ಸೂಡ ಮಾಸ್ಟರ್ ಪ್ಲಾನ್: ಹತ್ತಾರು ಯೋಜನೆಯೊಂದಿಗೆ ಅಭಿವೃದ್ಧಿಗೆ ಮುಂದಾದ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಮುಂದಿನ 16 ವರ್ಷಕ್ಕೆ ಮಾಸ್ಟರ್ ಪ್ಲಾನ್ ತಯಾರಿಸಿದೆ. ಇಜಿಎಸ್ ಸಂಸ್ಥೆಯ ಮೂಲಕ ಎರಡು ನಗರಗಳಲ್ಲಿ ಯಾವ ತಾವ ರೀತಿಯಲ್ಲಿ ಅಭಿವೃದ್ಧಿ ಮಾಡಲು ಮುಂದಿನ 2041 ರವರೆಗೆ ಮಾಸ್ಟರ್ ಪ್ಲಾನ್ ತಯಾರಿಸಲಾಗುತ್ತಿದೆ ಎಂದು ಕ್ರಿಯಾಶೀಲ ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್
ಈ ಕುರಿತು ಸುದ್ದಿಗೋಷ್ಠಿ ನಡೆಸಿದರು.
ಸೂಡ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮುಂದಿನ 16 ವರ್ಷಕ್ಕೆ ಜನ ಸಂಖ್ಯೆ ಎಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. 10 ಲಕ್ಷ ಜನಸಂಖ್ಯೆ ಹೆಚ್ಚಾಗಬಹುದು ಎಂದು ನಿರೀಕ್ಷಸಾಲಾಗಿದ್ದು. 7½ ಲಕ್ಷ ಶಿವಮೊಗ್ಗ, 2½ ಲಕ್ಷ ಜನ ಭದ್ರಾವತಿ ನಗರದಲ್ಲಿ ಹೆಚ್ಚಾಗುವ ನಿರೀಕ್ಷೆ ಇದ್ದು. ಪ್ರಮುಖವಾಗಿ ಶಿಕ್ಷಣಕ್ಕೆ ಒತ್ತುಕೊಡುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆ ಒತ್ತು ನೀಡಲಾಗಿದೆ.ಸರಾಗವಾದ ವಾಹನ ಸಂಚಾರಕ್ಕೆ ರಸ್ತೆಗಳಿಗೆ ಒತ್ತು ನೀಡಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಏರಿಯಾಗಳಲ್ಲಿ ಆಗಲವಾದ ರಸ್ತೆಗಳು.ಸುಸಜ್ಜಿತವಾದ ಯುಜಿಡಿ ರಚಿಸಲಾಗುತ್ತಿದೆ ಎಂದರು
.ರಿಂಗ್ ರಸ್ತೆ ಮತ್ತು ರೈಲ್ವೆ ಟ್ರಾಕ್ ನಲ್ಲಿ ವ್ಯವಸ್ಥೆ ಇರಲಿಲ್ಲ. ಈಗ ಸಮಗ್ರ ರಸ್ತೆ, ಒಳಚರಂಡಿ ಮತ್ತು ಮೂಲಭೂತ ಸೌಕರ್ಯಗಳನ್ನು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಿಕೊಡಲಾಗುತ್ತಿದೆ. ವಾಜಪೇಯಿ ಲೇಔಟ್ ನಲ್ಲಿ 200 ಅಡಿ ರಸ್ತೆ ನಿರ್ಮಿಸಲಿದ್ದೇವೆ.
ನಗರಾಭಿವೃದ್ಧಿ ಪ್ರಾಧಿಕಾರದ ಪ್ಲಾನ್ ನಂತೆ ರಿಂಗ್ ರಸ್ತೆ, ಪ್ರವಾಸೋದ್ಯಮ, ದೇವಸ್ಥಾನ, ಜೋಗಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ಉದ್ಯಾನವನದ ನಿರ್ಮಾಣವೂ ಒಳಗೊಂಡಿದೆ. ಹೊಳೆ ಹನಸವಾಡಿ, ಜ್ಞಾನದೀಪ ಶಾಲೆಯ ಮಾರ್ಗದಲ್ಲಿ ಮಾಸ್ಟರ್ ಪ್ಲಾನ್ ಮಾಡಲಿದ್ದೇವೆ. ಒಂದು ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ.ಇನ್ನೂ ಊರುಗಡೂರಿನಲ್ಲಿ ನಿರ್ಮಾಣಗೊಂಡಿರುವ ನಿವೇಶನಗಳಿಗೆ 7-8 ಸಾವಿರ ಅರ್ಜಿ ಬಂದಿದೆ. 437 ನಿವೇಶನಗಳನ್ನು ಹಂಚಲಿದ್ದೇವೆ. 60 ಎಕರೆಯಲ್ಲಿ ಸೈಟ್
ನಿರ್ಮಿಸಲಾಗಿದೆ. 179 ನಿವೇಶನಗಳನ್ನು ಜಮೀನು ನೀಡಿರುವ ರೈತರಿಗೆ ನೀಡಲಾಗುತ್ತಿದೆ ಎಂದರು.
ಊರುಗಡೂರಿನಲ್ಲಿ ನಿರ್ಮಾಣ ಆಗಿರುವ ನಿವೇಶನದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರಿಗೆ 9% ಜನರಲ್ ಗೆ 50%, ರಾಷ್ಟ್ರಪ್ರಶಸ್ತಿ ಪಡೆದ ಪತ್ರಕರ್ತರಿಗೆ 5%, ಅಂಗ ವಿಕಲರಿಗೆ 3%, ಹಿರಿಯ ನಾಗರಿಕರಿಗೆ, ಎಸ್ ಸಿ, ಎಸ್ಟಿ ಅವರಿಗೆ ಮೀಸಲಾತಿ ಅಡಿಯಲ್ಲಿ ನಿಯಮಾವಳಿ ಪ್ರಕಾರ ನಿವೇಶನ ನೀಡಲಾಗುತ್ತಿದೆ.
ಪ್ರಮುಖವಾಗಿ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಅಪಾರ್ಟ್ ಮೆಂಟ್ ನಿರ್ಮಿಸಲಾಗುತ್ತಿದೆ. ಉರುಗಡೂರಿನಲ್ಲಿ 4 ಎಕರೆಯಲ್ಲಿ ಅಪಾರ್ಟ್ ಮೆಂಟ್ ನಿರ್ಮಿಸಲಾಗುತ್ತಿದೆ. ಸೋಮಿನಕೊಪ್ಪದಲ್ಲಿ 1½ ಎಕರೆಯಲ್ಲಿ ನಿರ್ಮಿಸಲಾಗುತ್ತಿದೆ ಎಂದರು. ಸೋಗನೆಯ 156 ಸರ್ವೆನಂಬರ್ ನಲ್ಲಿ 100 ಎಕರೆ ಜಮೀನು ನೋಡಲಾಗಿದ್ದು. ಇನ್ನೂ 14 ದಿನಗಳಲ್ಲಿ ಸಭೆ ಕರೆದು ನಿವೇಶನ ನಿರ್ಮಿಸಲಾಗುವುದು. ನಿದಿಗೆಯಲ್ಲಿ 3 ಎಕರೆ ಜಾಗದಲ್ಲಿ ಬಡಾವಣೆ ಮಾಡಲಾಗುವುದು. ಶಿವಮೊಗ್ಗ ಮತ್ತು ಭದ್ರಾವತಿ ನಗರದ 30 ಉದ್ಯಾನವನಗಳನ್ನು ನಿರ್ಮಿಸಲಾಗುವುದು. ಭದ್ರಾವತಿ ಮತ್ತು ಶಿವಮೊಗ್ಗ ನಗರದ 15 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಈಗಾಗಲೇ ವಾಜಪೇಯಿ ಲೇಔಟ್ ನ ಅಕ್ರಮ ನಿವೇಶನ ಹಂಚಿಕೆಗಳನ್ನು ರದ್ದು ಮಾಡಿದ್ದೇವೆ. ಶೀಘ್ರದಲ್ಲಿಯೇ ಮನೆಗಳು ನಿರ್ಮಾಣವಾಗಲಿದೆ. ಮನೆ ಕಟ್ಟದವರಿಗೆ ನೊಟೀಸ್ ನೀಡಲಾಗಿದೆ. 2300 ನಿವೇಶನದಲ್ಲಿ ಮನೆಗಳನ್ನು ಕಟ್ಟಲು ಸೂಚಿಸಲಾಗಿದೆ ಸಮಯ ನೀಡಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತಿದೆ. ಶಿವಮೊಗ್ಗ ಭದ್ರಾವತಿಯಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಹೆಚ್ಚು ಒತ್ತುನೀಡಾಗುತ್ತಿದೆ ಈಗಾಗಲೇ ವಾಜಪೇಯಿ ಲೇಔಟ್ ನಲ್ಲಿ 1500 ಗಿಡ ನೆಡಲಾಗಿದೆ ಎಂದರು.
ಭದ್ರಾವತಿಯಲ್ಲಿ 34 ಎಕರೆ ಪ್ರಾಧಿಕಾರದ ಸ್ಥಳವಿದ್ದು ಅಲ್ಲಿ ನಿವೇಶನಗಳನ್ನು ನಿರ್ಮಿಸಲಾಗಿವುದು,ಗೋಪಿಶೆಟ್ಟಿಕೊಪ್ಪದಲ್ಲಿ ಜಾಗ ನಿಗದಿ ಪಡಿಸಲಾಗಿದ್ದು ಮುಂದಿನ ಯೋಜನೆ ಸಿದ್ಧಪಡಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ರವಿಕುಮಾರ್, ರೇಣುಕಮ್ಮ, ವಿಶ್ವನಾಥ್ ಮಜ್ಜಿಗೆ ಉಪಸ್ಥಿತರಿದ್ದರು.
ನಿರೀಕ್ಷಿಸಿ……
ಮಲೆನಾಡ ರಕ್ತ ಚರಿತ್ರೆ FLASH BACK
ಸರಿ ರಾತ್ರಿ ನಟೋರಿಯಸ್ ನವುಲೆ ಮೋಹನನ ನೆತ್ತರು ಹರಿದಿತ್ತು…..