ಹೊಳೆನರಸೀಪುರದಲ್ಲಿ ಅನಾರೋಗ್ಯದಿಂದ ಭದ್ರಾವತಿ ಮೂಲದ ಡಿವೈಎಸ್ಪಿ ಅಶೋಕ್ ನಿಧನ.!

Ashwasurya/Shivamogga
ಅಶ್ವಸೂರ್ಯ/ಹಾಸನ,ಫೆ.13: ಹೊಳೆನರಸೀಪುರದಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶೋಕ್ ರವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ದ ಅಶೋಕ್ (54) ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಪಡೆಯುತ್ತಿದ್ದರು.ಫೆಬ್ರವರಿ 13 ರಂದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸಜ್ಜನ ಅಧಿಕಾರಿಯಾಗಿದ್ದ ಅಶೋಕ್ ಅವರು ಜನಸ್ನೇಹಿಯಾಗಿದ್ದರು.ಈ ಕರ್ತವ್ಯದಲ್ಲೂ ದಕ್ಷರಾಗಿದ್ದ ಅಶೋಕ್ ಅವರಿಗೆ
2022 ರಲ್ಲಿ ರಾಷ್ಟ್ರಪತಿ ಪದಕ, 2023 ರಲ್ಲಿ ಕೇಂದ್ರ ಗೃಹಸಚಿವರ ಪದಕಕ್ಕೆ ಭಾಜನರಾಗಿದ್ದರು. ಅಶೋಕ್ ರವರು ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿಯವರು.
ಪತ್ನಿ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯನ್ನು ಅಶೋಕ್ ರವರು ಆಗಲಿದ್ದಾರೆ. ಇಂದು ಸಂಜೆ ಮೃತರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಡಿವೈಎಸ್ಪಿ ಅಶೋಕ್ ರವರ ನಿಧನಕ್ಕೆ ಹಾಸನ ಎಸ್ಪಿ ಮಹಮ್ಮದ್ ಸುಜೀತಾ ಅವರು ಸಂತಾಪ ಸೂಚಿಸಿದ್ದಾರೆ.


