ಬಿಜೆಪಿ ಟಿಕೆಟ್ ಕೊಡಿಸೋದಾಗಿ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪ ಚೈತ್ರಾ ಕುಂದಾಪುರ ಬಂಧನ!!, ಕಬಾಬ್ ಮಾರೋನಿಗೆ RSS ಪ್ರಚಾರಕನ ವೇಷ ತೊಡಿಸಿದ್ಲಾ ಹಿಂದೂ ಪ್ರಚಾರಕಿ!!
ಹಿಂದೂ ಪ್ರಚಾರಕಿ ಚೈತ್ರಾ ಕುಂದಾಪುರ ಹಿಂದೂ ಸಂಘಟನೆಯ ಪ್ರಚಾರಕಿ, ಪ್ರಚೋದನಕಾರಿ ಭಾಷಣಕ್ಕೆ ಹೆಸರುವಾಸಿಯಾಗಿದ್ದ ಚೈತ್ರಾ ಕುಂದಾಪುರರನ್ನು ಸಿಸಿಬಿ ಬೆಂಗಳೂರು ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೈಂದೂರಿನ ಸಮಾಜ ಸೇವಕರಾದ ಗೋವಿಂದ್ ಬಾಬು ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ ಐದು ಕೋಟಿ ರೂಪಾಯಿ ವಂಚಿಸಿರುವ ಆರೋಪದ ಮೇರೆಗೆ ಮಂಗಳವಾರ ರಾತ್ರಿ ಸಿಸಿಬಿ ಪೋಲಿಸರು ಸಿನಿಮಾ ಶೈಲಿಯಲ್ಲಿ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್ ನಾಯಕ್ ಪೆಲತ್ತೂರು ಅವರನ್ನು ಪೊಲೀಸರು ಅರೆಸ್ಟ್…