Hyderabad to Karnataka : ನಿಗೂಢ ಹತ್ಯೆಯೊಂದರ ಹಂತಕರನ್ನು ಬಂಧಿಸಿದ ಕೊಡಗು ಪೊಲೀಸರು.! 950 ಕಿಲೋಮೀಟರ್ ಮೃತದೇಹದೊಂದಿಗೆ ಸಾಗಿಬಂದ ಹಂತಕರು!?
ಪ್ರಿಯಕರನೊಂದಿಗೆ ಎರಡನೇ ಗಂಡನನ್ನು ಮುಗಿಸಿ 950 ಕಿಮೀ ಮೃತದೇಹ ತಂದ ಪತ್ನಿ..!
ಅಶ್ವಸೂರ್ಯ ಶಿವಮೊಗ್ಗ: ಇದೇ ತಿಂಗಳು ಅಂದರೆ ಅಕ್ಟೋಬರ್ 8 ರಂದು ಕೊಡಗಿನ ಸುಂಟಿಕೊಪ್ಪ ಬಳಿ ಪತ್ತೆಯಾಗಿದ್ದ ಮೃತದೇಹ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಹಂತಕರನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.ಇತ್ತೀಚೆಗೆ ಕೊಡಗು ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಸುಟ್ಟು ,ಕೊಳೆತ ಸ್ಥಿತಿಯಲ್ಲಿ ಗುರುತು ಸಿಗದಹಾಗೆ ಪತ್ತೆಯಾಗಿದ್ದ ಮೃತದೇಹ ಯಾರದ್ದು ಎಂಬ ಪ್ರಶ್ನೆಯೊಂದಿಗೆ ಆರಂಭವಾದ ಕೊಡಗು ಪೊಲೀಸರ ಚುರುಕು ತನಿಖೆಯಿಂದ ಸಾಕಷ್ಟು ಮಾಹಿತಿಗಳು ಬಯಲಾಗಿದೆ. ಹತ್ಯೆಯಾದ ವ್ಯಕ್ತಿಯ ಪತ್ನಿಯ ಜೋತೆಗೆ ಇಬ್ಬರು ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ.!
ಪ್ರಕರಣ ಹಿನ್ನೆಲೆ.?
ಕೊಡಗಿನ ಸುಂಟಿಕೊಪ್ಪದಲ್ಲಿ ಕಳೆದ ಅಕ್ಟೋಬರ್ 8ರಂದು ವ್ಯಕ್ತಿಯೊಬ್ಬರ ಸುಟ್ಟ ದೇಹವೊಂದು ಗುರುತು ಸಿಗದ ಹಾಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ದೂರು ದಾಖಲಿಸಿಕೊಂಡ ಪೋಲಿಸರು ಈ ಅನಾಮಧೇಯ ಮೃತದೇಹದ ಪತ್ತೆಗೆ ತನಿಖೆ ಮುಂದಾಗಿದ್ದರು. ತನಿಖೆಯ ಆರಂಭದಲ್ಲಿ ಪೊಲೀಸರು ಸುತ್ತ ಮುತ್ತಲಿನ ಪ್ರದೇಶದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಗಳನ್ನು ಗಮನಿಸಿದಾಗ ಮಹತ್ವದ ಸುಳಿವುಗಳು ಪತ್ತೆಯಾಗಿದೆ. ಈ ಸುಳುವಿನ ಅಧಾರದ ಮೇಲೆ ಹಂತಕರ ಬೆನ್ನಿಗೆ ಬಿದ್ದ ಪೋಲಿಸರ ತಂಡ ಕೊಲೆಯಾದ ವ್ಯಕ್ತಿ ಯಾರು? ಆತನನ್ನು ಕೊಲೆ ಮಾಡಿರುವ ಹಂತಕರು ಯಾರು? ಎನ್ನುವ ದಿಕ್ಕಿನಲಿ ಒಂದೊಂದೆ ಮಾಹಿತಿಯನ್ನು ಕಲೆಹಾಕಿ ಈ ತನಿಖೆಯಲ್ಲಿ ಸಿಕ್ಕ ಸಣ್ಣ ಸುಳಿವು ಹಿಡಿದುಕೊಂಡು ಪೊಲೀಸರು ಹತ್ಯೆಯ ಹಿಂದಿನ ಅಷ್ಟು ಮಾಹಿತಿಯನ್ನು ಕಲೆಹಾಕಿ ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ತನಿಖೆಯಿಂದ ಕೊಲೆಯಾದ ವ್ಯಕ್ತಿ ತೆಲಂಗಾಣ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ 54 ವರ್ಷದ ರಮೇಶ್! ಹತ್ಯೆಯಾದ ವ್ಯಕ್ತಿಯ ಸ್ಪಷ್ಟವಾದ ಮಾಹಿತಿ ಸಿಗುತ್ತಿದ್ದ ಹಾಗೆ ಹಂತಕರನ್ನು ಹೆಡೆಮುರಿಕಟ್ಟಲು ಕಾರ್ಯಚರಣೆಗೆ ಮುಂದಾದ ಕೊಡಗು ಪೋಲಿಸರು ಈ ವ್ಯಕ್ತಿಯನ್ನು ಯಾರು ಕೊಲೆ ಮಾಡಿರಬಹುದು ಎಂದು ತನಿಖೆ ನಡೆಸಿದ ವೇಳೆ ಸಾಕಷ್ಟು ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿದೆ. ಹತ್ಯೆಯಾದ ವ್ಯಕ್ತಿ ರಮೇಶ್ ಪತ್ನಿಯೇ ಗಂಡನ ಹತ್ಯೆಯ ಹಿಂದಿನ ರೂವಾರಿಯಾಗಿದ್ದು ಈಕೆಯ ಜೋತೆಗೆ ಕೈ ಜೋಡಿಸಿರುವ ಹಂತಕ ಈಕೆಯ ಪ್ರಿಯಕರ ಮತ್ತು ಇತನ ಜೊತೆಗೆ ಹತ್ಯೆಮಾಡಲು ಕೈಜೋಡಿಸಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸುಯವಲ್ಲಿ ಯಶಸ್ವಿಯಾಗಿದ್ದರು.!
ಹತ್ಯೆಯಾದ ವ್ಯಕ್ತಿ ರಮೇಶ್ ಪತ್ನಿ (29) ನಿಹಾರಿಕ ಪತಿಯ ಆಸ್ತಿಗಾಗಿ ಪ್ರಿಯಕರನೊಂದಿಗೆ ಸೇರಿ ಗಂಡನನ್ನೆ ಕೊಂದು ಮುಗಿಸಿದ್ದಾಳೆ! ಈ ಪ್ರಕರಣದಲ್ಲಿ ಕುತೂಹಲ ವೆಂದರೆ ಹೈದರಾಬಾದ್ ನಲ್ಲಿ ಕೊಲೆ ಮಾಡಿ ಮೃತದೇಹವನ್ನು ಬೆಂಗಳೂರು ಮೂಲಕ ಕೊಡಗಿಗೆ ತೆಗೆದುಕೊಂಡು ಬಂದು ನಿರ್ಜನ ಪ್ರದೇಶದಲ್ಲಿ ಮೃತದೇಹವನ್ನು ಸುಟ್ಟು ಹಾಕಿ ಅಲ್ಲಿಂದ ಕಣ್ಮರೆಯಾಗಿದ್ದಾರೆ.! ಪ್ರಕರಣದಲ್ಲಿ ಆಕೆಯ ಪ್ರಿಯಕರ, 28 ವರ್ಷದ ಪಶುವೈದ್ಯ ನಿಖಿಲ್ ಹಾಗೂ ಹರಿಯಾಣದ ಅಂಕುರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಈ ಹತ್ಯೆಯ ನಾಯಕಿ ತೆಲಂಗಾಣ ಮೂಲದ ಆರೋಪಿ ನಿಹಾರಿಕ ಮತ್ತು ಮೊದಲ ಪತಿಗೆ ಎರಡು ಮಕ್ಕಳಿದ್ದಾಗಲೆ ಅದೇನು ನೆಡೆಯಿತು ಇಬ್ಬರ ನಡುವೆ ನಿಹಾರಿಕ ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡು ದೂರ ಆಗಿದ್ದಳಂತೆ.! ಈ ಸಮಯದಲ್ಲಿ ಜೈಲಿಗೆ ಹೋಗಿ ಬಂದಿದ್ದ, ಅಂಕುರ್ ಎಂಬಾತನ ಪರಿಚಯ ಆಗಿದೆ. ಆತನ ಮೂಲಕ ರಮೇಶ್ (ಹತ್ಯೆಯಾದ ವ್ಯಕ್ತಿ) ಪರಿಚಯವಾಗಿ ಪರಿಚಯ ಪ್ರೀತಿಗೆ ತಿರುಗಿ ರಮೇಶರನ್ನು ನಿಹಾರಿಕ ಮದುವೆಯಾಗಿದ್ದಳಂತೆ.ಆ ನಂತರದಲ್ಲಿ ಎರಡನೇ ಗಂಡ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದ ರಮೇಶ್ಗೆ 54 ವರ್ಷ ವಯಸ್ಸಾಗಿದ್ದ ಹಿನ್ನೆಲೆಯಲ್ಲಿ ಆತನಿಂದಲೂ ದೂರ ಆಗಿದ್ದ ನಿಹಾರಿಕಳಿಗೆ ಪಶುವೈದ್ಯ ನಿಖಿಲ್ ಪರಿಚಯವಾಗಿದ್ದ ಇಬ್ಬರು ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದರಂತೆ. ಈ ನಡುವೆ ಹರಿಯಾಣ ಮೂಲದ ಅಂಕುರ್ ಜೊತೆಯೂ ಸಂಪರ್ಕ ಮುಂದುವರಿದೆ. ಆ ಬಳಿಕ ಇಬ್ಬರು ಸೇರಿ ವಿಚ್ಛೇದನ ಪಡೆಯದ ಕಾರಣ ಆಸ್ತಿ ನೀಡುವಂತೆ ಉದ್ಯಮಿ ರಮೇಶ್ ನಿಗೆ ಕಿರುಕುಳ ನೀಡಿದ್ದರಂತೆ. ಆದರೆ ಈ ಕಿರುಕುಳಕ್ಕೆ ರಮೇಶ್ ಜಗ್ಗದೆ ಇದ್ದ ವೇಳೆ ಪ್ಲ್ಯಾನ್ ಮಾಡಿ ರಮೇಶ್ ನನ್ನು ಹೈದರಾಬಾದ್ ಸಮೀಪ ಆತನ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದರಂತೆ.! ಹತ್ಯೆಮಾಡಿದ ಮೃತದೇಹವನ್ನು ಹೈದರಾಬಾದ್ ನಿಂದ ಸುಮಾರು 900 ಕಿಲೊ ಮೀಟರ್ ದೂರದ ಕರ್ನಾಟಕದ ಕೊಡಗಿನ
ಕಾಫಿ ತೋಟದ ಒಂದರಲ್ಲಿ ಮೃತದೇಹ ಎಸೆದು ಸುಟ್ಟು ಹಾಕಿದ್ದಾರೆ.! ರಮೇಶ್ ರನ್ನು ಹತ್ಯೆಮಾಡಿದ ನಂತರ
ಮೃತದೇಹವನ್ನು ವಿಲೇವಾರಿ ಮಾಡಲು ಕಾರಿನಲ್ಲಿ ಹಾಕಿಕೊಂಡು ಅದೇ ಕಾರಿನಲ್ಲಿ ಆರೋಪಿಗಳು ಆರೋಪಿಗಳು ರಮೇಶ್ ಅವರು ಇದ್ದ ಅಪಾರ್ಟ್ಮೆಂಟ್ ಹೋಗಿ ಆಸ್ತಿ ಪತ್ರಗಳು ಹಾಗೂ ಹಣವನ್ನು ತೆಗೆದುಕೊಂಡಿದ್ದಾರಂತೆ! ನಂತರ ಅಲ್ಲಿಂದ ಬೆಂಗಳೂರಿಗೆ ಬಂದು ಬೆಂಗಳೂರಿನಲ್ಲಿ ಪೆಟ್ರೋಲ್ ಖರೀದಿ ಮಾಡಿ ಕೊಡಗಿನ ಕಡೆಗೆ ಪ್ರಯಾಣ ಮಾಡಿದ್ದಾರೆ. ಕೊಡಗಿನ ಸುಂಟಿಕೊಪ್ಪ ಬಳಿ ಕಾಫಿ ತೋಟವೊಂದರ ನಿರ್ಜನ ಪ್ರದೇಶದಲ್ಲಿ ಮೃತದೇಹ ಎಸೆದು ಪೆಟ್ರೋಲ್ ಹಾಕಿ ಸುಟ್ಟು ಹಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಆ ಬಳಿಕ ಅಂಕುರ್ ಹಾಗೂ ನಿಹಾರಿಕ ನೇರವಾಗಿ ದೆಹಲಿಗೆ ತೆರಳಿದ್ದಾರೆ ಅಲ್ಲಿಂದ ಅವರು ಹರಿಯಾಣ ಮತ್ತು ಇನ್ನಿತರ ಕಡೆ ಸುತ್ತಾಟ ನಡೆಸಿದ್ದಾರೆ.
ಪೋಲಿಸರಿಗೆ ಹತ್ಯೆಯಾದ ರಮೇಶ್ ಅವರ ಮೃತದೇಹ ಪತ್ತೆಯಾದ ಬಳಿಕ.ಈ ಹತ್ಯೆ ಎಷ್ಟು ದಿನಗಳ ಹಿಂದೆ ಆಗಿರಬಹುದು ಎಂದು ಹುಡುಕಾಟಕ್ಕೆ ಮುಂದಾದಾಗ ಮೃತದೇಹದ ಪರಿಶೀಲನೆಯ ವೇಳೆ ಮೃತದೇಹದ ಮೇಲಿದ್ದ ಹುಳುಗಳು ಸಾವಿನ ಸಮಯದ ಬಗ್ಗೆ ಸುಳಿವು ನೀಡಿದ್ದವಂತೆ.! ಇದರಂತೆ 3-4 ದಿನಗಳ ಹಿಂದೇ ಮೃತದೇಹ ಸಿಕ್ಕ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಈ ವೇಳೆ ಕೆಂಪು ಬಣ್ಣದ ಬೆಂಜ್ ಕಾರು ಅನುಮಾಸ್ಪದವಾಗಿ ಕಂಡು ಬಂದಿದೆ. ಮೃತದೇಹದ ಕಾರಿನ ಮಾಹಿತಿ ಹಿಡಿದು ಕೊಡಗು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಅಮಾಕನೊಬ್ಬನ ಹತ್ಯೆಯ ಹಿಂದಿನ ರಹಸ್ಯವನ್ನು ಭೇದಿಸಿದ ಕೊಡಗು ಠಾಣೆಯ ಪೋಲಿಸರು ಕರ್ನಾಟಕ ಪೋಲಿಸ್ ಏನೆಂಬುದನ್ನು ಮತ್ತೊಮ್ಮೆ ಸಾಭಿತು ಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ..