ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ 11ನೇ ಬಾರಿಗೆ ಆಯ್ಕೆಯಾದ ಆ‌ರ್ ಎಂ ಮಂಜುನಾಥ್ ಗೌಡ ಮತ್ತು ಸದಸ್ಯರಾಗಿ ಆಯ್ಕೆಯಾಗಿರುವ ಹೆಚ್ ಎನ್ ವಿಜಯದೇವ್ ಅವರಿಗೆ ಅಭಿನಂದನೆ : ಅಧ್ಯಕ್ಷರು , ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ತುಳುನಾಡುಸಿರಿ ಸಹಕಾರಿ ಸಂಘ ನಿ, ತೀರ್ಥಹಳ್ಳಿ

ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ 11ನೇ ಬಾರಿಗೆ ಆಯ್ಕೆಯಾದ ಆ‌ರ್ ಎಂ ಮಂಜುನಾಥ್ ಗೌಡ ಮತ್ತು ಸದಸ್ಯರಾಗಿ ಆಯ್ಕೆಯಾಗಿರುವ ಹೆಚ್ ಎನ್ ವಿಜಯದೇವ್ ಅವರಿಗೆ ಅಭಿನಂದನೆ : ಅಧ್ಯಕ್ಷರು , ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ತುಳುನಾಡುಸಿರಿ ಸಹಕಾರಿ ಸಂಘ ನಿ, ತೀರ್ಥಹಳ್ಳಿ

ಅಶ್ವಸೂರ್ಯ/ಶಿವಮೊಗ್ಗ: ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕಿನ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ಇತ್ತು ನೀರಿಕ್ಷೆಯಂತೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ ನೆಡೆಯದೆ ಅವಿರೋಧ ಆಯ್ಕೆಯಾಗಿದೆ. ಅಧ್ಯಕ್ಷರ ಚುನಾವಣೆಗು ಮೊದಲೆ ಅಧ್ಯಕ್ಷರ ಗಾದಿಗೆ ಆರ್ ಎಂ ಮಂಜುನಾಥ್ ಗೌಡರ ಆಯ್ಕೆ ಖಚಿತವಾಗಿತ್ತು ಎಲ್ಲರ ಎಣಿಕೆಯಂತೆ ಆರ್ ಎಂ ಎಂ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ್ದಾರೆ,ಈ ಚುನಾವಣೆಯಲ್ಲಿ ಕುತೂಹಲ ಮೂಡಿಸಿದ್ದ ಉಪಾಧ್ಯಕ್ಷರ ಸ್ಥಾನಕ್ಕೆ ಎಸ್‌.ಕೆ ಮರಿಯಪ್ಪನವರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಅಧಿಕೃತ ಘೋಷಣೆ ಹೊರಬಿದ್ದಿದೆ.

ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕಿಗೆ ಕಳೆದ ಎರಡು ವಾರದ ಹಿಂದೆ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಬೆಂಬಲಿತರು ಮತ್ತು ಬಿಜೆಪಿ ಬೆಂಬಲಿತರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಇದ್ದುದ್ದರಿಂದ ಬಾರಿ ಕೂತುಹಲ ಮೂಡಿಸಿತ್ತು ಅಂತಿಮವಾಗಿ ಕಾಂಗ್ರೆಸ್ ಬೆಂಬಲಿಗರು ಎದುರಾಳಿಗಳನ್ನು ದೂಳಿಪಟ ಮಾಡಿದ್ದರು, ಹದಿನಾಲ್ಕು ಸ್ಥಾನಕ್ಕೆ ನೆಡೆದ ಚುನಾವಣೆಯಲ್ಲಿ ಹನ್ನೆರಡು ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತರು ಗೆದ್ದು ಬಿಗಿದರೆ ಬಿಜಿಪಿ ಬೆಂಬಲಿತರು ಒಂದು ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು.

ಇನ್ನೂ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪನವರ ಬೆಂಬಲಿಗರಾದ ಮಹಾಲಿಂಗ ಶಾಸ್ರೀ ಗೆಲುವು ಸಾಧಿಸಿದ್ದರು.ಕಾಂಗ್ರೆಸ್ ಬೆಂಬಲಿತರಾದ ಸಾಗರ ಶಾಸಕ ಗೋಪಾಲ್ ಕೃಷ್ಣ ಬೇಳೂರು, ಎಂ.ಎಂ ಪರಮೇಶ್ವ‌ರ್, ಬಸವರಾಜ್ ಪಿಎಲ್, ಜಿ.ಎನ್ ಸುಧೀರ್, ಎಸ್ ಕೆ ಮರಿಯಪ್ಪ, ಟಿ.ಶಿವಶಂಕರಪ್ಪ, ಚಂದ್ರಶೇಖ‌ರ್ ಗೌಡ, ಕೆಪಿ ರುದ್ರಗೌಡ, ಆರ್ ಎಂ ಮಂಜುನಾಥ್‌ ಗೌಡ, ಬಸವಾನಿ ವಿಜಯದೇವ್, ಕೆ.ಪಿ ದುಗ್ಗಪ್ಪ ಗೌಡ, ಸಿ.ಹನುಮಂತಪ್ಪ ಗೆಲುವು ಸಾಧಿಸಿದ್ದರು.
ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಆ‌ರ್ ಎಂ ಮಂಜುನಾಥ್ ಗೌಡರು ಡಿಸಿಸಿ ಬ್ಯಾಂಕ್ ನ 11 ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದರೆ ಎಸ್ ಕೆ ಮರಿಯಪ್ಪ ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಸಂಧರ್ಭದಲ್ಲಿ ಡಿಸಿಸಿ ಬ್ಯಾಂಕಿಗೆ 11ನೇ ಬಾರಿಗೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಸಹಕಾರಿ ರತ್ನ ಪುರಸ್ಕೃತರಾದ ಆರ್ ಎಂ ಮಂಜುನಾಥ್ ಗೌಡ, ( ಹಾಲಿ ಅಧ್ಯಕ್ಷರು ಮಲೆನಾಡು ಪ್ರದೇಶ ಮಂಡಳಿ,ಶಿವಮೊಗ್ಗ, ಕರ್ನಾಟಕ ಸರ್ಕಾರ .ನಿರ್ದೇಶಕರು ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ) ಅವರಿಗೂ ಮತ್ತು ಡಿಸಿಸಿ ಬ್ಯಾಂಕಿನ ಸದಸ್ಯರಾಗಿ ಆಯ್ಕೆಯಾಗಿರುವ ಹೆಚ್ ಎನ್ ವಿಜಯದೇವ್, ( ಹಾಲಿ ಅಧ್ಯಕ್ಷರು ಸಹ್ಯಾದ್ರಿ ವಿವಿಧೋದ್ದೇಶ,ತೀರ್ಥಹಳ್ಳಿ ) ಅವರಿಗೂ ತೀರ್ಥಹಳ್ಳಿಯ ತಾಲ್ಲೂಕಿನ ಪ್ರತಿಷ್ಠಿತ ತುಳುನಾಡುಸಿರಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು , ಉಪಾಧ್ಯಕ್ಷರು ಸಂಘದ ಸರ್ವ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ

Leave a Reply

Your email address will not be published. Required fields are marked *

Optimized by Optimole
error: Content is protected !!