ಹತ್ಯೆಯಾದ ಗಗನಸಖಿ ರೂಪಾಲ್ ಓಗ್ರೆ
ಮುಂಬೈ: ತರಬೇತಿ ಪಡೆಯುತ್ತಿದ್ದ ಇಪ್ಪತೈದು ವರ್ಷದ ಗಗನಸಖಿ ಶವವಾಗಿ ಪತ್ತೆಯಾಗಿರುವ ಘಟನೆ ಕಳೆದ ಎರಡು ದಿನಗಳ ಹಿಂದೆ ಮುಂಬೈನಲ್ಲಿ ನಡೆದಿರುವುದು ಬೆಳಕಿಗೆ ಬಂದಿತ್ತು. ಛತ್ತೀಸ್ ಗಢ ಮೂಲದ ರೂಪಾ ಓಗ್ರೆ ಎಂಬ ಯುವತಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಏರ್ ಇಂಡಿಯಾದಿಂದ ಗಗನಸಖಿ ತರಬೇತಿಗಾಗಿ ಆಯ್ಕೆಯಾದ ನಂತರ ಮುಂಬೈಗೆ ಸ್ಥಳಾಂತರಗೊಂಡಿರುವುದಾಗಿ ವರದಿ ತಿಳಿಸಿತ್ತು.
ರೂಪಾ ಅಂಧೇರಿಯಲ್ಲಿರುವ ಪ್ಲಶ್ ಹೌಸಿಂಗ್ ಸೊಸೈಟಿಯಲ್ಲಿ ತನ್ನ ಅಕ್ಕ ಹಾಗೂ ಆಕೆಯ ಬಾಯ್ ಫ್ರೆಂಡ್ ಜೊತೆಗೆ ವಾಸವಾಗಿದ್ದಳು. ಕೆಲವು ದಿನಗಳ ಹಿಂದಷ್ಟೇ ಅಕ್ಕ ಮತ್ತು ಆಕೆಯ ಬಾಯ್ ಫ್ರೆಂಡ್ ಊರಿಗೆ ತೆರಳಿದ್ದರು. ಮನೆಯಲ್ಲಿ ರೂಪ ಒಬ್ಬಳೆ ಇರುವುವುದನ್ನೂ ಖಾತ್ರಿ ಮಾಡಿಕೊಂಡ ಹಂತಕ ಆಕೆಯ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು!
ಗಗನಸಖಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್: ಲೈಂಗಿಕ ದೌರ್ಜನ್ಯ ಎಸಗಿ ಕತ್ತು ಸೀಳಿ ಬರ್ಬರ ಹತ್ಯೆ!
news.ashwasurya.in
ಕೊಲೆಯಾದ ಬಳಿಕ ನಗರದ ಪೋವೈಯಲ್ಲಿರುವ ತನ್ನ ಮನೆಗೆ ಹೋಗಿದ್ದ ಆರೋಪಿ ವಿಕ್ರಮ್‌ನನ್ನು ಪೊಲೀಸರು ಅಲ್ಲಿಂದಲೇ ಬಂಧಿಸಿದ್ದಾರೆ. ಇನ್ನೂ ಆರೋಪಿ, ರೂಪಾಲ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಶಂಕಿಸಲಾಗಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ.
ಮುಂಬೈ (ಸೆಪ್ಟೆಂಬರ್ 5, 2023): ಏರ್ ಇಂಡಿಯಾ ಪವಿಮಾನಯಾನ ಸಂಸ್ಥೆಯಲ್ಲಿ ಗಗನಸಖಿಯಾಗಿ ತರಬೇತಿ ಪಡೆಯುತ್ತಿದ್ದ ಛತ್ತೀಸ್‌ಗಢದ ಮೂಲದ ರೂಪಾಲ್ ಓಗ್ರೆ (24) ಎಂಬ ಯುವತಿಯನ್ನು ಆಕೆ ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಕತ್ತು ಸೀಳಿ ಕೊಲೆ ಮಾಡಿರುವ ಭೀಕರ ಘಟನೆ ಮುಂಬೈಯಲ್ಲಿ ನಡೆದಿದೆ. ಅಪಾರ್ಟ್‌ಮೆಂಟ್‌ನಲ್ಲಿ ಭಾನುವಾರ ರಾತ್ರಿ ಶವವಾಗಿ ಪತ್ತೆಯಾಗಿದ್ದಳು ಗಗನಸಖಿ ರೂಪಲ್ ಓಗ್ರೆ. ಈ ಪ್ರಕರಣವನ್ನು ಕೈಗೆತ್ತಿಕೊಂಡ ಮುಂಬೈ ಪೋಲಿಸರು ತನಿಖೆ ಚುರುಕುಗೊಳಿಸಿದರು ಹಂತಕನ ಹೆಡೆಮುರಿಕಟ್ಟಲು ಪೋಲಿಸರ ಹನ್ನೇರಡು ತಂಡವನ್ನು ರಚಿಸಲಾಗಿತ್ತು. ಕಾರ್ಯಾಚರಣೆಗೆ ಇಳಿದ ಪೋಲಿಸರ ತಂಡ ಆರೋಪಿ ವಿಕ್ರಮ್ ಅಥ್ವಾಲ್ (40) ಎಂಬಾತನನ್ನು ಬಂಧಿಸಿದ್ದಾರೆ.
ಕೊಲೆಮಾಡಿದ ಬಳಿಕ ಆರೋಪಿ ನಗರದ ಪೋವೈಯಲ್ಲಿರುವ ತನ್ನ ಮನೆಗೆ ಹೋಗಿದ್ದ ವಿಕ್ರಮ್‌ನನ್ನು ಪೊಲೀಸರು ಅಲ್ಲೆ ಬಂಧಿಸಿದ್ದಾರೆ. ಇನ್ನೂ ಆರೋಪಿ ರೂಪಾಲ್ ಓಗ್ರೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಶಂಕಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಹತ್ಯೆಯಾದ ದಿನ ರೂಪಲ್ ಅವರ ಕುಟುಂಬದವರು ಆಕೆಯ ಮೊಬೈಲ್ ಕರೆಮಾಡಿದ್ದಾರೆ ( ಭಾನುವಾರ ) ಆಕೆ ಯಾವುದೇ ಕರೆಗಳನ್ನು ಸ್ವೀಕರಿಸದಿದ್ದಾಗ ರೂಪಲ್ ಓಗ್ರೆ ಅವರ ಕುಟುಂಬವು ಅವರ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ಕೂಡಲೇ ಸ್ನೇಹಿತರು ಅಪಾರ್ಟ್‌ಮೆಂಟ್‌ಗೆ ಹೋಗಿ ನೋಡಿದಾಗ ಒಳಗಿನಿಂದ ಬೀಗ ಹಾಕಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಅಪಾರ್ಟ್‌ಮೆಂಟ್ ತೆರಳಿ ಸ್ಥಳ ಪರಿಶೀಲನೆ ನೆಡೆಸಿ ಮನೆಯ ಒಳಗೆ ಅನಾಹುತ ಆಗಿರುವ ಅನುಮಾನದ ಹಿನ್ನೆಲೆಯಲ್ಲಿ ಕೂಡಲೇ ಮನೆಯ ಬೀಗವನ್ನು ಒಡೆದು ಒಳ ಹೋಗಿ ನೋಡಿದರೆ ರೂಪಾಲ್ ಓಗ್ರೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ವೈದ್ಯರನ್ನು ತಲುಪುವಷ್ಟರಲ್ಲಿ ರೂಪಗ್ರೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕೂಡಲೇ ಹಂತಕನ ಬೇಟೆಗೆ ಹನ್ನೆರಡು ಪೋಲಿಸ್ ತಂಡವನ್ನು ರಚಿಸಿ ಕಾರ್ಯಚರಣೆಗೆ ಇಳಿದು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತ ಹೌಸಿಂಗ್ ಸೊಸೈಟಿಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿರುವ 40 ವರ್ಷದ ವಿಕ್ರಮ್ ಅತ್ವಾಲ್ ಎಂದು ತಿಳಿದುಬಂದಿದೆ. ಸದ್ಯ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ. ಪ್ರಮುಖ ಆರೋಪಿ ವಿಕ್ರಮ್ ಅತ್ವಾಲ್‌ನನ್ನು ಬಂಧಿಸಲಾಗಿದ್ದು ಇನ್ನಷ್ಟು ತನಿಖೆ ಚುರುಕುಗೊಂಡಿದೆ. ಹೌಸಿಂಗ್ ಸೊಸೈಟಿಯಲ್ಲಿನ ಭದ್ರತಾ ಕ್ಯಾಮೆರಾಗಳನ್ನು ಮಾಹಿತಿಯನ್ನು ಕಲೆಹಾಕಲು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಪ್ಲೆಕ್ಸ್‌ನಲ್ಲಿ ಹೌಸ್‌ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಅತ್ವಾಲ್ ಪತ್ನಿಯನ್ನೂ ಪೊಲೀಸರು ವಿಚಾರಣೆ ಒಳಪಡಿಸಿದ್ದಾರೆ ಎಂದೂ ತಿಳಿದುಂದಿದೆ.
ಸುಧೀರ್ ವಿಧಾತ, ಶಿವಮೊಗ್ಗ