ಭದ್ರಾವತಿ: ನಟೋರಿಯಸ್ ರೌಡಿಶೀಟರ್ ಶಾಹಿದ್ ಕಾಲಿಗೆ ಪೊಲೀಸರ ಗುಂಡು..!!
ಅಶ್ವಸೂರ್ಯ/ಭದ್ರಾವತಿ: ಭದ್ರಾವತಿಯ ಸರಹದ್ದಿನಲ್ಲಿ ಪೋಲಿಸ್ ಇಲಾಖೆ ಎಚ್ಚೆತ್ತುಗೊಂಡಿದೆ.ಎಗ್ಗಿಲ್ಲದೆ ಗರಿ ಬಿಚ್ಚಿದ್ದ ಅಕ್ರಮ ಚಟುವಟಿಕೆಗಳ ವಿರುದ್ಧ ಪೋಲಿಸರು ಮೈಕೊಡವಿ ನಿಂತಿದ್ದಾರೆ.ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವಂತ ನಟೋರಿಯಸ್ ರೌಡಿಶೀಟರ್ ಗಳ ನಡುಮುರಿಯಲು ಸಿದ್ಧರಾಗಿದ್ದಾರೆ.ಪೋಲಿಸ್ ಇಲಾಖೆಯ ಅಧಿಕಾರಿಗಳು ತಮ್ಮ ಸೊಂಟದ ರಿವಲ್ವಾರ್ ಕೆಲಸ ಕೊಡುತ್ತಿದ್ದಾರೆ.ಕೆಲಸವಿಲ್ಲದೆ ತಣ್ಣಗೆ ಹೊದ್ದು ಮಲಗಿದ್ದ ರೀವಲ್ವಾರ್ ಗಳು ಸದ್ದು ಮಾಡಲು ಮುಂದಾಗಿವೆ.ಭದ್ರಾವತಿಯಲ್ಲಿ ಇತ್ತೀಚಿನ ಪೊಲೀಸ್ ಇಲಾಖೆಯ ಬೆಳವಣಿಗೆ ಕಂಡು ಸಾರ್ವಜನಿಕರು ಒಂದಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದವಾರ ಭದ್ರಾವತಿಯ ಹೊಸಮನೆ ಪೊಲೀಸರ ತಂಡ ರವಿ ಅಲಿಯಾಸ್ ಗುಂಡ ಎಂಬ ರೌಡಿಶೀಟರ್ ಮೇಲೆ ಪೊಲೀಸರ ವಿರುದ್ಧವೆ ತಿರುಗಿಬಿದ್ದ ಕಾರಣಕ್ಕೆ ಫೈರಿಂಗ್ ಮಾಡಿ ಆತನ ಕಾಲಿಗೆ ಗುಂಡು ತೂರಿಸಿದ್ದರು . ಪ್ರಕರಣವೊಂದಕ್ಕೆ ಸಂಭಂದಿಸಿದಂತೆ ರೌಡಿಶೀಟರ್ ರವಿಯನ್ನು ಬಂಧಿಸಲು ತೆರಳಿದ್ದಾಗ ಆರೋಪಿ ಪೊಲೀಸರ ಮೇಲೆಯೇ ದಾಳಿ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಹೊಸಮನೆ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣ ತಮ್ಮ ಸಿಬ್ಬಂದಿಯ ರಕ್ಷಣೆಗಾಗಿ ಅನಿವಾರ್ಯವಾಗಿ ಫೈರಿಂಗ್ ಮಾಡಿದ್ದಾರು.
ಈಗ ಮತ್ತೆ ಭದ್ರಾವತಿಯಲ್ಲಿ ಪೊಲೀಸರ ಗುಂಡು ಮೊರೆದಿದೆ.
ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ರೌಡಿಶೀಟರ್ ಮೇಲೆ ಪೊಲೀಸರ ಗುಂಡಿನ ದಾಳಿ ಘಟನೆ ನಡೆದಿದೆ.. ರೌಡಿಶೀಟರ್ ಆರೋಪಿ ಶಾಹಿದ್ ವಿರುದ್ಧ 12 ಪ್ರಕರಣಗಳು ದಾಖಲಾಗಿದ್ದು, ಪೊಲೀಸರ ಮೇಲಿನ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ರೌಡಿ ಶೀಟರ್ ಪರಾರಿಯಾಗಿದ್ದ..ಮಾಹಿತಿ ಆಧಾರದ ಮೇಲೆ ರೌಡಿಶೀಟರ್ ಶಾಹಿದ್ ನ ಸುಳಿವರಿತ ಪೇಪರ್ ಟೌನ್ ಪೊಲೀಸರ ತಂಡ ಮಂಗಳವಾರ ಬೆಳಿಗ್ಗೆ ಆತನನ್ನು ಬಂಧಿಸಲು ಹೋದಾಗ ಆತ ಪೊಲೀಸ್ ಸಿಬ್ಬಂದಿ ನಾಗರಾಜ್ ಮತ್ತು ನಾಗಮ್ಮ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ.. ತಕ್ಷಣವೇ ಎಚ್ಚೇತ್ತುಕೊಂಡ ಪಿಎಸ್ಐ ಅವರು ಆರೋಪಿಯ ಶಾಹಿದ್ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ರಕ್ಷಿಸಿದ್ದಾರೆ.. ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು ಗುಂಡು ಬಿದ್ದ ಆರೋಪಿ ಶಾಹಿದ್ ನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ..