ಈಶ್ವರಪ್ಪರಿಗೆ ತಾಕತ್ ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿ: ಆಯನೂರು ಮಂಜುನಾಥ್ ಸವಾಲು
ಅಶ್ವಸೂರ್ಯ/ಶಿವಮೊಗ್ಗ
✍️ ಸುಧೀರ್ ವಿಧಾತ
ಶಿವಮೊಗ್ಗ, ಮಾ.14: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರಿಗೆ ಧಮ್ ಎನ್ನುವುದು ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ನವರ ಪುತ್ರ ಕೆ.ಈ ಕಾಂತೇಶನಿಗೆ ಯಾರು ಟಿಕೆಟ್ ತಪ್ಪಿಸಲಿಲ್ಲ, 40% ಕಮಿಷನ್ ಹಗರಣದ ಹಿನ್ನೆಲೆಯಲ್ಲಿ ಟಿಕೆಟ್ ಕೈ ತಪ್ಪಿದೆ. ಅವರು ಹೇಳ್ತಿರೋದು ಎಲ್ಲಾ ಸುಳ್ಳು. ಈಶ್ವರಪ್ಪ ಬ್ಲ್ಯಾಕ್ ಮೇಲ್ ರಾಜಕಾರಣಿ ಈಗಲೂ ಯಾವುದಾದರೂ ಒಂದು ಹುದ್ದೆಯ ಮೇಲೆ ಕಣ್ಣಿಟ್ಟು ಹೆದರಿಸಲು ಬ್ಲಾಕ್ ಮೇಲ್ ತಂತ್ರಕ್ಕೆ ಮುಂದಾಗಿದ್ದಾರೆ ಎಂದು ತೀವ್ರ ವಾಗ್ದಾಳಿ ಮಾಡಿದರು.
ಕಳೆದ ಬಾರಿ ವಿಧಾನಸಭೆಗೆ ಟಿಕೆಟ್ ಕೇಳಿದ್ರು ಕೈ ತಪ್ಪಿಹೊಯ್ತು ಈಗ ಪುತ್ರನಿಗೆ ಇಲ್ಲ ನನಗೆ ಇಬ್ಬರಿಗೂ ಕೊಡಲು ಸಾಧ್ಯವಾಗದಿದ್ದರೆ ಸೊಸೆಗೆ ಲೋಕಸಭೆಯ ಟಿಕೆಟ್ ಕೇಳಿದ್ದರು, ಈಗ ಎರಡೂ ಕೈ ತಪ್ಪಿ ಹೋಯ್ತು. ಈಗ ಇನ್ನೂ ಪದವೀಧರ ಕ್ಷೇತ್ರ ಕೇಳಬಹುದು. ಅದು ಸಿಗಲಿಲ್ಲ ಅಂದ್ರೆ ಜಿಲ್ಲಾ ಪಂಚಾಯತ್ ಇದೆಯಲ್ಲಾ ಅದಕ್ಕಾಗಿ ಈ ರೀತಿ ಬಂಡಾಯದ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.
ಈಶ್ವರಪ್ಪನವರು ಖಂಡಿತವಾಗಿ ಪಕ್ಷೇತರವಾಗಿ ಸ್ಪರ್ಧೆ ಮಾಡೋಲ್ಲ ಮಾಡುವ ಧೈರ್ಯ ಮೊದಲೆ ಇಲ್ಲಾ ಅವರಿಗೆ ಖಂಡಿತವಾಗಿ ಅಂತಹ ಧೈರ್ಯ ಬರೋದಿಕ್ಕೆ ಸಾಧ್ಯವು ಇಲ್ಲ ಮಾಧ್ಯಮದವರು ಅವರಿಗೆ ಏಕೆ ಇಷ್ಟೊಂದು ಮನ್ನಣೆ ಕೊಡ್ತೀರಾ? ಕೈಲಾಗದ ವ್ಯಕ್ತಿ ಬಗ್ಗೆ ಏಕೆ ಪ್ರಶ್ನೆ ಕೇಳ್ತೀರಾ? ಶಿವಮೊಗ್ಗ ಜಿಲ್ಲೆಯ ಯಾವ ತಾಲೂಕಿನಲ್ಲಿ ಈಶ್ವರಪ್ಪನವರ ಪ್ರಭಾವ ಇದೆ ಎಂದು ನೀವೆ ಹೇಳಿ ಎಂದು ಪ್ರಶ್ನಿಸಿದರು.
ಈಶ್ವರಪ್ಪ ಯಾವ ರಾಜ್ಯ ನಾಯಕನೂ ಅಲ್ಲ, ಕೇವಲ ಶಿವಮೊಗ್ಗ ನಗರ ರಾಷ್ಟ್ರೀಯ ನಾಯಕ ಎಂದಷ್ಟೇ ಹೇಳಿದರು ಈಶ್ವರಪ್ಪ ನಿಲ್ಲುವುದು ಹೌದಾದರೆ ಅವರಿಗೆ ಧೈರ್ಯವಿದ್ದದ್ದೆ ಅದರೆ, ಜನರಿಗೆ ಬೇಕಾದ ವ್ಯಕ್ತಿ ಆದರೆ ಪಕ್ಷೇತರವಾಗಿ ಸ್ಪರ್ಧೆ ಮಾಡಲಿ. ಒಂದು ವೇಳೆ ಪಕ್ಷೇತರವಾಗಿ ಸ್ಪರ್ಧೆ ಮಾಡಿದರೆ ನನ್ನ ಮನೆಯ ಐದು ಓಟು ಕಾಂಗ್ರೆಸ್ ಪಕ್ಷಕ್ಕೆ ನನ್ನ ಓಟು ಈಶ್ವರಪ್ಪ ಅವರಿಗೆ ಹಾಕುತ್ತೇನೆ ಎಂದು ವ್ಯಂಗ್ಯ ಮಾಡಿದರು.ಇನ್ನೂ ಈಶ್ವರಪ್ಪ ಬೆಂಬಲಿಗರಂತೆ ಇರುವ ಕೇಲವರು ಮತ್ತು ಈಶ್ವರಪ್ಪ ನವರ ಜೋತೆಯಲ್ಲಿ ಮಾಧ್ಯಮದವರ ಮುಂದೆ ಕುಳಿತು ಕೊಳ್ಳುವ ಇನ್ನೂ ಕೇಲವರು ಮತ್ತು ಚನ್ನಿ, ಮೇಘರಾಜ್ ಹಾಗೂ ಇನ್ನೂ ಕೇಲವರು 15 ತಾರೀಖು ಈಶ್ವರಪ್ಪ ಕರೆದಿರುವ ಬೆಂಬಲಿಗರ ಸಭೆಯಲ್ಲಿ ಅವರುಗಳು ಯಾರು ಕಾಣುವುದಿಲ್ಲ.!ಈಶ್ವರಪ್ಪ ನವರಿಗೆ ಧಮ್ ಗಿಮ್ ಏನೂ ಇಲ್ಲ .ಅವರಿಗೆ ರಾಜಕೀಯ ಗಂಡಸ್ತನ ಮೊದಲೆ ಇಲ್ಲ. ನಾಳೆ ಮೋದಿ ಬಂದಾಗ ಓಡಿಹೋಗಿ ಮೋದಿ ಕಾಲಿಗೆ ಬೀಳ್ತಾರೆ ಎಂದು ಟೀಕಿಸಿದರು.
ಮಾ.15ರಂದು ನಡೆಯುವ ಸಭೆಯಲ್ಲಿ ಯಾವುದೇ ಭೂಕಂಪ ಆಗಲ್ಲ. ಹೊರಗಿನವರನ್ನು ಕರೆದುಕೊಂಡು ಬಂದು ಸಭಾಂಗಣ ತುಂಬಿಸಬೇಕು ಅಷ್ಟೇ.ಈಶ್ವರಪ್ಪ ಅವರ ಕೈಯಲ್ಲಿ ಏನೇನು ಆಗಲ್ಲ. ಕೇವಲ ಬೋರ್ಡ್ ಅಧ್ಯಕ್ಷರ ಸ್ಥಾನ ಅಥವಾ ಯಾವುದಾದರೊಂದು ಹುದ್ದೆ ಪಡೆಯಲು ಈ ರೀತಿ ಮಾಡ್ತಿದ್ದಾರೆ. ಈಶ್ವರಪ್ಪ ಯಾವುದೇ ರಾಷ್ಟ್ರ ಭಕ್ತ ಅಲ್ಲ, ಕಪಟ ರಾಷ್ಟ್ರ ಭಕ್ತ ಎಂದು ಕೆಪಿಸಿಸಿ ವಕ್ತಾರರಾದ ಅಯಾನುರು ಮಂಜುನಾಥ್ ವ್ಯಂಗ್ಯ ಮಡಿದರು.
ಈ ಬಾರಿ ನಾವು ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಗೆಲ್ಲುತ್ತೇವೆ. ನಮ್ಮ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್.ಅವರು ಈ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಪದವಿಧರರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಮಂಜಣ್ಣ ಟಿಕೆಟ್ ನನಗೆ ಸಿಗಲಿ ಅಥವಾ ದಿನೇಶ್ ಅವರಿಗೆ ಸಿಗಲಿ ಒಟ್ಟಿಗೆ ಜೊತೆಯಾಗಿಯೇ ಇದ್ದು ಕೆಲಸ ಮಾಡುತ್ತೇವೆ ಟಿಕೆಟ್ ಸಿಕ್ಕ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಿತ್ತೇವೆ ಎಂದರು…