

ಮುಂಬಯಿ : ಇಶಾನ್ ಕಿಶನ್ T20 ವಿಶ್ವಕಪ್ಗೆ ಸೆಲೆಕ್ಟ್.! “ಆನಂದದ ಕಣ್ಣೀರು” ಸುರಿಸಿದ ತಾಯಿ.. ಯುವ ಆಟಗಾರನಿಗೆ ಮತ್ತೊಂದು ಅವಕಾಶ..!
Ishan Kishan selected for T20 World cup.Another chance for the young player.Watching him achievement his mother just overwhelmed with happiness….

news.ashwasurya. in
ಅಶ್ವಸೂರ್ಯ/ಮುಂಬಯಿ : ಭಾರತೀಯ ಕ್ರಿಕೆಟ್ ರಂಗದ ಪ್ರತಿಷ್ಠಿತ ಪಂದ್ಯಾವಳಿ 2025ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಇಶಾನ್ ಕಿಶನ್ ನೇತೃತ್ವದಲ್ಲಿ ಜಾರ್ಖಂಡ್ ತಂಡ ಮೊದಲ ಬಾರಿಗೆ ಗೆದ್ದು ಬಿಗಿದೆ.ಜೋತೆಗೆ ಈ ಪಂದ್ಯಾವಳಿಯಲ್ಲಿ ಕಿಶನ್ ಶ್ರೇಷ್ಠ ಮಟ್ಟದ ಬ್ಯಾಟಿಂಗ್ ಮಾಡಿ ಜವಬ್ದಾರಿಯುತ ನಾಯಕನ ಆಟವಾಡಿ ಟ್ರೋಫಿಯನ್ನು ಜಾರ್ಖಂಡ್ ಮಡಿಲಿಗೆ ಸೇರುವಂತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಿಶನ್ಗೆ ವಿಶ್ವಕಪ್ ತಂಡದಲ್ಲಿ ಮತ್ತೊಂದು ಅವಕಾಶ ನೀಡಲಾಗಿದ್ದು ಅವರ ತಾಯಿ ಕಣ್ಣುಗಳು ಸಂತೋಷದ ಕಣ್ಣೀರಿನಿಂದ ಒದ್ದೆಯಾಗಿವೆ….

Ishan Kishan’s mother said, “God has listened to a mother’s prayers. God has seen Ishan’s hardwork”.
ಕೆಲವು ವರ್ಷಗಳ ನಂತರ ಇಶಾನ್ ಕಿಶನ್ ಭಾರತ ತಂಡದಲ್ಲಿ ಮರಳಿ ಸ್ಥಾನ ಪಡೆಯುತ್ತಿದ್ದಂತೆ ಅವರ ತಾಯಿ ಸುಚಿತ್ರಾ ಸಿಂಗ್ ತಮಗಾದ ಆನಂದವನ್ನು ತಡೆಯಲಾರದೆ ಗಳ..ಗಳನೇ ಕಣ್ಣೀರು ಹಾಕಿದ್ದಾರೆ. ದೇವರು ನಮ್ಮ ಮನವಿಗೆ ಸ್ಪಂದಿಸಿ ಈ ಅವಕಾಶವನ್ನು ಕಲ್ಪಿಸಿದ್ದಾರೆ.! ಎಂದು ಕಿಶನ್ ತಾಯಿ ಹೇಳಿದ್ದಾರೆ.

ಫೆಬ್ರುವರಿಯಿಂದ ಆರಂಭವಾಗುವ ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಆಟಗಾರರ ಹೆಸರನ್ನು ಬಿಸಿಸಿಐ ಘೋಷಣೆ ಮಾಡಿದೆ. ಇದರಲ್ಲಿ ವಿಕೆಟ್ ಕೀಪರ್ ಇಶಾನ್ ಕಿಶನ್ಗೂ ಸ್ಥಾನವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.
ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ 197.32 ಸ್ಟ್ರೈಕ್ರೇಟ್ನೊಂದಿಗೆ ಹತ್ತು ಇನ್ನಿಂಗ್ಸ್ನಿಂದ 517 ರನ್ ಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇಶಾನ್ ಕಿಶನ್ ಬ್ಯಾಟಿಂಗ್ ಪ್ರದರ್ಶನ ತಂಡಕ್ಕೆ ಗೆಲುವು ತಂದಿತ್ತು. ಬ್ಯಾಟಿಂಗ್ ವೇಳೆ ಶತಕ ಸಿಡಿಸಿದ್ದ ವಿಕೆಟ್ ಕೀಪರ್, ಪುಷ್ಪ ಸಿನಿಮಾ ಸ್ಟೈಲ್ ಅನ್ನು ಮಾಡಿ ಸಂಭ್ರಮಿಸಿದ್ದರು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ಟ್ರೋಫಿಗೆ ಮುತ್ತಿಕ್ಕಿದ್ದರು..
45 ಎಸೆತಗಳಲ್ಲಿ 6 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್ಗಳೊಂದಿಗೆ ಸೆಂಚುರಿ ಬಾರಿಸಿದ್ದರು ಇಶಾನ್ ಕಿಶನ್..
ಇಶಾನ್ ಕಿಶನ್ ನಾಯಕತ್ವದಲ್ಲಿ ಮೊದಲ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಜಾರ್ಖಂಡ್..!

ಜಾರ್ಖಂಡ್ ತಂಡವು ಇತ್ತೀಚೆಗೆ ನಡೆದ 2025ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಮೊದಲ ಬಾರಿಗೆ ಗೆದ್ದು ಇತಿಹಾಸ ಸೃಷ್ಟಿಸಿದೆ, ಫೈನಲ್ನಲ್ಲಿ ಹರಿಯಾಣ ತಂಡವನ್ನು 69 ರನ್ಗಳ ಅಂತರದಿಂದ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿತು. ನಾಯಕ ಇಶಾನ್ ಕಿಶನ್ (101 ರನ್) ಅವರ ಶತಕ ಮತ್ತು ಕುಮಾರ್ ಕುಶಾಗ್ರ (81 ರನ್) ಅವರ ಬಿರುಸಿನ ಆಟದ ನೆರವಿನಿಂದ ತಂಡ 262 ರನ್ಗಳ ದೊಡ್ಡ ಮೊತ್ತ ಪೇರಿಸಿತ್ತು. ಇದು ಜಾರ್ಖಂಡ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ದೊಡ್ಡ ಸಾಧನೆಯಾಗಿದೆ.
ಪ್ರಮುಖ ಅಂಶಗಳು:
ಚೊಚ್ಚಲ ಪ್ರಶಸ್ತಿ: ಜಾರ್ಖಂಡ್ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದಿರುವುದು ಇದೇ ಮೊದಲು.
ನಾಯಕನ ಶತಕ: ನಾಯಕ ಇಶಾನ್ ಕಿಶನ್ ಫೈನಲ್ನಲ್ಲಿ ಶತಕ ಬಾರಿಸಿದ ಮೊದಲ ಜಾರ್ಖಂಡ್ ನಾಯಕ ಎಂಬ ಹೆಗ್ಗಳಿಕೆ ಪಡೆದರು.
ಭರ್ಜರಿ ಪ್ರದರ್ಶನ: ಇಶಾನ್ ಕಿಶನ್ 45 ಎಸೆತಗಳಲ್ಲಿ ಶತಕ ಸಿಡಿಸಿ, 10 ಸಿಕ್ಸರ್ಗಳನ್ನು ಬಾರಿಸಿದರು. ಕುಮಾರ್ ಕುಶಾಗ್ರ ಕೂಡ 81 ರನ್ಗಳ ಇನ್ನಿಂಗ್ಸ್ ಆಡಿದರು.
ಫೈನಲ್ ಫಲಿತಾಂಶ: ಜಾರ್ಖಂಡ್ 20 ಓವರ್ಗಳಲ್ಲಿ 262/3 ರನ್ ಗಳಿಸಿತು. ಹರಿಯಾಣ ತಂಡವು 193 ರನ್ ಗಳಿಸಿ ಸೋಲಿಗೆ ಶರಣಾಯಿತು.
ಪ್ರತಿ ಪಂದ್ಯದಲ್ಲೂ ಶ್ರೇಷ್ಠ ಬ್ಯಾಟಿಂಗ್ ಆಡಿದ ಇಶಾನ್ ಕಿಶನ್ :
ಇಶಾನ್ ಕಿಶನ್ ಟೂರ್ನಿಯಾದ್ಯಂತ 516 ರನ್ ಗಳಿಸಿ, 200ರ ಸ್ಟ್ರೈಕ್ ರೇಟ್ನಲ್ಲಿ ಭರ್ಜರಿಯಾಗಿ ಬ್ಯಾಟ್ ಬಿಸಿ ಗಮನ ಸೆಳೆದರು.ಜೋತೆಗೆ ಫೈನಲ್ ಪಂದ್ಯದಲ್ಲಿ ಹತ್ತು ಭರ್ಜರಿ ಸಿಕ್ಸರ್ ಹೊಡೆದು ದಾಖಲೆ ಮಾಡಿದ್ದಾರೆ.



