Headlines

ಶಿಕಾರಿಪುರ | ರಸ್ತೆ ಅಪಘಾತ, ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ.!

ಶಿಕಾರಿಪುರ | ರಸ್ತೆ ಅಪಘಾತ, ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ.! ಮೃತರನ್ನು ಸೊರಬ ತಾಲೂಕಿನ ಗಂಗವಳ್ಳಿ ಗ್ರಾಮದ ಸದಾಶಿವ ಮತ್ತು ಲೀಲಮ್ಮ ಅವರ ಪುತ್ರ ಬಸವನಗೌಡ (30) ಹಾಗೂ ಶಿಕಾರಿಪುರ ತಾಲೂಕಿನ ಮತ್ತೀಕೋಟೆ ಗ್ರಾಮದ ಬಸವರಾಜಪ್ಪ ಅವರ ಪುತ್ರಿ ರೇಖಾ (25) ಎಂದು ಗುರುತಿಸಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆಘಾತ ಮತ್ತು ದುಃಖವನ್ನುಂಟುಮಾಡಿದೆ, ಕಾರಣ ಈ ಯುವ ಜೋಡಿಯು ಕೆಲವೇ ದಿನಗಳಲ್ಲಿ ವಿವಾಹವಾಗಬೇಕಿತ್ತು. ದೇವಸ್ಥಾನಕ್ಕೆ ಹೊರಟಿದ್ದಾಗಲೇ ಈ ಅಪಘಾತ ಸಂಭವಿಸಿದೆ…! news.ashwasurya.in ಅಶ್ವಸೂರ್ಯ/ಶಿಕಾರಿಪುರ : ರಸ್ತೆ ಅಪಘಾತ,…

Read More

ಹೈದರಾಬಾದ್ : ಗೃಹಿಣಿಯ ತಲೆಗೆ ಕುಕ್ಕರ್‌ನಿಂದ ಹೊಡೆದು ಭೀಕರ ಹತ್ಯೆ.!

ಹೈದರಾಬಾದ್ : ಗೃಹಿಣಿಯ ತಲೆಗೆ ಕುಕ್ಕರ್‌ನಿಂದ ಹೊಡೆದು ಭೀಕರ ಹತ್ಯೆ.! news.ashwasurya.in ಅಶ್ವಸೂರ್ಯ/ಹೈದರಾಬಾದ್ : ಮಹಿಳೆಯೊಬ್ಬರಿಗೆ ಕುಕ್ಕರ್​​ನಿಂದ ತಲೆಗೆ ಹೊಡೆದು, ಕತ್ತು ಸೀಳಿ ಕೊಲೆ ಮಾಡಿ ಎಸ್ಕೇಪ್ ಆಗಿರುವ ಘಟನೆ ಹೈದರಾಬಾದ್​​ನಲ್ಲಿ ನಡೆದಿದೆ.ಸೈಬರಾಬಾದ್‌ನ ಐಟಿ ಕೇಂದ್ರದಲ್ಲಿರುವ ಗೇಟೆಡ್ ಸಮುದಾಯವಾದ ಸ್ವಾನ್ ಲೇಕ್ ಅಪಾರ್ಟ್‌ಮೆಂಟ್‌ನ 13 ನೇ ಮಹಡಿಯಲ್ಲಿ ಇಬ್ಬರು ವ್ಯಕ್ತಿಗಳು ಮನೆಯನ್ನು ದರೋಡೆ ಮಾಡಿ, ಆಕೆಯ ಮನೆಯಲ್ಲಿಯೇ ಸ್ನಾನ ಮಾಡಿ, ರಕ್ತಸಿಕ್ತ ಬಟ್ಟೆಗಳನ್ನು ಬಿಟ್ಟು ಅಪರಾಧ ಸ್ಥಳದಿಂದ ಪರಾರಿಯಾಗಿದ್ದಾರೆ.50 ವರ್ಷದ ರೇಣು ಅಗರ್ವಾಲ್ ಕೊಲೆಯಾದ ಮಹಿಳೆ ಎಂದು…

Read More

ಶಿವಮೊಗ್ಗ : ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶಿವಮೊಗ್ಗ ಜಿಲ್ಲಾ ಪ್ರವಾಸ.

ಶಿವಮೊಗ್ಗ : ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶಿವಮೊಗ್ಗ ಜಿಲ್ಲಾ ಪ್ರವಾಸ. news.ashwasurya.in ಅಶ್ವಸೂರ್ಯ/ಶಿವಮೊಗ್ಗ : ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರು ಸೆ. 12 ರಂದು ಮ.1.30ಕ್ಕೆ ಶಿವಮೊಗ್ಗ ಜಿಲ್ಲೆಗೆ ಆಗಮಿಸಲಿದ್ದು ಅಂದು ಲಕ್ಕವಳ್ಳಿಯ ತುಂಬಿದ ಭದ್ರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಾಗಿನ ಅರ್ಪಿಸಲಿದ್ದಾರೆ. ಹಾಗೂ ನೂತನವಾಗಿ ನಿರ್ಮಿಸಿರುವ ಪರಿವೀಕ್ಷಣಾ ಮಂದಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮ.3.30ಕ್ಕೆ ಮರಳಿ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಉಪಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More

ಶಿವಮೊಗ್ಗ : ತುಂಗಾನಗರ ಪೊಲೀಸ್ ಠಾಣಾ ಸರಹದ್ದಿನ ಇಂದಿರಾ ನಗರ ವೀರಕೇಸರಿ ಯುವ ಗಣೇಶನ ಅದ್ದೂರಿ ವಿಸರ್ಜನಾ ಮೆರವಣಿಗೆ : ತಾಜುದ್ದೀನ್ ಅಶುರ್ ಖಾನ್ ಕಮಿಟಿಯಿಂದ ಗಣೇಶನಿಗೆ “ಪುಷ್ಪಮಾಲೆ ಅರ್ಪಣೆ”.

ಶಿವಮೊಗ್ಗ : ತುಂಗಾನಗರ ಪೊಲೀಸ್ ಠಾಣಾ ಸರಹದ್ದಿನ ಇಂದಿರಾ ನಗರ ವೀರಕೇಸರಿ ಯುವ ಗಣೇಶನ ಅದ್ದೂರಿ ವಿಸರ್ಜನಾ ಮೆರವಣಿಗೆ : ತಾಜುದ್ದೀನ್ ಅಶುರ್ ಖಾನ್ ಕಮಿಟಿಯಿಂದ ಗಣೇಶನಿಗೆ “ಪುಷ್ಪಮಾಲೆ ಸಮರ್ಪಣೆ”. news.ashwasurya.in ಅಶ್ವಸೂರ್ಯ/ಶಿವಮೊಗ್ಗ ; ದಿನಾಂಕ 10. 09.2025 ರಂದು ತುಂಗಾನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ವೀರ ಕೇಸರಿ ಯುವಪಡೆ ಇಂದಿರಾನಗರ ಇವರ ಆಶ್ರಯದಲ್ಲಿ ಪ್ರತಿಷ್ಠಾಪಿಸಿದ ಗಣಪತಿ ಮೆರವಣಿಗೆಯನ್ನು ಹಮ್ಮಿಕೊಳ್ಳಾಲಾಗಿತ್ತು. ಶ್ರೀ ಗಣೇಶನ ಅದ್ದೂರಿ ರಾಜಬೀದಿ ಉತ್ಸವದ ಸಂಧರ್ಭದಲ್ಲಿ ಇಂದಿರಾನಗರದ ತಾಜುದ್ದೀನ್ ಅಶುರ್ ಖಾನ್ ಕಮಿಟಿಯ ಅಧ್ಯಕ್ಷರಾದ…

Read More

ಉಡುಪಿ : ಶ್ರೀ ಮೂಕಾಂಬಿಕಾ ದೇವಿಗೆ ವಜ್ರದ ಕಿರೀಟ ಸಮರ್ಪಿಸಿದ ಸಂಗೀತ ದಿಗ್ಗಜ ಇಳಯರಾಜ!

ಉಡುಪಿ : ಶ್ರೀ ಮೂಕಾಂಬಿಕಾ ದೇವಿಗೆ ವಜ್ರದ ಕಿರೀಟ ಸಮರ್ಪಿಸಿದ ಸಂಗೀತ ದಿಗ್ಗಜ ಇಳಯರಾಜ.! news.ashwasurya.in ಅಶ್ವಸೂರ್ಯ/ಉಡುಪಿ : ಸಂಗೀತ ಮಾಂತ್ರಿಕ ಇಳಯರಾಜ ಅವರು ಕೊಲ್ಲೂರು ಮೂಕಾಂಬಿಕಾ ದೇವಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರಖಚಿತ ಕಿರೀಟ ಮತ್ತು ಆಭರಣಗಳನ್ನು ಸಮರ್ಪಿಸಿದ್ದಾರೆ. ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗವನ್ನೂ ಅರ್ಪಿಸಿ, ದೇವಿಯ ಅನುಗ್ರಹದಿಂದ ತಮ್ಮ ಜೀವನದಲ್ಲಿ ನಡೆದ ಪವಾಡಗಳನ್ನು ಸ್ಮರಿಸಿಕೊಂಡರು. ಸಂಗೀತ ಲೋಕದ ದಿಗ್ಗಜ, ಸ್ವರ ಮಾಂತ್ರಿಕ ಇಳಯರಾಜ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಪರಮ…

Read More

ಬೆಂಗಳೂರು : ರಾಜ್ಯದ 1000 ಸರ್ಕಾರಿ ಶಾಲೆಗಳಿಗೆ ‘ಸ್ಮಾರ್ಟ್ ಬೋರ್ಡ್’ ಜೋತೆಗೆ ಮೇಜು-ಬೆಂಚುಗಳ ವಿತರಣೆ :ಶಿಕ್ಷಣ ಸಚಿವ ಮಧು ಬಂಗಾರಪ್ಪ

ಬೆಂಗಳೂರು : ರಾಜ್ಯದ 1000 ಸರ್ಕಾರಿ ಶಾಲೆಗಳಿಗೆ ‘ಸ್ಮಾರ್ಟ್ ಬೋರ್ಡ್’ ಜೋತೆಗೆ ಮೇಜು-ಬೆಂಚುಗಳ ವಿತರಣೆ :ಶಿಕ್ಷಣ ಸಚಿವ ಮಧು ಬಂಗಾರಪ್ಪ news.ashwasurya.in ಅಶ್ವಸೂರ್ಯ/ಬೆಂಗಳೂರು : ರಾಜ್ಯದ 1000 ಸರ್ಕಾರಿ ಶಾಲೆಗಳಿಗೆ ಮೇಜು-ಬೆಂಚುಗಳ ಜೊತೆ ಸ್ಮಾರ್ಟ್ ಬೋರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೇಜು-ಬೆಂಚುಗಳ ಜೊತೆಗೆ ಇಂಟರಾಕ್ಟಿವ್ ಎಲ್.ಇ.ಡಿ ಸ್ಮಾರ್ಟ್ ಪ್ಯಾನೆಲ್ಗಳನ್ನು ಒದಗಿಸಲು ಇಂದು ಸಮಗ್ರ ಶಿಕ್ಷಣ ಕಚೇರಿಯಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳು “ಬೆಂಗಳೂರು ರೋಟರಿ ಕ್ಲಬ್ (RCB) ಸಂಸ್ಥೆ”ಯೊಂದಿಗೆ…

Read More
Optimized by Optimole
error: Content is protected !!