ಜಗತ್ತಿಗೆ ಸನ್ಮಾರ್ಗದ ಸಂದೇಶ ಸಾರಿದವರು ಮಹರ್ಷಿ ವಾಲ್ಮೀಕಿ: ಸಂಸದ ಬಿ. ವೈ. ರಾಘವೇಂದ್ರ.

ಜಗತ್ತಿಗೆ ಸನ್ಮಾರ್ಗದ ಸಂದೇಶ ಸಾರಿದವರು ಮಹರ್ಷಿ ವಾಲ್ಮೀಕಿ: ಸಂಸದ ಬಿ. ವೈ. ರಾಘವೇಂದ್ರ

ಅಶ್ವಸೂರ್ಯ/ಶಿವಮೊಗ್ಗ : ಮಹಾಕಾವ್ಯ ರಾಮಾಯಣದ ವೈಶಿಷ್ಟ್ಯತೆ ಮತ್ತು ಶತಶತಮಾನಗಳಿಂದ ಗಳಿಸಿರುವ ಜನಪ್ರಿಯತೆಯಿಂದಾಗಿ ಕೃತಿಕಾರ ಮಹರ್ಷಿ ವಾಲ್ಮೀಕಿಯವರು ಕವಿಕುಲ ಸಾರ್ವಭೌಮರಾಗಿ ಸಾಹಿತ್ಯ ಲೋಕದಲ್ಲಿ ಗುರುತಿಸಲ್ಪಡುತ್ತಾರೆ ಹಾಗೂ ಆರಾಧಿಸಲ್ಪಡುತ್ತಾರೆ ಎಂದು ಸಂಸದ ಬಿ. ವೈ. ರಾಘವೇಂದ್ರ ಅವರು ಹೇಳಿದರು.

ಅವರು ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಶಿವಮೊಗ್ಗ ಮಹಾನಗರ ಪಾಲಿಕೆ ಇವರುಗಳ ಸಂಯುಕ್ತಾಕ್ಷರದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ತತ್ವದಿಂದ ದೈವತ್ವಕ್ಕೆ ಏರಿದ ತಮ್ಮ ಕೃತಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹನೀಯ ವಾಲ್ಮೀಕಿ ಅವರು ಆರಂಭದಲ್ಲಿ ಬೇಡರಾಗಿ ನಂತರ ಸಂತರಾಗಿ, ಅಹಿಂಸೆಯ ಪ್ರತಿಪಾದಕರಾಗಿ ಜಗತ್ತಿಗೆ ಸನ್ಮಾರ್ಗದ ಸಂದೇಶ ಸಾರಿದವರು ಮಹರ್ಷಿ ವಾಲ್ಮೀಕಿ ಎಂದವರು ಬಣ್ಣಿಸಿದರು.
ಪ್ರಪಂಚದ ವಿವಿಧ ಭಾಷೆಗಳಿಗೆ ಅನುವಾದಗೊಂಡು ಜಗತ್ತಿನ ಪ್ರತಿಸ್ಥಿತ ವಿಶ್ವವಿದ್ಯಾಲಯ ಗಳಲ್ಲಿ ತತ್ವಜ್ಞಾನಿ ವಾಲ್ಮೀಕಿ ಅವರ ಕೃತಿ ಯನ್ನು ಓದುವ ಮೂಲಕ ಅವರ ಆದರ್ಶಗಳನ್ನು ಅನುಸರಿಸುತ್ತಿರುವುದು, ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಕರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಉಪನ್ಯಾಸಕ ಡಾ. ಮೋಹನ್ ಚಂದ್ರಗುತ್ತಿ ಅವರು ಉಪನ್ಯಾಸ ನೀಡಿ,
ಡಾ.ಮೋಹನ್ ಚಂದ್ರಗುತ್ತಿ ಅವರು ಉಪನ್ಯಾಸ ನೀಡಿ ಮಾತನಾಡಿ ಒಬ್ಬ ಮನಷ್ಯನ ಆದರ್ಶ ಜೀವನ ವಿಚಾರಧಾರೆಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಉದ್ದೇಶದಿಂದ ಜಯಂತಿಗಳನ್ನು ಆಚರಣೆ ಮಾಡಲಾಗುತ್ತದೆ.
ಮಹರ್ಷಿ ವಾಲ್ಮಿಕಿ ಅವರನ್ನು ವಾಲ್ಮಿಕಿಯನ್ನು ಒಬ್ಬ ಕವಿಯಾಗಿ, ಇತಿಹಾಸಕಾರನಾಗಿ, ಮನಶಾಸ್ತ್ರಜ್ಞರಾಗಿ, ನೋಡಬೇಕಾಗಿದೆ‌.
ರಾಮಾಯಣ ವೈಭವೀಕರಣ ಕೃತಿಯಲ್ಲ ವಾಸ್ತಾವದ ಆಧಾರಿತ ಕೃತಿಯಾಗಿದೆ‌. ಸಮಾಜಿಕ ಸ್ಥತಿಗತಿಗಳ ರಾಮ ಸೀತಾ ಲಕ್ಷ್ಮಣ ಜೀವನ‌ ವ್ಯಕ್ತಿತ್ವವನ್ನು ಆಧ್ಯಾತ್ಮಿಕ ಕಥನದ ಮೂಲಕ‌ ಜಗತ್ತಿದೆ ಅರ್ಪಿಸಿದ್ದಾರೆ.

ಇಂದಿನ‌ ಯುವ ಜನತೆಗೆ ವಾಲ್ಮಿಕಿ, ಮದಕರಿ ನಾಯಕರನ್ನು ಆದರ್ಶವಾಗಬೇಕು ತಮ್ಮ ಜೀವನಲ್ಲಿ ಸ್ವೀಕರಿಸಬೇಕು ತಂದೆತಾಯಿಗೌರವಿಸಬೇಕು ಆರೋಗ್ಯಕರ ಶೈಕ್ಷಣಿಕ ಜ್ಞಾನದ ಬಾಗಿಲು ತೆರಬೇಕಾಗಿದೆ‌.ವಾಲ್ಮಿಕಿ,ಅಂಬೇಡ್ಕರ್ ‌ಅವನ್ನು ದೇವರಾಗಿಸುವುದು ಬೇಡ ಅವರ ಜೀವನ, ಮೌಲ್ಯಗಳು ಪಾಲಿಸುವ ಮೂಲಕ ನಮ್ಮ‌ ಬದುಕಿಗೆ ದೀಪವಾಗಬೇಕಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ್ ಸರ್ಜಿ ಮಾತನಾಡಿ ಒಬ್ಬ ಸಾಮಾನ್ಯವ್ಯಕ್ತಿ ಮಹಾಕವಿ ಪ್ರಪಂಚಕ್ಕೆ ಅದ್ಬುತ ಗ್ರಂಥವನ್ನು ನೀಡಿದ ಶ್ರೇಷ್ಠವ್ಯಕ್ತಿ ಮಹರ್ಷಿ ವಾಲ್ಮಿಕಿ ಅವರು ನಮಗೆ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಜಯಂತಿಗಳ ಮೂಲಕ ತೆಗೆದುಕೊಳ್ಳಬೇಕಾಗಿದೆ‌.
ರಾಮ ಲಕ್ಷ್ಮಣ ಸೀತೆ ಹಾಗೂ ರಾವಣನಿಂದಲ್ಲೂ ಒಳ್ಳೆಯ ವಿಚಾರವನ್ನು ಕಲಿಯಬಹುದು ಎಂಬ ಸಂದೇಶವನ್ನು ವಾಲ್ಮಿಕಿ ರಾಮಾಯಣದಿಂದ ತಿಳಿಸಿದ್ದಾರೆ.

ರಾಮಾಯಣ, ಮಹಾಭಾರತದ ಆದರ್ಶಗಳನ್ನು ನಮ್ಮ‌ ಜೀವನಲ್ಲಿ ಅಳವಡಿಸಿಕೊಳ್ಳಬೇಕು ಆಗಮಾತ್ರ ನಮ್ಮ ಜೀವನ ಸಾರ್ಥಕವಾಗಲಿದೆ‌ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಎಸ್ ಎನ್ ಚನ್ನಬಸಪ್ಪ ಮಾತನಾಡಿದ ವಾಲ್ಮಿಕಿ ಅವರು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಜಗತ್ತಿಗೆ ಪ್ರಭು ಶ್ರೀರಾಮನ ದರ್ಶನವನ್ನು ಪರಿಚಯಿಸಿದವರು. ಇಡೀ ಜಗತ್ತಿಗೆ ಭಾರತದ ಶಕ್ತಿಯನ್ನು ತೊರಿಸಿಕೊಟ್ಟವರು‌.ರಾಮನ ಬಗ್ಗೆ ಅನೇಕ ಸಂಗತಿಗಳ ಕುರಿತು ಸಂಕ್ಷಿಪ್ತವಾಗಿ ಅರ್ಥಪೂರ್ಣವಾಗಿ ವಾಲ್ಮಿಕಿ ರಾಮಾಯಣದಲ್ಲಿ ವಿವರಿಸಿದ್ದಾರೆ.
ಭಾರತದಲ್ಲಿ ಮಹಾನ್ ವ್ಯಕ್ತಿಗಳು ಕೂಡ ಜಗತ್ತಿಗೆ ಶಕ್ತಿಯಾಗಿದ್ದಾರೆ‌ ಮಹರ್ಷಿ ವಾಲ್ಮಿಕಿ ಅವರು ಮೊದಲ ಸಾಲಿನಲ್ಲಿ ನಿಲುತ್ತಾರೆ.ಅವರ ಆದರ್ಶಗಳನ್ನು ನಾವು ಪಾಲಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎಸ್. ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ರಾಜ್ಯ ಭೋವಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ಜಿಲ್ಲಾ ನಾಯಕ ವಾಲ್ಮೀಕಿ ಸಂಘದ ಅಧ್ಯಕ್ಷ ಹೆಚ್. ಟಿ. ಬಳಿಗಾರ್, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಸಿಇಓ ಎನ್ ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಜಿ. ಕೆ. ಮಿಥುನ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಧಿಕಾರಿ ಮಟ್ಟದ ಹಿರಿಯ ಅಧಿಕಾರಿಗಳು, ಸಮುದಾಯದ ಮುಖಂಡರು, ವಿದ್ಯಾರ್ಥಿ-ವಿದ್ಯಾರ್ಥಿ ನಿಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಇದೆ ಸಂಧರ್ಭದಲ್ಲಿ ಎಸ್. ಎಸ್. ಎಲ್. ಸಿ ಮತ್ತು ಪಿಕ್. ಯು. ಸಿ. ಯಲ್ಲಿ ಅತೀ ಹೆಚ್ಚಿನ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಗಣ್ಯರ ಸಮ್ಮುಖದಲ್ಲಿ ನಗದು ಪುರಸ್ಕಾರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಲಾತಂಡಗಳೊಂದಿಗೆ ಹೊರಟ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆಯು ಅಂತಿಮವಾಗಿ ಕುವೆಂಪು ರಂಗಮಂದಿರದಲ್ಲಿ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *

Optimized by Optimole
error: Content is protected !!