ಡಾಲಿ ಧನಂಜಯ್ ಮದುವೆ: ಸರಳವಾದ ಚೆಂದದ ಆಮಂತ್ರಣ.! ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳಿಗೆ ಮದುವೆ ಆಮಂತ್ರಣ ನೀಡಿದ ನಟ ಡಾಲಿ ಧನಂಜಯ್.
ASHWASURYA/SHIVAMOGGA
ಬೆಂಗಳೂರು: ನಟ ಧನಂಜಯ್ ಅವರ ಮದುವೆ ಕರೆಯೋಲೆ ಸರಳವಾಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಫೆಬ್ರವರಿ 16, 2025 ರಂದು ಮೈಸೂರಿನಲ್ಲಿ ಧನ್ಯತಾ ಅವರೊಂದಿಗೆ ಧನಂಜಯ್ ಸಪ್ತಪದಿ ತುಳಿಯಲಿದ್ದಾರೆ.
ನಟ ಡಾಲಿ ಧನಂಜಯ್ ಮದುವೆ ಪತ್ರಿಕೆ ಸಿದ್ದವಾಗಿರುವ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸ್ಟಾರ್ ನಟರ ಮದುವೆ ಪತ್ರಿಕೆಗಳು ತುಂಬಾ ಅದ್ಧೂರಿಯಾಗಿರುತ್ತವೆ. ಹಾಗೆ ಆಮಂತ್ರಣ ಪತ್ರಿಕೆ ಜೊತೆ ಕೆಲವು ಕೊಡುಗೆಗಗಳನ್ನು ಮುಂಗಡವಾಗಿ ನೀಡುತ್ತಾರೆ.ಅದರೆ ಧನಂಜಯ್ ಇದಕ್ಕೆ ತದ್ವಿರುದ್ದವಾಗಿದ್ದು, ತುಂಬಾನೇ ಸರಳವಾಗಿ ಆಮಂತ್ರಣ ಪತ್ರಿಕೆಯನ್ನು ಮಾಡಿಸಿದ್ದಾರೆ. ಮದುವೆ ಕರೆಯೋಲೆ ನೀಡಿದ ಅಭಿಮಾನಿಗಳು, ಅರ್ಥ ಪೂರ್ಣವಾದ ಮದುವೆಯ ಕರೆಯೋಲೆ. ಬಹುಶಃ ಈ ಶುಭ ಸಂಭ್ರಮದ ಕರೆಯೋಲೆಯಲ್ಲಿ ಕೈಯಾರೆ ಬರೆದ ಪ್ರತಿ ಅಕ್ಷರವೂ ಬರೆದವನ ಮನಸ್ಸಿನಲ್ಲಿ ಮತ್ತು ಕರೆಯೋಲೆ ಓದುವವನ ಮನಸ್ಸಿನಲ್ಲಿ ಸಂತೃಪ್ತಿಯ ಭಾವ ಮೂಡಿಸಲಿದೆ ಎಂದು ಸೂರ್ಯ ಗೌಡ ಎಂಬವರು ಕಮೆಂಟ್ ಮಾಡಿದ್ದಾರೆ.
ಧನಂಜಯ್ ಆಮಂತ್ರಣ ಪತ್ರಿಕೆ ಹೀಗಿದೆ..
ಪ್ರೀತಿಯ ಬಂಧು ಮಿತ್ರರೇ..
ನಿಮ್ಮ ಪ್ರೀತಿಯ ಧನಂಜಯ್ ಹಾಗೂ ಧನ್ಯತ ಮಾಡುವ ನಮಸ್ಕಾರಗಳು. ನಾವು ಖುಷಿಯಾಗಿದ್ದೇವೆ, ನಮ್ಮಿ ವಿಷಯ ತಿಳಿದು ನೀವು ಸಂಭ್ರಮಿಸಿದ್ದು ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ. ನಮ್ಮಿ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ ಆಚರಿಸಬೇಕು ಎಂಬ ಮಾಹದಾಸೆಯಿಂದ ಈ ಪತ್ರ ಬರೆಯುತ್ತಿದ್ದೇನೆ. ತಾವು ಎಲ್ಲಿದ್ದರೂ, ಜಗದ ಯಾವ ಮೂಲೆಯಲ್ಲಿದ್ದರೂ, ಕುಟುಂಬ ಸಮೇತರಾಗಿ ಬಂದು ನಮ್ಮಿ ಸಮಾಗಮಕ್ಕೆ ನೀವು ಆಶೀರ್ವಾದ ಮಾಡಬೇಕು. ಪ್ರೇಮದ ಭರವಸೆಯಲ್ಲಿ ಬಾಳಿನ ಬೆಳಕು ನಮ್ಮ ಪ್ರೀತಿ ದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ.
ಮತ್ತೆಲ್ಲಾ ಕ್ಷೇಮವಷ್ಟೇ!
– ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ
ಧನಂಜಯ-ಧನ್ಯತ
ಆರತಕ್ಷತೆ: 15-02-2025ನೇ ಶನಿವಾರ ಸಂಜೆ 6 ಗಂಟೆಗೆ
ಮುಹೂರ್ತ: 16-02-2025ನೇ ಭಾನುವಾರ ಬೆಳಗ್ಗೆ 8.20 ರಿಂದ 10.00 ಗಂಟೆ, ಲಗ್ನ: ಮೀನ
ಸ್ಥಳ: ವಸ್ತು ಪ್ರದರ್ಶನ ಮೈದಾನ, ಅಂಬಾವಿಲಾಸ ಅರಮನೆ ಮುಂಭಾಗ, ಮೈಸೂರು,
ಸರಳವಾದ ಮನಸ್ಸಿಗೆ ಖುಷಿ ನೀಡುವಂತ ಪದಗಳನ್ನು ಬರೆದು ಡಾಲಿ ಧನಂಜಯ್ ಅವರು ಲಗ್ನ ಪತ್ರಿಕೆಯನ್ನು ಸಿದ್ಧಪಡಿಸಿ ಆತ್ಮೀಯರು,ಬಂದು ಮಿತ್ರರಿಗೂ ಹಾಗೂ ಅಭಿಮಾನಿಗಳ ಬಳಗಕ್ಕೆ ಆಮಂತ್ರಣ ನೀಡಿದ್ದಾರೆ.
ಡಾಲಿ ಧನಂಜಯ್ ಹಾಗೂ ಧನ್ಯತ ಅವರು ಜೋಡಿಯಾಗಿ ತೆರಳಿ ತಮ್ಮ ಮದುವೆಯ ಮೊದಲ ಆಮಂತ್ರಣವನ್ನು ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೂ
ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೂ ಮದುವೆಗೆ ಆಮಂತ್ರಣ ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ…