ಪರಿಪಕ್ವ ಪತ್ರಕರ್ತ ಗಜೇಂದ್ರ ಸ್ವಾಮಿ @ 51
ಪರಿಪಕ್ವ ಪತ್ರಕರ್ತ ಗಜೇಂದ್ರ ಸ್ವಾಮಿ @ 51 ಗಜ ವೃಂದಕ್ಕೆ ಅಧಿಪತಿ ಗಜೇಂದ್ರ. ಪತ್ರಿಕಾ ವೃಂದದಲ್ಲಿ ಇಂತಹ ಅಧಿಪತ್ಯ ಸ್ಥಾಪನೆ ಕಷ್ಟ ಸಾಧ್ಯ. ಆದರೆ ಪಾರುಪತ್ಯ ಸ್ಥಾಪನೆ ಅಸಾಧ್ಯವೇನಲ್ಲ. ಇಂತಹ ಅಸಾಧ್ಯತೆಯನ್ನು ಸಾಧ್ಯತೆಯನ್ನಾಗಿಸಿರುವ ತುಂಗಾ ತರಂಗ ದಿನಪತ್ರಿಕೆಯ ಸಂಪಾದಕ ಗಜೇಂದ್ರ ಸ್ವಾಮಿ 50ನೇ ಜನ್ಮ ದಿನ ಪೂರೈಸಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದಾರೆ.ಮನುಷ್ಯನ ಜೀವಿತಾವಧಿಯಲ್ಲಿ 50 ವರ್ಷ ಪೂರೈಕೆ ಮಹತ್ವದ ಮೈಲಿಗಲ್ಲು. ಗಜೇಂದ್ರ ಸ್ವಾಮಿಗೆ ಅದಾಗಲೇ 50 ವರ್ಷ ತುಂಬಿ ಹೋಯ್ತಾ ಎಂದು ಅಚ್ಚರಿ ಪಡುವಷ್ಟು ಕ್ರಿಯಾಶೀಲ, ಸಕ್ರಿಯ,…
