ತಡರಾತ್ರಿ ನಿದ್ದೆಗಣ್ಣಿನಲ್ಲಿ ಆರು ವರ್ಷದ ಬಾಲಕಿಯೊಬ್ಬಳು ಮೂರು ಕಿ.ಮೀ ನಡೆದು ಹೋಗಿದ್ದಾಳೆ..!!ಹೋಗಿದ್ದಾದರು ಎಲ್ಲಿಗೆ..!! ಮಧ್ಯರಾತ್ರಿಯಲ್ಲಿ ಬಾಲಕಿಯನ್ನು ರಕ್ಷಿಸಿದ ಬಾರ್ ಸಿಬ್ಬಂದಿ..!!
ಕುಂದಾಪುರ: ರಾತ್ರಿ ಮನೆಯಲ್ಲಿ ಅಮ್ಮನ ಮಗ್ಗುಲಲ್ಲಿ ಮಲಗಿದ್ದ ಆರು ವರ್ಷದ ಬಾಲಕಿಯೊಬ್ಬಳು ನಿದ್ದೆಗಣ್ಣಿನಲ್ಲಿ ಎದ್ದು ಮನೆಯ ಬಾಗಿಲು ತೆರೆದು ಸುಮಾರು ಮೂರು ಕಿಲೋಮೀಟರ್ ದೂರ ನಡೆದು ಹೋಗಿ ಕೊರಗಜ್ಜನ ನಾಮಫಲಕದ ಮುಂದೆ ನಿಂತಿದ್ದಾಳೆ. ಈ ಘಟನೆ ಯೊಂದು ಬುಧವಾರ ತಡರಾತ್ರಿಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಸಮೀಪದ ದಬ್ಬೆಕಟ್ಟೆ ಮತ್ತು ತೆಕ್ಕಟ್ಟೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದ ಚಾರುಕೊಟ್ಟಿಗೆಯ ಅರ್ಚನಾ ಬಾರ್ ನ ವಿಶ್ವನಾಥ್ ಎಂಬವರಿಗೆ ಬಾಲಕಿ ನಿಂತಿರುವುದು ಕಂಡಿದೆ. ಒಂದು ಕ್ಷಣಕ್ಕೆ ಅವರಿಗೆ ಗಾಬರಿಯಾದರು ತಕ್ಷಣಕ್ಕೆ ಆಕೆಯನ್ನು ಸೂಕ್ಷ್ಮವಾಗಿ…