Medical College: ದೆಹಲಿಯ AIIMS ದೇಶದ ನಂಬರ್ 1 ಮೆಡಿಕಲ್ ಕಾಲೇಜ್.! ಹೌದು ನೀವು ನಂಬಲೆ ಬೇಕು ಇಲ್ಲಿ ಕೇವಲ ಎಂಟು ಸಾವಿರಕ್ಕೆ MBBS ಶಿಕ್ಷಣ ಪಡೆಯಬಹುದು.!!
news.ashwasurya.in/Shivamogga
ಅಶ್ವಸೂರ್ಯ/ದೆಹಲಿ : ನಮ್ಮ ದೇಶದಲ್ಲಿ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳ ಬಗ್ಗೆ ಹೇಳಲು ಹೊರಟರೆ ಹಲವು ವೈದ್ಯಕೀಯ ವಿದ್ಯಾ ಸಂಸ್ಥೆಗಳು ತಮ್ಮ ಶಿಕ್ಷಣದ ಗುಣಮಟ್ಟ, ಸಂಶೋಧನೆ ಮತ್ತು ಆರೋಗ್ಯ ಸೇವೆಗಳಿಂದಲೆ ಸಾಕಷ್ಟು ಹೆಗ್ಗಳಿಕೆಯೊಂದಿಗೆ ಮುಂಚೂಣಿಯಲ್ಲಿವೆ. ಆದರೂ ಇದರ ನಡುವೆ ಒಂದು ಕಾಲೇಜನ್ನು “ಅತ್ಯುತ್ತಮ” ಎಂದು ಗುರುತಿಸುವುದು ವಿದ್ಯಾರ್ಥಿಗಳ ಆದ್ಯತೆ, ಶ್ರೇಯಾಂಕಗಳು ಮತ್ತು ಲಭ್ಯವಿರುವ ಸೌಲಭ್ಯಗಳಿಂದ ದೆಹಲಿಯ AIIMS ಹೆಸರುವಾಸಿಯಾಗಿದೆ. ರಾಷ್ಟ್ರೀಯ ಸಂಸ್ಥೆ ಶ್ರೇಯಾಂಕ ಚೌಕಟ್ಟು (NIRF) ಶ್ರೇಯಾಂಕಗಳ ಪ್ರಕಾರ, ಇದು ದೇಶದ ನಂಬರ್ ಒನ್ ವೈದ್ಯಕೀಯ ಕಾಲೇಜಾಗಿ ಸ್ಥಾನ ಪಡೆದಿತ್ತು. ನೀಟ್ ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿ ತೇರ್ಗಡೆಯಾದವರಲ್ಲಿ ಹೆಚ್ಚಿನವರು ಈ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಮಾಡುಲು ಮುಂದಾಗುತ್ತಾರೆ.ಇಲ್ಲಿ ಒಂದು ವರ್ಷದ MBBS ಶುಲ್ಕ ಸುಮಾರು 1,648 ರೂ., ಅಂದರೆ ಕೇವಲ 8,240 ರೂ.ಗಳಿಗೆ ವೈದ್ಯಕೀಯ ವಿದ್ಯಾರ್ಥಿಗಳು MBBS ಪೂರ್ಣಗೊಳಿಸಬಹುದು.!! ಎಂತಹ ಪರಿಸ್ಥಿತಿಯಲ್ಲಿ ದೇಶದ ನಂಬರ್ 1 ವೈದ್ಯಕೀಯ ಕಾಲೇಜನ್ನು ಯಾರು ಸ್ಥಾಪಿಸಿದರು ಮತ್ತು ಹೇಗೆ ಎಂದು ನಾವು ತಿಳಿಯೋಣ.? ಈ ಕಾಲೇಜಿನಲ್ಲಿ ಓದಲು ಅವಕಾಶ ಸಿಕ್ಕರೆ ಕೇವಲ 8,000 ರೂಪಾಯಿಗಳಿಗೆ ಪೂರ್ಣ ಕೋರ್ಸ್ ಮುಗಿಸಬಹುದು.!
ಹೌದು ದೆಹಲಿ ಏಮ್ಸ್ (AIIMS Delhi) ಭಾರತದಲ್ಲಿ ಅತ್ಯುತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.ಜೊತೆಗೆ ಇದು ನಮ್ಮದೇಶದ ನಂಬರ್ ಒನ್ ವೈದ್ಯಕೀಯ ವಿದ್ಯಾ ಸಂಸ್ಥೆಯಾಗಿ ಹೆಸರುವಾಸಿಯಾಗಿದೆ. ಇಲ್ಲಿ ಎಂಬಿಬಿಎಸ್ (MBBS) ಶಿಕ್ಷಣವನ್ನು ತುಂಬಾ ಕಡಿಮೆ ವೆಚ್ಚದಲ್ಲಿ ಪಡೆಯಬಹುದು, ಸುಮಾರು 8,000 ರೂಪಾಯಿಗಳಿಗೆ ಪೂರ್ಣ ಕೋರ್ಸ್ ಮುಗಿಸಬಹುದು ಎಂಬುದು ನಿಜವಾಗಿಯೂ ಗಮನಾರ್ಹ ಸಂಗತಿ.ಕೆಲವರು ಇದನ್ನು ನಂಬುವುದು ಕಷ್ಟ. ಸರ್ಕಾರದ ಸಬ್ಸಿಡಿ ಮತ್ತು ಏಮ್ಸ್‌ನ ಗುಣಮಟ್ಟದ ಶಿಕ್ಷಣದ ಬದ್ಧತೆಯಿಂದ ಸಾಧ್ಯವಾಗಿದೆ. ಇದರ ಜೊತೆಗೆ,AIIMS ಕಾಲೇಜಿನ ಪ್ರವೇಶಕ್ಕಾಗಿ NEET ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯುವುದು ಅಗತ್ಯವಿದೆ.? ಕಾರಣ ಈ ಕಾಲೇಜಿನಲ್ಲಿ ಸೀಟುಗಳನ್ನು ಪಡೆಯಲು ತೀವ್ರ ಪೈಪೋಟಿಯೆ ಇರುತ್ತದೆ.
ಈ ವೈದ್ಯಕೀಯ (AIIMS) ಕಾಲೇಜು ಮೊದಲ ಆರೋಗ್ಯ ಸಚಿವೆಯಿಂದ ಸ್ಥಾಪನೆ
AIIMS ಕಾಲೇಜನ್ನು ರಾಜಕುಮಾರಿಯೊಬ್ಬರು ಸ್ಥಾಪಿಸಿದರು.!? ಹೌದು, ಆ ರಾಜಕುಮಾರಿಯ ಹೆಸರು ಅಮೃತ್ ಕೌರ್ ಇವರು, ಭಾರತದ ಮೊದಲ ಆರೋಗ್ಯ ಸಚಿವೆಯಾಗಿದ್ದಾರೆ. ಇನ್ನೂ ಏಮ್ಸ್ ಸ್ಥಾಪನೆಯ ಅಗಿದ್ದು 1956 ನೇ ಇಸವಿಯಲ್ಲಿ.! 69 ವರ್ಷವನ್ನು ಪೂರೈಸಿದೆ.! ಭಾರತ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಉತ್ತಮ ವೈದ್ಯಕೀಯ ಶಿಕ್ಷಣಕ್ಕಾಗಿ ಒಂದು ಸಂಸ್ಥೆಯ ಅಗತ್ಯವನ್ನು ಎತ್ತಿ ತೋರಿಸಿದಾಗ, ಆ ಸಮಯದಲ್ಲಿ ಸಂಪನ್ಮೂಲಗಳು ಮತ್ತು ನಿಧಿಯ ಕೊರತೆ ಇತ್ತು.
ಆದರಂತೆ 1956 ರಲ್ಲಿ, ಭಾರತ ಸರ್ಕಾರ ನಡೆಸಿದ ಸಮೀಕ್ಷೆಯು ಸ್ನಾತಕೋತ್ತರ ವೈದ್ಯಕೀಯ ಸಂಸ್ಥೆಯನ್ನು ಸ್ಥಾಪಿಸಲು ಶಿಫಾರಸು ಮಾಡಿತು, ಆದರೆ ಅದರ ನಿರ್ಮಾಣಕ್ಕೆ ಬೇಕಾದ ಹಣದ ಪ್ರಮಾಣವು ತೀವ್ರ ಯೋಚಿಸುವಂತೆ ಮಾಡಿತು.ಅಂದು ಆರೋಗ್ಯ ಸಚಿವೆಯಾಗಿದ್ದ ರಾಜಕುಮಾರಿ ಅಮೃತ್ ಕೌರ್ ಕಾಲೇಜು ಸ್ಥಾಪನೆಗಾಗಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದರು ಮತ್ತು ಏಮ್ಸ್‌ಗೆ ಅಗತ್ಯವಾದ ಹಣವನ್ನು ಸಂಗ್ರಹಿಸಲು ಅವರಿಗೆ 10 ವರ್ಷಗಳು ಬೇಕಾಯಿತು.
ಏಮ್ಸ್ ಸ್ಥಾಪನೆಗೆ ಅಡಿಪಾಯ ಹಾಕಿದ ರಾಜಕುಮಾರಿ,
ಅಂತಿಮವಾಗಿ ಆಗಿನ ಆರೋಗ್ಯ ಸಚಿವೆಯಾಗಿದ್ದ ರಾಜಕುಮಾರಿ ಅಮೃತ್ ಕೌರ್ ಫೆಬ್ರವರಿ 18, 1956 ರಂದು ಲೋಕಸಭೆಯಲ್ಲಿ ಹೊಸ ಮಸೂದೆಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಅವರು, ದೇಶದಲ್ಲಿ ಸ್ನಾತಕೋತ್ತರ ಅಧ್ಯಯನ ಮತ್ತು ವೈದ್ಯಕೀಯ ಶಿಕ್ಷಣದ ಉನ್ನತ ಮಟ್ಟವನ್ನು ಕಾಯ್ದುಕೊಳ್ಳಲು, ಯುವಕರು ತಮ್ಮದೇ ದೇಶದಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮುಂದುವರಿಸಲು ಪ್ರೇರೇಪಿಸುವ ಸಂಸ್ಥೆಯ ಅವಶ್ಯಕತೆಯಿದೆ’ ಎಂದು ಹೇಳಿದರು. ಆ ಸಮಯದಲ್ಲಿ ರಾಜಕುಮಾರಿ ಅಮೃತ್ ಕೌರ್ ಕೂಡ “ಇದು ಭಾರತ ಯಾವಾಗಲೂ ಹೆಮ್ಮೆಪಡುವ ವಿಷಯವಾಗಲಿದೆ ಎಂದು ನಾನು ಹೇಳಲು ಬಯಸುತ್ತೇನೆ ಮತ್ತು ಭಾರತವು ಭಾರತದ ಪ್ರಜೆಗಳು ಇದರ ಬಗ್ಗೆ ಹೆಮ್ಮೆ ಪಡಬೇಕೆಂದು ನಾನು ಬಯಸುತ್ತೇನೆ” ಎಂದು ಹೇಳಿದರು. ಹೀಗಾಗಿ, 1956 ರಲ್ಲಿ, ಸಂಸತ್ತಿನ ಎರಡೂ ಸದನಗಳು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಾಯ್ದೆಯನ್ನು ಅಂಗೀಕರಿಸಿದವು, ಅದರ ನಂತರ ಏಮ್ಸ್‌ಗೆ ಅಡಿಪಾಯ ಹಾಕಲಾಗಿತ್ತು.
ಇಂದು ಉನ್ನತ ಶಿಕ್ಷಣದ ಜೋತೆಗೆ ದೇಶದ ಹೆಸರಾಂತ ವೈದ್ಯಕೀಯ ಕಾಲೇಜುಗಳ ಪಟ್ಟಿಯಲ್ಲಿ AIIMS ಕಂಗೊಳಿಸುತ್ತಿದೆ.MBBS ನ ಕನಸು ಹೊತ್ತ ಅದೆಷ್ಟೋ ವಿದ್ಯಾರ್ಥಿಗಳು ದೆಹಲಿಯ AIIMS ಕಾಲೇಜಿನಲ್ಲಿ ಓದಲು ತುದಿಗಾಲಿನಲ್ಲಿ ನಿಂತಿರುತ್ತಾರೆ.ಅದರೆ ಅಷ್ಟು ಸುಲಭದ ಮಾತಲ್ಲ.! ಅದಕ್ಕೆ ತಕ್ಕ ಶ್ರಮಹಾಕಿದರೆ ಕನಸು ನನಸಾಗುವುದರಲ್ಲಿ ಸಂದೇಹವಿಲ್ಲ.ವೈದ್ಯಕೀಯ ಕನಸು ಹೊತ್ತು ಪಿಯುಸಿ ಓದುವ ವಿದ್ಯಾರ್ಥಿಗಳು ಶಕ್ತಿ ಮೀರಿ ಓದಬೇಕಿದೆ….