Three people have been detained in connection with the murder of 33-year-old freelance journalist Mukesh Chandrakar, whose body was found in a contractor’s septic tank in Chhattisgarh. Mukesh had played a key role in a 2021 hostage release and was investigating construction irregularities before his death…..
ಛತ್ತೀಸ್ ಗಢ್ : ಅಕ್ರಮ ಕಾಮಗಾರಿ ಬಯಲಿಗೆಳೆದ ಪತ್ರಕರ್ತ ಶವವಾಗಿ ಪತ್ತೆ, ಕೊಲೆ ಶಂಕೆ.!
ಅಶ್ವಸೂರ್ಯ/ಛತ್ತೀಸ್ ಗಡ್: ಛತ್ತೀಸ್ ಗಢದಲ್ಲಿ ಇತ್ತೀಚೆಗೆ ಭ್ರಷ್ಟಾಚಾರದ ಆರೋಪ ಮಾಡಿದ್ದ ಗುತ್ತಿಗೆದಾರನ ಜಾಗದಲ್ಲಿ ನೀರಿನ ಟ್ಯಾಂಕ್ ನಲ್ಲಿ 28 ವರ್ಷದ ಪತ್ರಕರ್ತನ ಶವ ಪತ್ತೆಯಾಗಿದೆ.!
ಸ್ಥಳೀಯ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮುಖೇಶ್ ಚಂದ್ರಕರ್ ಜನವರಿ 3 ರಂದು ಬಿಜಾಪುರ ಜಿಲ್ಲೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.ಜನವರಿ 1ರ ರಾತ್ರಿಯಿಂದ ನಾಪತ್ತೆಯಾಗಿದ್ದ ಮುಕೇಶ್, ಇತ್ತೀಚೆಗೆ ಗುತ್ತಿಗೆದಾರ ಸುರೇಶ್ ಚಂದ್ರಕರ್ ವಿರುದ್ಧ ತನಿಖೆ ನಡೆಸಿ, ಬಸ್ತಾರ್ನಲ್ಲಿ 120 ಕೋಟಿ ರೂ.ಗಳ ರಸ್ತೆ ನಿರ್ಮಾಣ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಹಿರಂಗಪಡಿಸಿದ್ದರು.
ಮುಖೇಶ್ ಅವರ ಹಿರಿಯ ಸಹೋದರ ಯುಕೇಶ್ ಚಂದ್ರಕರ್ ಕಾಣೆಯಾದ ವ್ಯಕ್ತಿ ಬಗ್ಗೆ ದೂರು ದಾಖಲಿಸಿದ್ದಾರೆ.ಜನವರಿ 3 ರಂದು ಮುಕೇಶ್ ಅವರ ಶವವು ಚಟ್ಟನ್ಪಾರಾದಲ್ಲಿರುವ ಗುತ್ತಿಗೆದಾರ ಸುರೇಶ್ ಅವರ ಸಂಭಂಧಿಸಿದ ಆವರಣದಲ್ಲಿರುವ ನೀರಿನ ಟ್ಯಾಂಕ್ ನಲ್ಲಿ ಪತ್ರಕರ್ತನ ಶವ ಪತ್ತೆಯಾಗಿತ್ತು.!
ಜನವರಿ 1 ರಿಂದ ಮುಖೇಶ್ ಕಾಣೆಯಾಗಿದ್ದಾನೆ ಎಂದು ಸಂತ್ರಸ್ತನ ಸಹೋದರ ನಮಗೆ ಮಾಹಿತಿ ನೀಡಿದ್ದರು.ನಾವು ತನಿಖೆಯನ್ನು ಆರಂಭಿಸಿದ್ದೇವೆ ಸಂಬಂಧಪಟ್ಟಂತ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ್ದೇವೆ ಮತ್ತು ಈ ಪ್ರಕರಣಲ್ಲಿ ಅನುಮಾನ ಬಂದಂತವರನ್ನೆಲ್ಲಾ ವಿಚಾರಣೆಗೆ ಒಳಪಡಿಸಿದ್ದು ತನಿಖೆ ಮುಂದುವರೆಸಿದ್ದೇವೆ. ನೀರಿನ ಟ್ಯಾಂಕ್ ಒಳಗೆ ಮುಕೇಶ್ ಶವ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಹೈದರಾಬಾದಿನಲ್ಲಿ ಸುರೇಶ್ ಚಂದ್ರಕರ್ ಮತ್ತು ದೆಹಲಿಯಲ್ಲಿ ರಿತೇಶ್ ಅವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶವವನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ ಒಬ್ಬ ಕಾರ್ಮಿಕನನ್ನು ಸಹ ಬಂಧಿಸಲಾಗಿದೆ. ಗುತ್ತಿಗೆದಾರನ ಕಡೆಯವರನ್ನು ಸೇರಿದಂತೆ ಹಲವಾರು ಶಂಕಿತರನ್ನು ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.