Headlines

ಮೂಡಲಗಿ: ಹಣಕ್ಕಾಗಿ ಹನಿ ಟ್ರ್ಯಾಪ್! ಪೈಲ್ವಾನ್ ಸೇರಿ ಮೂವರು ಆರೋಪಿಗಳು ಅಂದರ್.

ಅಶ್ವಸೂರ್ಯ/ಶಿವಮೊಗ್ಗ: ಮೂಡಲಗಿ ಹಣಕ್ಕಾಗಿ ಪಟ್ಟಣದ ಪುರಸಭೆಯ ಸದಸ್ಯನೋರ್ವನಿಗೆ ಹನಿ ಟ್ರ್ಯಾಪ್ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಎಸ್ ಪಕ್ಷದ ಮೂಡಲಗಿ ತಾಲೂಕಾಧ್ಯಕ್ಷ ಅಬ್ದುಲ್ ಪೈಲ್ವಾನ್ ಹಾಗೂ ಆತನ ಸ್ನೇಹಿತ ಸುಭಾನಿ ಹಾಗೂ ರೇಷ್ಮಾ ಕಡಬಿ ಶಿವಾಪುರ ಎಂಬ ಮಹಿಳೆಯನ್ನು ಪೊಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ‌ ಹಾಜರು ಪಡಿಸಿದ್ದರು. ನ್ಯಾಯಾಲಯ ಆದೇಶದಂತೆ ಆರೋಪಿತರನ್ನು ಜೈಲಿಗೆ ಕಳುಹಿಸಿರುವ ಘಟನೆ ನೆಡೆದಿದೆ.

ಪರಪುರುಷ ಮತ್ತು ಮಹಿಳೆ ಇರುವ ರೂಮಿಗೆ ಹೋಗಿ ಅರೆನಗ್ನ ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು, ಪುರಸಭೆ ಸದಸ್ಯನ ಬಳಿ ಹೋಗಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಆ ಪ್ರಕಾರ ಪುರಸಭೆ ಸದಸ್ಯ 9 ಲಕ್ಷ ಹಣ ನೀಡಿದ್ದು, ಮತ್ತೆ ಒಂದು ಲಕ್ಷಕ್ಕೆ ನೀಡುವಂತೆ ಒತ್ತಾಯಿಸಿದ್ದಾಕ್ಕಾಗಿ ಮನನೊಂದು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಡಿ.7ರಂದು ದೂರು ದಾಖಲಿಸಿದ್ದು, ದೂರು ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಗಳು ಕಾರ್ಯಚರಣೆಗೆ ಇಳಿದು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಿದ ವೇಳೆ ಹಣಕ್ಕಾಗಿ ಹನಿ ಟ್ರ್ಯಾಪ್ ಮಾಡಿದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಇನ್ನೂ ಹನಿ ಟ್ರ್ಯಾಪ್ ದಲ್ಲಿ ಭಾಗಿಯಾದ ಮಹಿಳೆಯ ಬಳಿ ಬೇರೆ ಬೇರೆ ವ್ಯಕ್ತಿಗಳ ವಿಡಿಯೋ ಇದ್ದಾವೆ ಎನ್ನುವ ಬಗ್ಗೆ ಮಾಹಿತಿ ಕೂಡ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಪ್ರಕರಣದ ಹಿನ್ನಲೆ : ಪಟ್ಟಣದ ಕೆಇಬಿ ಫ್ಲಾಟ್ ನ ರೇಷ್ಮಾ ಕಡಬಿ ಶಿವಾಪುರ ಎಂಬ ಮಹಿಳೆ ಜೊತೆಗೆ ಕೆ.ಆರ್.ಎಸ್ ಪಕ್ಷದ ಮೂಡಲಗಿ ತಾಲೂಕಾಧ್ಯಕ್ಷ ಅಬ್ದುಲ್ ಪೈಲ್ವಾನ್ ಹಾಗೂ ಆತನ ಸ್ನೇಹಿತ ಸುಭಾನಿ ಮೊದಲೇ ಸಂಚು ರೂಪಿಸಿದ ಹಾಗೆ ಡಿ. 2ರಂದು ರೇಷ್ಮಾ ಹಾಗೂ ಪುರಸಭೆ ಸದಸ್ಯ ಹುಕ್ಕೇರಿ ಪಟ್ಟಣದ ಲಾಡ್ಜ್ ಒಂದರಲ್ಲಿ ಅರೆನಗ್ನ ಸ್ಥಿತಿಯಲ್ಲಿ ಬೆತ್ತಲೆಯಾದ ಸಂದರ್ಭದಲ್ಲಿ ರೋಮಿನ ಒಳಗೆ ನುಗ್ಗಿದ ಅಬ್ದುಲ್, ಸುಭಾನಿ ಎಂಬುವವನು ಅಲ್ಲಿಯ ವಿಡಿಯೋ ಮಾಡಿಕೊಂಡಿದ್ದ.!

ನಂತರ ಲಾಡ್ಜ್ ನಲ್ಲಿ ಮಹಿಳೆಯೊಂದಿಗೆ ಇದ್ದ ಪುರಸಭೆ ಸದಸ್ಯನ ಬಳಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಆ ಪ್ರಕಾರ ಪುರಸಭೆ ಸದಸ್ಯ 9 ಲಕ್ಷ ಹಣ ನೀಡಿದ್ದು, ಇನ್ನುಳಿದ ಒಂದು ಲಕ್ಷ ಕೊಡು ಇಲ್ಲವಾದರೆ ನಿನ್ನ ಖಾಸಗಿ ಕ್ಷಣದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಬಿಡುಗಡೆ ಮಾಡ್ತಿವಿ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಆ ಬೆದರಿಕೆಗೆ ಹೆದರಿ ಪುರಸಭೆ ಸದಸ್ಯ ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಜರುಗಿತ್ತು.ಕೂಡಲೇ ಪ್ರಕರಣ ದಾಖಲಿಸಿಕೊಂಡ ಮೂಡಲಗಿ ಪೋಲಿಸರ ತಂಡ ಆರೋಪಿಗಳಿಗಾಗಿ ಭಲೇ ಬಿಸಿ ಖೆಡ್ಡಕ್ಕೆ ಕೆಡವಿಕೊಂಡಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!