ಪುತ್ತೂರು:12 ವರ್ಷದ ನಂತರ ಮತ್ತೆ ಮುನ್ನಲೆಗೆ ಬಂದ ಕಕ್ಕೂರು ನಾಲ್ವರ ಸಾಮೂಹಿಕ ಹತ್ಯೆ!ಒಬ್ಬರ ನಾಪತ್ತೆ ಪ್ರಕರಣ!

ಪುತ್ತೂರು: ಮತ್ತೆ ಮುನ್ನಲೆಗೆ ಬಂದ ಕಕ್ಕೂರು ಸಾಮೂಹಿಕ ಹತ್ಯೆ! ನಾಪತ್ತೆ ಪ್ರಕರಣ!

ಅಶ್ವಸೂರ್ಯ/ಶಿವಮೊಗ್ಗ:ಕಾಡಿನಲ್ಲಿ ಸಿಕ್ಕ ಅಸ್ಥಿಪಂಜರ ವೆಂಕಟರಮಣ ಭಟ್ಟರದ್ದಲ್ಲ! ಡಿಎನ್‌ಎ ಪರೀಕ್ಷಾ ವರದಿಯ ಆರೋಪದ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
ಪುತ್ತೂರಿನ ಸರಹದ್ದಿನಲ್ಲಿ ನೆಡೆದ ಈ ವಿಚಿತ್ರ ಪ್ರಕರಣವೊಂದು ಬಿಡಿಸಲಾಗದ ಕಗ್ಗಂಟಾಗಿ ಉಳಿದಿದೆ.? ಸುಮಾರು 12 ವರ್ಷಗಳ ಹಿಂದೆ ಪುತ್ತೂರು ಬೆಟ್ಟಂಪಾಡಿ ಗ್ರಾಮದ ಕಕ್ಕೂರಿನಲ್ಲಿ ನೆಡೆದ ಒಂದೇ ಮನೆಯ ನಾಲ್ವರ ಸಾಮೂಹಿಕ ಕೊಲೆ, ಮನೆ ಯಜಮಾನನ ನಾಪತ್ತೆ ಪ್ರಕರಣದ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಕಾಡಿನಲ್ಲಿ ಸಿಕ್ಕಿದ್ದ ಅಸ್ಥಿಪಂಜರ ಮನೆ ಯಜಮಾನ ಕಕ್ಕೂರು ವೆಂಕಟರಮಣ ಭಟ್‌ ಅವರದ್ದಲ್ಲ ಎಂದು ಪುಣೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಮನೆ ಯಜಮಾನನ ನಾಪತ್ತೆ ಪ್ರಕರಣ ಮತ್ತೆ ಬಿಡಿಸಲಾಗದ ಕಗ್ಗಂಟಾಗಿಯೆ ಉಳಿದಿದೆ.?ಈ ಪ್ರಕರಣಕ್ಕೆ ಮುಕ್ತಿ ಸಿಗದೆ ಮತ್ತೆ ನಿಗೂಢವಾಗಿಯೇ ಉಳಿಯುವಂತಾಗಿದೆ.

ಸಾಂದರ್ಭಿಕ ಚಿತ್ರ

ಏನಿದು ಮನೆ ಯಜಮಾನನ ನಾಪತ್ತೆ ಪ್ರಕರಣ!

ಪುತ್ತೂರು ತಾಲೂಕಿನ ಸರಹದ್ದಿನ ಗಡಿಭಾಗದ ರೆಂಜದಿಂದ ಸುಮಾರು ಒಂದೂವರೆ ಕಿ.ಮೀ. ದೂರದ ಕಾಡಿನ ಮಧ್ಯದಲ್ಲಿ ಇರುವ ನಾಟಿ ವೈದ್ಯರ ಮನೆಯಲ್ಲಿ 2012ರ ಜೂನ್ 12ನೇ ತಾರೀಖಿನಂದು ಭೀಕರವಾಗಿ ನಾಲ್ವರ ಹತ್ಯೆ ನಡೆದಿತ್ತು.! ಜೋತಿಷಿ ಮತ್ತು ನಾಟಿ ವೈದ್ಯರಾಗಿದ್ದ ಕಕ್ಕೂರು ವೆಂಕರಮಣ ಭಟ್‌ ಅವರ ಪತ್ನಿ, ಶಿಕ್ಷಕಿ ಸಂಧ್ಯಾ, ಪುತ್ರ ಹರಿಗೋವಿಂದ, ಪುತ್ರಿಯರಾದ ವೇದ್ಯಾ, ವಿನುತಾ ಮನೆಯೊಳಗೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವೆಂಕಟರಮಣ ಭಟ್‌ ಮಾತ್ರ ನಾಪತ್ತೆಯಾಗಿದ್ದರು. ಕೊಲೆ ಪ್ರಕರಣ ನಡೆದು ಮೂರು ದಿನ ಕಳೆದರು ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಅನಂತರ ಕೆಇಬಿ ಮೀಟರ್‌ ರೀಡರ್‌ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿತ್ತು.ಅಲ್ಲಿ ಹೆಂಡತಿ ಮತ್ತು ಮೂವರು ಮಕ್ಕಳು ಕೊಲೆಯಾಗಿ ಹೋಗಿದ್ದರೆ.ಮನೆಯ ಯಜಮಾನ ವೆಂಕಟರಮಣ ಭಟ್ಟರು ನಾಪತ್ತೆಯಾಗಿದ್ದರು.ಇದು ಪೋಲಿಸರಿಗೆ ದೊಡ್ಡ ಸವಾಲ್ ಆಗಿತ್ತು. ಹತ್ಯೆಮಾಡಿದವರು ಯಾರು! ಯಜಮಾನ ವೆಂಕಟರಮಣ ಭಟ್ಟರು ಎಲ್ಲಿ? ಹೆಂಡತಿ ಮಕ್ಕಳ ಹತ್ಯೆಮಾಡಿ ಭಟ್ಟರು ನಾಪತ್ತೆಯಾದರ? ಅಥವಾ ಹಂತಕರು ವೆಂಕಟರಮಣ ಭಟ್ಟರನ್ನು ಹೊತ್ತೊಯ್ದು ದೊರದಲ್ಲೇಲ್ಲೊ ಕೊಲೆಮಾಡಿರ ಬಹುದಾ? ಸಾಕಷ್ಟು ಅನುಮಾನಗಳು ಪೋಲಿಸ್ ಇಲಾಖೆಯ ಜೋತೆಗೆ ಸ್ಥಳೀಯರನ್ನು ಕಾಡಿತ್ತು!

ಕೊನೆಗೂ ಸ್ವಲ್ಪ ಸಮಯದ ನಂತರ ಅವರ ಮನೆಯಿಂದ ಸ್ವಲ್ಪ ದೂರದ‌ ಕಾಡಿನಲ್ಲಿ ಅಸ್ಥಿಪಂಜರ ಸಿಕ್ಕಿತ್ತು!ಅದರೆ ಅದು ಈಗ ವಿಧಿ ವಿಜ್ಞಾನದ ವರದಿಯ ಪ್ರಕಾರ
ಅಸ್ಥಿಪಂಜರ ಭಟ್ಟರದ್ದಲ್ಲ! ಎಂದು ತಿಳಿದು ಬಂದಿದೆ.
ಘಟನೆ ನಡೆದ 5 ತಿಂಗಳ ಬಳಿಕ, 2012ರ ನ. 13ರಂದು ಕಕ್ಕೂರಿನ ದಟ್ಟ ಕಾಡಿನ ಮರವೊಂದರಲ್ಲಿ ಮಾನವ ಅಸ್ಥಿಪಂಜರವೊಂದು ಪತ್ತೆಯಾಗಿತ್ತು. ಇದು ನಾಪತ್ತೆಯಾಗಿದ್ದ ವೆಂಕಟರಮಣ ಭಟ್ಟರದಿರಬೇಕೆಂದು ಪೋಲಿಸರು ಅನುಮಾನ ಪಟ್ಟಿದ್ದರು. ಖಚಿತಪಡಿಸಿಕೊಳ್ಳಲು ಎಲುಬು ಹಾಗೂ ಸಹೋದರರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪುಣೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರ ವರದಿಯಲ್ಲಿ ಅಸ್ಥಿಪಂಜರ ವೆಂಕಟರಮಣ ಭಟ್ಟರದ್ದಲ್ಲ ಅನ್ನುವುದು ಸ್ಪಷ್ಟವಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖೀಸಿದ್ದಾರೆ.

ಕೊಲೆಗಾರ ಯಾರು?

ನಾಲ್ವರನ್ನು ಕೊಂದ ವ್ಯಕ್ತಿ ಯಾರು! ಆತನ ಸುಳಿವು ಇನ್ನೂ ಪತ್ತೆಯಾಗಿಲ್ಲ. ಮನೆ ಯಜಮಾನನ ಸುಳಿವೂ ಇಲ್ಲ. ಘಟನೆ ನಡೆದು 2 ವರ್ಷಗಳ ಬಳಿಕ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದ್ದರೂ ಆ ತನಿಖೆಯಿಂದಲೂ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿಲ್ಲ.
ಕೊಲೆ ನಡೆಯುವ ಒಂದು ವಾರದ ಮೊದಲು ಭಟ್ಟರ ಮನೆಯಲ್ಲಿ ದರೋಡೆ ನಡೆದಿತ್ತು. ಪತ್ನಿಯ 7 ಪವನ್‌ ಚಿನ್ನ ಹಾಗೂ ಮಕ್ಕಳ ಶಿಕ್ಷಣಕ್ಕೆಂದು ಇಟ್ಟಿದ್ದ 50 ಸಾವಿರ ರೂ ನಗದು ಹಣ ಕಳವಾಗಿದ್ದ ಬಗ್ಗೆ ಭಟ್ಟರು ಸ್ಥಳೀಯ ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದಾದ ಒಂದು ವಾರದೊಳಗೆ ಮನೆಯ ನಾಲ್ವರ‌ ಹತ್ತೆ! ಮನೆ ಯಜಮಾನ ವೆಂಕಟರಮಣ ಭಟ್‌ ಅವರ ನಾಪತ್ತೆ ಪ್ರಕರಣ ಸಂಭವಿಸಿದ್ದು ದುರಂತವೆ ಹೌದು.ಅ ಸಮಯದಲ್ಲಿ
ದರೋಡೆ ಎನಗನುವುದೆ ಕಟ್ಟುಕಥೆ ಎಂಬ ಅನುಮಾನ ಸಾರ್ವಜನಿಕರು ಜೊತೆಗೆ ಪೊಲೀಸರಿಂದಲೂ ಅನುಮಾನ ವ್ಯಕ್ತವಾಗಿತ್ತು. ಆದರೆ ಕೊನೆಗೆ ದರೋಡೆ ನಿಜ ಅನ್ನುವುದು ಬಹಿರಂಗಗೊಂಡಿತ್ತು. ಕೊಲೆಯ ಬಳಿಕ ಜಿಲ್ಲೆಯಲ್ಲಿ ಅಂತಾರಾಜ್ಯ ದರೋಡೆ ಪ್ರಕರಣದ ತಂಡದ ಬಂಧನ ಆಗಿ ಕಕ್ಕೂರು ಮನೆಯಲ್ಲಿ ದರೋಡೆ ನಡೆಸಿದ್ದ ಬಗ್ಗೆ ಕಳ್ಳರು ನಾವೇ ಎಂದು ಒಪ್ಪಿಕೊಂಡಿದ್ದರು. ಈ ತಂಡವೇ ಕೊಲೆ ನಡೆಸಿರಬಹುದೆ ಎಂಬ ದಿಕ್ಕಿನಲ್ಲೂ ತನಿಖೆ ನಡೆದಿತ್ತು. ಆದರೆ ಅವರು ಕೃತ್ಯ ಎಸಗಿಲ್ಲ ಎನ್ನುವುದು ತನಿಖೆಯಲ್ಲಿ ಸ್ಪಷ್ಟವಾಗಿತ್ತು.
ಅಸ್ಥಿಪಂಜರ ಹೋಲಿಕೆ ಆಗಿದ್ದರೆ ಪ್ರಕರಣ ಮುಕ್ತಾಯ ಘಟ್ಟ ತಲುಪುತ್ತಿತ್ತು.
ನಾಲ್ವರ ಹತ್ಯೆ ಬಳಿಕ ಮನೆಯವರ ಸಾವಿಗೆ ನಾಗಮಣಿ ದೋಷ ಕಾರಣ ಎನ್ನುವ ಸುದ್ದಿ ಹಬ್ಬಿತ್ತು. ಕೇರಳದಲ್ಲಿ ಪ್ರಶ್ನಾ ಚಿಂತನೆ ನಡೆಸಲು ನಿರ್ಧರಿಸಲಾಗಿತ್ತು ಎನ್ನಲಾಗಿದೆ. ಅಸ್ಥಿಪಂಜರ ವೆಂಕಟರಮಣ ಭಟ್ಟರದ್ದೇ ಆಗಿದ್ದರೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆ ಇತ್ತು. ಅಂದರೆ ಭಟ್‌ ಅವರು ಮನೆ ಮಂದಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದಾಖಲಿಸಿ ಪ್ರಕರಣಕ್ಕೆ ತೆರೆ ಎಳೆಯುವ ಸಾಧ್ಯತೆ ಇತ್ತು. ಆದರೆ ಡಿಎನ್‌ಎ ವರದಿಯ ಬಳಿಕ ಕೊಲೆಗಾರ ಯಾರು? ಹಾಗೂ ನಾಪತ್ತೆಯಾದ ಭಟ್ಟರು ಎಲ್ಲಿದ್ದಾರೆ? ಎಂಬ ಪ್ರಶ್ನೆ ಮತ್ತೆ ಕರಾವಳಿ‌ ಮಂದಿಯ ನಿದ್ದೆ ಗೆಡಿಸಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!