ಕಾಂಗ್ರೆಸ್ ನಾಯಕ, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ ಜೈಲಿಗೆ ಹೋಗಿ ಇಂದಿಗೆ 75 ದಿನ ಕಳೆದಿದೆ..! ಗೌಡರ ಮುಂದಿನ ಕಥೆ ಏನು.?
ಏನಿದು ಪ್ರಕರಣ..? ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು 62.77 ಕೋಟಿ ರೂಪಾಯಿ ಸಾಲ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಮಂಜುನಾಥ ಗೌಡ, ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕಿ ಶೋಭಾ ಮತ್ತು ಅವರ ಸಂಬಂಧಿಕರ ಮನೆ, ಕಚೇರಿ ಮೇಲೆ ಎಪ್ರಿಲ್ “8” ರಂದು ಮಂಗಳವಾರ ದಾಳಿ ನಡೆಸಿದ್ದರು. ಈ ವೇಳೆ ಬೆಂಗಳೂರಿನ ಚಾಮರಾಜಪೇಟೆಯ ಅಪೆಕ್ಸ್ ಬ್ಯಾಂಕ್‌ನ ಅತಿಥಿ ಗೃಹದಲ್ಲಿದ್ದ ಮಂಜುನಾಥ ಗೌಡ ಅವರನ್ನು ವಶಕ್ಕೆ ತೆಗೆದುಕೊಂಡಿದ್ದ ಇ.ಡಿ ಅಧಿಕಾರಿಗಳು, ನಂತರ ಅವರನ್ನು ಬಂಧಿಸಿ 14 ದಿನ…
