ಬಾಯಿಹರುಕರಿಗೆ ಮಣೆ ಹಾಕದ ಬಿಜೆಪಿ : ಮನಬಂದಂತೆ ನಾಲಿಗೆ ಹರಿಬಿಟ್ಟರು ಟಿಕೆಟ್ ಕಳೆದುಕೊಂಡರಾ.!?

ಬಾಯಿಹರುಕರಿಗೆ ಮಣೆ ಹಾಕದ ಬಿಜೆಪಿ : ಮನಬಂದಂತೆ ನಾಲಿಗೆ ಹರಿಬಿಟ್ಟರು ಟಿಕೆಟ್ ಕಳೆದುಕೊಂಡರಾ..!?

ಅಶ್ವಸೂರ್ಯ/ಶಿವಮೊಗ್ಗ

✍️ ಸುಧೀರ್ ವಿಧಾತ

ಇತ್ತೀಚಿನ ದಿನಗಳಲ್ಲಂತು ಮನಬಂದಂತೆ ನಾಲಿಗೆ ಹರಿಬಿಡುವುದನ್ನೆ ಬಂಡವಾಳ ಮಾಡಿಕೊಂಡಿದ್ದರು ಕೇಲವು ರಾಜಕಾರಣಿಗಳು ಯಾವುದೇ ವಿಷಯ ಇರಲಿ ಇವರಿಗೆ ಸಂಭಂದ ಇರದೆ ಹೋದರು ಅ ವಿಷಯದ ಬಗ್ಗೆಯೂ ಮನಬಂದಂತೆ ಮಾತನಾಡಿ ಪಕ್ಷದ ಮಹಾನ್ ನಾಯಕರಂತೆ ಫೋಸುಕೊಡುತ್ತಿದ್ದ ಕೇಲವು ನಾಯಕರನ್ನು ಬಿಜೆಪಿ ಈ ಬಾರಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡದೆ ಸೈಡಿಗೆ ಕೂರಿಸಿದೆ. ರಾಜಕಾರಣವೆ ಮಾತು ಮಾತೆ ರಾಜಕಾರಣ ಎಂದು ಅದನ್ನೆ ಬಂಡವಾಳ ಮಾಡಿಕೊಂಡು ಪಕ್ಷಕ್ಕೆ ಉಂಟಾಗುತ್ತಿದ್ದ ಡ್ಯಾಮೇಜ್‌ ಅನ್ನೂ ಲೆಕ್ಕಿಸದೇ ಮನಬಂದಂತೆ ಮಾತನಾಡುತ್ತಿದ್ದವರನ್ನು ಬಿಜೆಪಿ ಹೈಕಮಾಂಡ್ ಈ ಬಾರಿ ಲೋಕಸಭಾ ಚುನಾವಣೆಯಿಂದ ಹೊರಗಿಟ್ಟಿದೆ.!!

 ಬರಲಿರುವ ಮಹಾ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಂದೆರಡು ದಿನದ ಹಿಂದೆ ಕರ್ನಾಟಕದ ಇಪ್ಪತ್ತು ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿಯ ಹೈಕಮಾಂಡ್ ಟಿಕೆಟ್ ಹಂಚಿಕೆ ಮಾಡಿದೆ. ಆದರೆ ಅದರಲ್ಲಿ ಮಾತೇ ನಮ್ಮ ಬಂಡವಾಳ ಎಂದು ಪಕ್ಷಕ್ಕೆ ಉಂಟಾಗುತ್ತಿದ್ದ ಡ್ಯಾಮೇಜ್‌ ಅನ್ನೂ ಲೆಕ್ಕಿಸದೇ ಮಾತನಾಡುತ್ತಿದ್ದ ಪ್ರಬಲ ಟಿಕೆಟ್ ಅಕಾಂಕ್ಷಿಗಳನ್ನು ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡದೆ ಅವರನ್ನು ದೂರವಿಟ್ಟಂತೆ ಕಾಣುತ್ತಿದೆ.!?
ಅದರಲ್ಲೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವಂತ ಕೇಲವು ನಾಯಕರು ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆದುಕೊಳ್ಳ ಬಹುದು ಎಂದು ಟಿಕೆಟಿಗಾಗಿ ಕಳೆದ ನಾಲ್ಕೈದು ತಿಂಗಳಿಂದ ಭಗೀರಥ ಪ್ರಯತ್ನದಲ್ಲಿದ್ದರು. ನಮಗೆ ಟಿಕೆಟ್ ಸಿಕ್ಕೆ ಸಿಗುತ್ತದೆ ಎಂದು ಅಂದು ಕೊಂಡಿದ್ದವರಿಗೆ ಬಿಜೆಪಿ ಹೈಕಮಾಂಡ್ ಸರಿಯಾದ ಶಾಕ್ ಕೊಟ್ಟಿದೆ. ಲೋಕಸಭೆಯ ಟಿಕೆಟ್ ಸಿಗುತ್ತದೆ ಎಂದು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಘಟಾನುಘಟಿ ನಾಯಕರನ್ನು ಬಿಜೆಪಿ ಹೈಕಮಾಂಡ್ ಟಿಕೆಟ್ ಕೊಡುವುದು ಇರಲಿ ಪಕ್ಷದಿಂದಲೆ ದೂರವಿಟ್ಟಿದೆ.
ಈ ಬಾರಿ ಲೋಕಸಭಾ ಟಿಕೆಟ್ ನಮಗೆ ಸಿಗಲಿದೆ ಎಂದು ಕಾದುಕುಳಿತು ವಂಚಿತರಾದವರು ಶಿವಮೊಗ್ಗ ಕ್ಷೇತ್ರದ ಕೆ ಎಸ್ ಈಶ್ವರಪ್ಪ ಮತ್ತು ಮಗ ಕಾಂತೇಶ್, ದಾವಣಗೆರೆ ಕ್ಷೇತ್ರದ ರೇಣುಕಾಚಾರ್ಯ,ದಕ್ಷಿಣಕನ್ನಡ ಜಿಲ್ಲೆಯ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್,ಚಿಕ್ಕಮಗಳೂರು ಕ್ಷೇತ್ರದ ಮಾಜಿ ಸಚಿವ
ಸಿ.ಟಿ. ರವಿ ಈ ಬಿಜೆಪಿಯ ನಾಯಕರು ಲೋಕಸಭೆಯ ಟಿಕೆಟ್ ನಿರೀಕ್ಷೆಯಿಂದ ರಾಜ್ಯಾದ್ಯಂತ ಹಾಗೂ ತಮ್ಮ ಕ್ಷೇತ್ರದಲ್ಲಿ ಫುಲ್ ಆಕ್ಟಿವ್ ಆಗಿದ್ದರು. ಆಡಳಿತ ಪಕ್ಷದ ಒಂದೊಂದು ಘಟನಾವಳಿಗಳನ್ನೂ ಹಿಡಿದುಕೊಂಡು ಹಿಗ್ಗಾಮುಗ್ಗಾ ಜಾಡಿಸುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹಿಡಿದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹಮಂತ್ರಿ ಡಾ.ಜಿ. ಪರಮೇಶ್ವರ್ ಸೇರಿದಂತೆ ಎಲ್ಲರಿಗೂ ತಮ್ಮ ಮಾತಿನಿಂದ ಮನಬಂದಂತೆ ತಿವಿದ ಇವರುಗಳಿಗೆ ಬಿಜೆಪಿಯ ಹೈಕಮಾಂಡ್ ಸರಿಯಾಗಿಯೇ ಟಿಕೆಟ್ ಕೊಡದೇ ತಿವಿದಿದೆ.!! ಆದರೆ ನಮ್ಮ ಮಾತಿನಿಂದಲೆ ನಮಗೆ ತೊಂದರೆ ಆಗುತ್ತದೆ ಎಂದು ಎಂದೂ ಭಾವಿಸಿರಲಿಲ್ಲ ಈ ನಾಯಕರುಗಳು. ಈಗ ಟಿಕೆಟ್ ವಂಚಿತರಾಗಿ ದಿಕ್ಕೆ ತೋಚದಂತೆ ಕೈಕಟ್ಟಿ ಕುಳಿತಿದ್ದಾರೆ.

ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ

ಪುತ್ರನಿಗೆ ಟಿಕೆಟ್ ಕೊಡಿಸಲು ಪರದಾಡಿದ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ನವರಿಗೆ ಟಿಕೆಟ್ ನೀಡದೆ ಹೈಕಮಾಂಡ್ ದೂರ ತಳ್ಳಿದೆ. ಕೆ.ಎಸ್. ಈಶ್ವರಪ್ಪ ಅವರು ತಮ್ಮ ಪುತ್ರ ಕೆ.ಇ. ಕಾಂತೇಶ್ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿಯೇ ಟಿಕೆಟ್ ನೀಡುವಂತೆ ಕೇಳಿದ್ದರು ಅವರಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದಾಗ ಈಶ್ವರಪ್ಪನವರು ತಮ್ಮ ಸೊಸೆಗೆ ಟಿಕೆಟ್ ಕೊಡಿಸಲು ಮುಂದಾಗಿದ್ದರು ಕೊನೆಗೆ ಟಿಕೆಟ್ ಕೈತಪ್ಪಿ ಸುಮ್ಮನಾಗಿದ್ದರು. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದ ಬಿಜೆಪಿ. ಈಶ್ವರಪ್ಪನವರ ಮಗನಿಗೆ ಪಕ್ಷದಲ್ಲಿ ಕೆಲ ದಿನಗಳ ಕಾಲ ಕಾರ್ಯಕರ್ತನಾಗಿ ಕೆಲಸ ಮಾಡಲಿ ಎಂದು ಹೇಳಿದ್ದರು. ಅದೆ ಸಮಯಕ್ಕೆ ಲೋಕಸಭಾ ಚುನಾವಣೆ ವೇಳೆಗೆ ಹಾವೇರಿಯ ಸಂಸದ ಶಿವಕುಮಾರ್ ಉದಾಸಿ ರಾಜಕೀಯ ನಿವೃತ್ತಿ ಹೊಂದುತ್ತಾರೆ ಎನ್ನುವುದು ಈಶ್ವರಪ್ಪ ನವರಿಗೆ ತಿಳಿದಿತ್ತು ತಕ್ಷಣ ಹಾವೇರಿ ಕ್ಷೇತ್ರಯಿಂದ ತಮ್ಮ ಪುತ್ರ ಕಾಂತೇಶನನ್ನು

ಕೆ ಈ ಕಾಂತೇಶ್

ಕಣಕ್ಕಿಸಿಸಲು ಟಿಕೆಟ್ ಗಿಟ್ಟಿಸಿಕೊಳ್ಳೋಣ ಎಂದು ಈಶ್ವರಪ್ಪ ಕಸರತ್ತು ನಡೆಸಿದ್ದರು. ಸಮಯ ಸಿಕ್ಕಾಗ ಮಗನನ್ನು ಹಾವೇರಿ ಕ್ಷೇತ್ರಕ್ಕೆ ಕಳಿಸಿಕೊಟ್ಟು ಟಿಕೆಟ್ ಗಾಗಿ ಲಾಭಿಮಾಡಲು ಮುಂದಾಗಿದ್ದರು ಜೊತೆಗೆ ಯಾವುದೇ ಅಧಿಕಾರದಲ್ಲಿರದಿದ್ದರೂ ಆಡಳಿತಾರೂಢ ಸರ್ಕಾರಕ್ಕೆ ಮನಬಂದಂತೆ ಬಾಯಿ ಹರಿಬಿಟ್ಟು ತಿವಿಯುತ್ತಿದ್ದರು. ನನ್ನ ಬಾಯಿಯೆ ಬಂಡವಾಳ ಇದನ್ನು ಬಿಜೆಪಿ ಹೈಕಮಾಂಡ್ ಗುರುತಿಸುತ್ತದೆ ಎಂದೇ ತಿಳಿದುಕೊಂಡಂತೆ ಕಾಣುತ್ತಿತ್ತು‌. ಆದರೆ ಇದ್ಯಾವುದನ್ನೂ ಪರಿಗಣಿಸದೇ ಹಾವೇರಿ ಟಿಕೆಟನ್ನು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕೊಟ್ಟು ಈಶ್ವರಪ್ಪ ಅವರನ್ನು ಅವರ ಮಗನನ್ನು ಟಿಕೆಟ್ ಕೊಡದೆ ದೂರವಿಟ್ಟಿದೆ ಬಿಜೆಪಿ ಹೈಕಮಾಂಡ್

ನಳಿನ್ ಕುಮಾರ್ ಕಟೀಲ್

ಇನ್ನೂ ನಳಿನ್ ಕುಮಾರ್ ಕಟೀಲ್ ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷ ಇತ್ತೀಚೆಗೆ ಇವರು ಕೂಡ ಮಾತನಾಡಬೇಕಾದ ಸ್ಥಳದಲ್ಲಿ ಮಾತನಾಡದೇ, ಅನಗತ್ಯವಾಗಿ ಕೆಲವು ಹೇಳಿಕೆಗಳನ್ನು ನೀಡಿ ಬಿಜೆಪಿಗೆ ಸಾಕಷ್ಟು ಡ್ಯಾಮೇಜ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.! ಜೊತೆಗೆ ನಳಿನ್ ಕುಮಾರ್‌ಗ ಅವರಿಗೆ ಶತ್ರುವಾಗಿ ಕಾಡಿದ್ದೆ ಹಿಂದೂ ಕಾರ್ಯಕರ್ತ ಅರುಣ್ ಕುಮಾರ್ ಪುತ್ತಿಲ ಈ ಹಿನ್ನೆಲೆಯಲ್ಲಿ ಬಿಜೆಪಿ ನಳಿನ್ ಕುಮಾರ್ ಕಟೀಲ್ ಅವರಿಗೂ ಹಾಲಿ ಸಂಸದರಾಗಿದ್ದರು ಟಿಕೆಟ್ ಕೊಡದೆ ದೂರವಿಟ್ಟಿದೆ.

ಪ್ರತಾಪ್ ಸಿಂಹ
ಇನ್ನೂ ಮೈಸೂರು ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹನದು ಅದೆ ಕಥೆ ಎಲ್ಲಾ ವಿಷಯಕ್ಕೂ ಬಾಯಿ ಹರಿಬಿಟ್ಟು. ಕೇಲವು ವಿಷಯಗಳಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗುವಂತೆ ಮಾಡಿ‌ ಇಂದು ಟಿಕೆಟ್ ವಂಚಿತರಾಗಿದ್ದಾರೆ. ತನ್ನ ಕ್ಷೇತ್ರದಲ್ಲಿ ಸಾಕಷ್ಟು ಕೇಲಸ ಮಾಡಿದ್ದರು ಟಿಕೆಟ್ ಕೈತಪ್ಪಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಮಖಾಡೆ ಮಲಗಿತ್ತು ಲೋಕಸಭಾ ಕ್ಷೇತ್ರ ಬಿಜೆಪಿಯ ಹಿಡಿತದಲ್ಲಿದ್ದರು ಬಿಜೆಪಿ ಸಾಕಷ್ಟು ವಿಧಾನಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳುವಂತಾಯಿತ್ತು.ಬಿಜೆಪಿಯ ಹೈಕಮಾಂಡ್ ಈಗ ಪ್ರತಾಪ್ ಸಿಂಹನ ಹಲ್ಲು ಕಿತ್ತು ಸೈಡಿಗೆ ಕೂರಿಸಿ ಮೈಸೂರು ರಾಜಮನೆತನದ ಯದುವೀರ್ ಒಡೆಯರ್ ಗೆ ಟಿಕೆಟ್ ನೀಡಿದೆ

ಎಂ ಪಿ‌ ರೇಣುಕಾಚಾರ್ಯ
ಇನ್ನೂ ಎಂ.ಪಿ. ರೇಣುಕಾಚಾರ್ಯ ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊನ್ನಾಳಿ ಕ್ಷೇತ್ರದಿಂದ ಭರ್ಜರಿ ಸೋಲುಂಡರು ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಹಾನುಭಾವ ಎಂ.ಪಿ. ರೇಣುಕಾಚಾರ್ಯ ನಾನು ಕೂಡ ಲೋಕಸಭಾ ಟಿಕೆಟ್ ಆಕಾಂಕ್ಷಿ ಎಂದು ತಮಗೆ ತಾವೆ ಬಿಂಬಿಸಿಕೊಂಡಿದ್ದರು. ಟಿಕೆಟ್ ಹಂಚಿಕೆಗೂ ಮುನ್ನವೇ ಬಿಜೆಪಿಯ ಹಲವು ನಾಯಕರನ್ನು ಭೇಟಿ ಮಾಡಿದ್ದರು ಹೈಕಮಾಂಡ್ ಅಂಗಳಕ್ಕೂ ಹೋಗಿ ಬಂದಿದ್ದರು ಜೋತೆಗೆ ಮಾಜಿ ಮುಖ್ಯಮಂತ್ರಿ ಬಿಜೆಪಿಯ ಪ್ರಬಲ ನಾಯಕ ಬಿ ಎಸ್ ಯಡಿಯೂರಪ್ಪ ನವರ ಪರಮ ಶಿಷ್ಯ ಎಂದುಕೊಂಡಿದ್ದ ರೇಣುಕಾಚಾರ್ಯ ಅವರಿಗೆ ಟಿಕೆಟ್ ಸಿಗುವ ನಂಬಿಕೆ ಇತ್ತು ಆದರೆ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಬದಲಿಗೆ ಹೈಕಮಾಂಡ್ ಅವರ ಪತ್ನಿಗೆ ಟಿಕೆಟ್ ನೀಡಿದೆ. ದಾವಣಗೆರೆಯಲ್ಲಿ ಶ್ಯಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಪ್ರಭಲ ಪೈಪೋಟಿ ನೀಡುವ ವ್ಯಕ್ತಿಯನ್ನು ಪರಿಗಣಿಸಿ ರೇಣುಕಾಚಾರ್ಯ ಅವರಿಗೆ ಟಿಕೆಟ್ ನೀಡಲು ಮನಸ್ಸು ಮಾಡಿಲ್ಲ ಎಂದು ತಿಳಿದುಬಂದಿದೆ.

ಸಿ ಟಿ ರವಿ
ಇನ್ನೂ ಮಾಜಿ ಸಚಿವ ಸಿ.ಟಿ. ರವಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಾರಿ ಮತಗಳ ಅಂತರದಲ್ಲಿ ಸೋಲಿಗೆ ಶರಣಾಗಿದ್ದರು.
ಇವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿಯೂ ಕೆಲಸ ಮಾಡಿದ್ದಾರೆ ಜೋತೆಗೆ ಬಿಜೆಪಿ ಹೈಕಮಾಂಡ್ ಸಾಕಷ್ಟು ನಾಯಕರು ಇವರ ಆಪ್ತರಾಗಿದ್ದರೂ ಇವರಿಗೆ ಟಿಕೆಟ್ ಸಿಗದೆ ಹೋಗಿದೆ. ಸಿ.ಟಿ. ರವಿ ಅವರಿಗೂ ತಮ್ಮ ನಾಲಿಗೆಯ ಮೇಲೆ ಹಿಡಿತವಿಲ್ಲ. ಕೆಲವೊಮ್ಮೆ ತಮ್ಮ ವಿರೋಧ ಪಕ್ಷವನ್ನು ತಮ್ಮ ಮಾತಿನಿಂದ ತಿವಿಯುವುದು ಇರಲಿ ತಮ್ಮ ಪಕ್ಷದ‌ ಕೇಲವು ನಾಯಕರನ್ನು ಆಗಾಗ ತಿವಿಯುತ್ತಿದ್ದರು ಈಗ ಇದೆ ಅವರಿಗೆ ಮುಳ್ಳಾಗಿರುವಂತೆ ಕಾಣುತ್ತಿದೆ.!?

ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಕೂಡ ಬಾಯಿ ಆಗಾಗ ಮನಬಂದಂತೆ ಹರಿಬಿಡುತ್ತಾರೆ.ಇವರ ವಿರುದ್ಧ ಅವರ ಕ್ಷೇತ್ರದಲ್ಲಿ ಗೋ ಬ್ಯಾಕ್ ಅಭಿಯಾನ ಆರಂಭವಾಗಿದ್ದರೂ ಸುಮ್ಮನಿದ್ದರು. ಇದರಿಂದ ತಮಗೆ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದರು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಕ್ಷೇತ್ರವೂ ಸೇರಿದಂತೆ ಇಡೀ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ಉಳಿಸಿಕೊಳ್ಳಲಾಗದ ನಾಯಕ ಸಿ.ಟಿ. ರವಿ ಅವರಿಗೆ ಟಿಕೆಟ್ ನೀಡುವುದು ಉಚಿತವಲ್ಲವೆಂದು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ಕೊಡಲಾಗಿದೆ. ಇಲ್ಲಿನ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ.
ಇಲ್ಲಿ ಟಿಕೆಟ್ ಪಡೆದವರನ್ನು ಟಿಕೆಟ್ ವಂಚಿತರಾದವರನ್ನು ಕೂಲಂಕಷವಾಗಿ ಗಮನಿಸಿದರೆ ಬಿಜೆಪಿ ಹೈಕಮಾಂಡ್ ಸರಿಯಾದ ತೀರ್ಮಾನ ಮಾಡಿರಬಹುದ.!?

Leave a Reply

Your email address will not be published. Required fields are marked *

Optimized by Optimole
error: Content is protected !!