಿದೆ.
ಉತ್ತರ ಪ್ರದೇಶ: ಮಗಳ ಮದುವೆಗೆ ಒಂದೆರಡು ದಿನ ಇರುವಾಗಲೇ ಭಾವಿ ಅಳಿಯನ ಜತೆ ಓಡಿಹೋದ ವಧುವಿನ ತಾಯಿ.!
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಶಿವಮೊಗ್ಗ :ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನೆಡೆದಿದೆ,ಮಗಳ ಮದುವೆಗೆ ಒಂದೆರಡು ದಿನ ಇರುವಾಗಲೇ ಮಗಳನ್ನು ಮದುವೆಯಾಗಬೇಕಿದ್ದ ವರನ ಜೋತೆಗೆ ವಧುವಿನ ತಾಯಿ ಓಡಿಹೋದ ಪ್ರಕರಣ ನೆಡೆದಿದೆ.!
ವರನ ಮತ್ತು ವಧುವಿನ ಮನೆಯಲ್ಲಿ ಮದುವೆಗೆ ಸಿದ್ಧತೆ ಜೋರಾಗಿ ನಡೆಯುತ್ತಿತ್ತು.ಇನ್ನೇನು ಮದುವೆಗೆ ಒಂದೆರಡು ದಿನ ಬಾಕಿ ಇತ್ತು. ಮದುವೆ ಆಹ್ವಾನ ಪತ್ರಿಕೆಕೂಡ ಸಂಬಂಧಿಕರು ಮತ್ತು ಸ್ನೇಹಿತರು ಹಾಗೂ ಆತ್ಮೀಯರ ಕೈ ಸೇರಿತ್ತು ಎಲ್ಲವೂ ಅಂದುಕೊಂಡಂತೆ ನೆಡೆದಿತ್ತು.ವಧು ಕೂಡ ವರನ ಮನೆ ಸೇರುವ ಖುಷಿಯಲ್ಲಿದ್ದಳು. ಇನ್ನೇನು ಮದುವೆಗೆ 10 ವಿದ್ದ ಕಾರಣಕ್ಕೆ ತಯಾರಿಕೂಡ ಜೋರಾಗಿಯೆ ನೆಡೆಯುತ್ತಿತ್ತು. ಆದರೆ ಅಲ್ಲಿ ನೆಡದದ್ದೇ ಬೇರೆ.!

ಉತ್ತರ ಪ್ರದೇಶದ ಅಲಿಗಢದ ಮದ್ರಾಕ್ ಪೊಲೀಸ್ ಠಾಣೆ ಸರಹದ್ದಿನ ಹಳ್ಳಿಯೊಂದರ ಯುವತಿ ಶಿವಾನಿ. ಈಕೆಯ ವಿವಾಹ ರಾಹುಲ್ ಎನ್ನುವವನ ಜೊತೆಗೆ ಏ.16 ರಂದು ನಿಗದಿಯಾಗಿತ್ತು. ಈಗಾಗಲೇ ಮದುವೆಗೆ ಸಂಬಂಧಿಸಿದ ಎಲ್ಲ ತಯಾರಿಗಳನ್ನು ಮಾಡಿಟ್ಟುಕೊಂಡು ಮದುವೆಯ ದಿನಕ್ಕಾಗಿ ವರ ಮತ್ತು ವಧುವಿನ ಮನೆಯವರು ಕಾಯುತ್ತಿದ್ದರು. ಆದರೆ ಮದುವೆ ಆಗಬೇಕಿದ್ದ ವರ ವಧುವಿನ ಜೊತೆಗೆ ಮದುವೆಯಾಗುವುದನ್ನು ಬಿಟ್ಟು ವಧುವಿನ ತಾಯಿಯನ್ನು ಕರೆದುಕೊಂಡು ಎಸ್ಕೇಪ್ ಆಗಿದ್ದಾನೆ.

ಶಿವಾನಿಯನ್ನು ಹೆತ್ತು, ಸಾಕಿ ಸಲಹಿದ ಆಕೆಯ ತಾಯಿಯೆ.!ಮಗಳ ಮದುವೆಗೆ ವಿಲನ್ ಆಗಿದ್ದಾಳೆ.ಮಗಳು ಮದುವೆಯಾಗಬೇಕಿದ್ದ ವರನೊಂದಿಗೆ (ಭಾವಿ ಅಳಿಯನ) ವಧುವಿನ ತಾಯಿ ಓಡಿ ಹೋಗಿದ್ದಾಳೆ.!
ಕಳೆದ ಕೆಲವು ಸಮಯದ ಹಿಂದಷ್ಟೇ ಶಿವಾನಿ ಮತ್ತು ರಾಹುಲ್ ಮದುವೆ ಎರಡು ಮನೆಯವರ ಹಿರಿಯರ ಸಮ್ಮುಖದಲ್ಲಿ ಮದುವೆ ನಿಶ್ಚಯವಾಗಿತ್ತು. ಆದರೆ ಶಿವಾನಿಯ ಜೊತೆಗೆ ವರ ರಾಹುಲ್ ಮಾತನಾಡುವುದಕ್ಕಿಂತ ಆಕೆಯ ತಾಯಿ ಅನಿತಾ ಜೊತೆಗೇ ಮಿತಿ ಮೀರಿ ಮಾತನಾಡುತ್ತಿದ್ದನಂತೆ. ಭಾವಿ ಅಳಿಯ ಅತ್ತೆ ಆಗುವವರ ಜೊತೆಗೆ ಮಾತನಾಡುತ್ತಿದ್ದಾನೆ ಎಂದು ಎಲ್ಲರೂ ಈ ಬಗ್ಗೆ ತಲೆ ಕೆಡಸಿಕೊಳ್ಳದೆ ಸುಮ್ಮನಾಗಿದ್ದರು. ಆದರೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ರಾಹುಲ್ – ಅನಿತಾರ ನಡುವೆ ಮಾತಿಗೆ ನಡುವೆ ಸಲುಗೆ ಬೆಳೆದು ಪ್ರೀತಿಗೆ ಜಾರಿದೆ.
ಪರಿಣಾಮ ಶಿವಾನಿ ಮದುವೆಗೆ ಹತ್ತುದಿನ ಇರುವಂತೆಯೇ ರಾಹುಲ್ ಮತ್ತು ಅನಿತಾ ಓಡಿ ಹೋಗಿದ್ದಾರೆ, ಈ ಘಟನೆಯಿಂದ ಎರಡು ಕುಟುಂಬದವರಿಗೂ ಆಘಾತವಾಗಿದೆ.!

ಓಡಿ ಹೋದ ಅಮ್ಮನ ಬಗ್ಗೆ ಮಗಳು ಶಿವಾನಿ (ವಧು) ಹೇಳೋದೇನು.?
“ನಾನು ಏಪ್ರಿಲ್ ಹದಿನಾರನೇ ತಾರೀಖಿನಂದು ರಾಹುಲ್ ಜೊತೆಗೆ ಮದುವೆಯಾಗಿ ಸಪ್ತಪದಿ ತುಳಿಯಬೇಕಿತ್ತು. ಆದರೆ ನನ್ನ ಹೆತ್ತ ತಾಯಿ ನಾನು ಮದುವೆಯಾಗ ಬೇಕಿದ್ದ ಹುಡುಗನೊಂದಿಗೆ ಓಡಿಹೋಗಿದ್ದಾಳೆ. ರಾಹುಲ್ ಮತ್ತು ನನ್ನ ತಾಯಿ ಕಳೆದ ಮೂರು ನಾಲ್ಕು ತಿಂಗಳುಗಳಿಂದ ಫೋನ್ನಲ್ಲಿ ಸಾಕಷ್ಟು ಮಾತನಾಡುತ್ತಿದ್ದರು. ನಮ್ಮ ಅಲ್ಮೆರಾದಲ್ಲಿ 3.5 ಲಕ್ಷ ರೂಪಾಯಿ ನಗದು ಮತ್ತು 5 ಲಕ್ಷ ರೂಪಾಯಿಗೂ ಹೆಚ್ಚಿನ ಮೌಲ್ಯದ ಆಭರಣಗಳಿದ್ದವು. ರಾಹುಲ್ ಕೇಳಿದ್ದನ್ನೆಲ್ಲಾ ನನ್ನ ತಾಯಿ ಕೊಟ್ಟಿದ್ದಾಳೆ.? 10 ರೂಪಾಯಿಯನ್ನೂ ಬಿಡದೆ ನನ್ನ ತಾಯಿ ನಮ್ಮ ಎಲ್ಲಾ ಹಣವನ್ನು ತೆಗೆದುಕೊಂಡು ಹೋಗಿದ್ದಾಳೆ.! ಎಂದು ಶಿವಾನಿ ಹೇಳಿದ್ದಾರೆ.
“ಅವರು ಈಗ ಏನು ಬೇಕಾದರೂ ಮಾಡಿಕೊಳ್ಳಲಿ, ನಮಗೆ ಅದು ಬೇಕಾಗಿಲ್ಲ. ನಮ್ಮ ಹಣ ಮತ್ತು ಆಭರಣಗಳು ನಮಗೆ ಹಿಂತಿರುಗಿಸಬೇಕಷ್ಟೆ ಎಂದು ಶಿವಾನಿ ಹೇಳಿದ್ದಾರೆ.
ನಾನು ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿದ್ದೇನೆ. ನನ್ನ ಹೆಂಡತಿ ಅನಿತಾ ನನ್ನ ಮಗಳ ಜೊತೆಗೆ ಮದುವೆಯಾಗಬೇಕಿದ್ದ ಹುಡುಗನ ( ಅಳಿಯ ) ಜೊತೆಗೆ ಓಡಿ ಹೋಗಿದ್ದಾಳೆ.! ರಾಹುಲ್ಗೆ ನನ್ನ ಮಗಳ ಜೊತೆಗೆ ಮದುವೆ ನಿಶ್ಚಿಯವಾದ ದಿನದಿಂದಲೂ ನನ್ನ ಹೆಂಡತಿ ಗಂಟೆಗಟ್ಟಲೆ ರಾತ್ರಿ ಹಗಲು ಮಾತನಾಡುತ್ತಿದ್ದಳು. ಆದರೆ ನಾನು ಹೆಚ್ಚು ತಲೆಕೆಸಿಕೊಳ್ಳದೆ ಮದುವೆ ಶೀಘ್ರದಲ್ಲೇ ಇದ್ದದ್ದರಿಂದ ಏನನ್ನೂ ಹೇಳದಿರಲು ನಿರ್ಧರಿಸಿ ಸುಮ್ಮನಾಗಿದ್ದೆ ಎಂದು ಶಿವಾನಿಯ ತಂದೆ ಜಿತೇಂದ್ರ ಕುಮಾರ್ ಹೇಳಿದಾರೆ.
ಆದರೆ ರಾಹುಲ್ ನನ್ನ ಮಗಳ ಜೊತೆ ಮಾತನಾಡುತ್ತಿರಲಿಲ್ಲ. ಬದಲಾಗಿ ನನ್ನ ಹೆಂಡತಿ ಜೊತೆಗೆ ಮಾತನಾಡುತ್ತಲೇ ಇರುತ್ತಿದ್ದ. ನಾನು ನನ್ನ ವ್ಯವಹಾರ ನಡೆಸಲು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೆ. ಕಳೆದ ಮೂರು ತಿಂಗಳಿನಿಂದ ಅವರು ದಿನಕ್ಕೆ 22 ಗಂಟೆಗಳ ಕಾಲ ಪರಸ್ಪರ ಮಾತನಾಡುತ್ತಿದ್ದರು ಎಂದು ನಾನು ಕೇಳಿದ್ದೇನೆ. ನನಗೆ ಅನುಮಾನ ಬಂತು ಆದರೆ ಮದುವೆ ಹತ್ತಿರದಲ್ಲಿದ್ದ ಕಾರಣ ಏನನ್ನೂ ಹೇಳಲು ಸಾಧ್ಯವಾಗಿರಲಿಲ್ಲ.ಆದರೆ ನನ್ನ ಹೆಂಡತಿ ಅನಿತಾ ಏಪ್ರಿಲ್ 6 ರಂದು ರಾವುಲ್ ಜೊತೆಗೆ ನಮ್ಮ ಮನೆಯಲ್ಲಿದ್ದ ಎಲ್ಲಾ ನಗದು ಮತ್ತು ಚಿನ್ನದ ಒಡವೆಗಳನ್ನು ತೆಗೆದುಕೊಂಡು ಹೋಗಿದ್ದಾಳೆ.!ಎಂದು ಜಿತೇಂದ್ರ ಕುಮಾರ್ ಹೇಳಿಕೆ ನೀಡಿದ್ದಾರಂತೆ.?

ಅವಳು(ಹೆಂಡತಿ) ಓಡಿಹೋದ ಮೇಲೆ ನಾನು ಅವಳಿಗೆ ಸಾಕಷ್ಟು ಬಾರಿ ಕರೆ ಮಾಡಿದೆ. ಆದರೆ ಅವಳು ತನ್ನ ಫೋನ್ ಸ್ವಿಚ್ ಆಫ್ ಮಾಡಿದ್ದಳು. ನಾನು ಆ ವ್ಯಕ್ತಿಗೂ ಕರೆ ಮಾಡಿದೆ. ಆದರೆ ಅವನು ಅವಳು ತನ್ನೊಂದಿಗೆ ಇಲ್ಲ ಎಂದು ನಿರಾಕರಿಸುತ್ತಲೇ ಇದ್ದ. ಕೆಲವು ಗಂಟೆಗಳ ನಂತರ ರಾಹುಲ್ ನನಗೆ ಕಾಲ್ಮಾಡಿ ನಿನು ನಿನ್ನ ಹೆಂಡತಿಗೆ ಕಳೆದ 20 ವರ್ಷಗಳಿಂದಲೂ ಕಷ್ಟ ಕೊಡುತ್ತಿದ್ದಿಯಂತೆ. ಅವಳನ್ನು ಮರೆತುಬಿಡಿ ಎಂದು ಹೇಳಿದ್ದ. ಆ ನಂತರ ಅವನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ.! ಎಂದು ಜಿತೇಂದ್ರ ಹೇಳಿದ್ದಾರೆ.
ಸದ್ಯ ಜಿತೇಂದ್ರ ಹೆಂಡತಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದಾರೆ. ಪೊಲೀಸರು ಅನಿತಾನ್ನು ಹುಡುಕುತ್ತಿದ್ದಾರೆ ಎಂದು ತಿಳಿದು ಬಂದಿದೆ.


