ಹುಬ್ಬಳ್ಳಿ : ಇದೆಂಥ ಸಾವು ವಿಧಿಯೆ..!? ಒಂದು ಕಡೆ ಮಗಳ ಹುಟ್ಟು ಹಬ್ಬದ ಸಂಭ್ರಮ. ಮತ್ತೊಂದು ಕಡೆ ಅಪ್ಪನ ಸಾವಿನ ಸುದ್ದಿ.!
news.ashwasurya.in
ಇದೆಂಥ ಸಾವು ವಿಧಿಯೆ.,!? ಒಂದು ಕಡೆ ಮಗಳ ಜನ್ಮದಿನದ ಸಂಭ್ರಮ. ಮತ್ತೊಂದು ಕಡೆ ಅಪ್ಪನ ಸಾವಿನ ಸುದ್ದಿ.! ಮಗಳ ಹುಟ್ಟು ಹಬ್ಬಕ್ಕೆ ಒಯ್ಯುತ್ತಿದ್ದ ಕೇಕ್ ರಸ್ತೆಯಲ್ಲೆ….
ಮಂಗಳೂರು/ ಹುಬ್ಬಳ್ಳಿ : ಅಂದು ಮಗಳ ಜನ್ಮದಿನ ಸಡಗರ ಹೀಗಾಗಿ, ಹುಟ್ಟುಹಬ್ಬ ಆಚರಣೆ ಮಗಳನ್ನು ಖುಷಿಪಡಿಸಬೇಕು ಆಕೆಯ ಕೈಯಲ್ಲಿ ಕೇಕ್ ಕಟ್ ಮಾಡಿಸಬೇಕೆನ್ನುವ ಸಂತೋಷದಲ್ಲಿ ತಂದೆ ಕೇಕ್ ತರಲು ಹೊರಟಿದ್ದರು.ಇನ್ನೇನು ಕೇಕ್ ತೆಗೆದುಕೊಂಡು ಮನೆಗೆ ಹೋಗಿ ಮಗಳ ಕೈಯಲ್ಲಿ ಕತ್ತರಿಸಬೇಕೆಂದು ಮನೆಯಕಡೆಗೆ ತಮ್ಮ ಬೈಕಿನಲ್ಲಿ ಹೋಗುತ್ತಿದ್ದರು ಆದರೆ ಅ ಹೊತ್ತಿಗಾಗಲೇ ದಾರಿಯಲ್ಲಿ ಜವರಾಯ ಅಟ್ಟಹಾಸ ಮೆರೆಯಲು ಹೊಂಚು ಹಾಕಿ ಕುಳಿತಿದ್ದ.!
ಸಾಂದರ್ಭಿಕ ಚಿತ್ರ

ಹೌದು ಮಗಳ ಹುಟ್ಟು ಹಬ್ಬಕ್ಕೆ ಕೇಕ್ ಖರೀದಿ ಮಾಡಿ ಹೊರಟಿದ್ದ ತಂದೆ ನಡು ರಸ್ತೆಯಲ್ಲಿ ಬೈಕ್ ಸ್ಕೀಡ್ ಆಗಿ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು ಮಸಣ ಸೇರಿದ್ದಾರೆ. ಈ ಘಟನೆ ನಡೆದಿರೋದು ಹುಬ್ಬಳ್ಳಿ ಹೊರವಲಯದ ಕುಂದಗೋಳ ಕ್ರಾಸ್ ಬಳಿ. ಮಂಜುನಾಥ್ ಅಲಿಯಾಸ್ ಸಾರಥಿ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಬೈಕ್ ಸ್ಕಿಡ್ ಆಗಿ ಮಂಜುನಾಥ್ ಪ್ರಾಣ ಕಳೆದು ಕೊಂಡಿದ್ದಾರೆ.
ಮಗಳ ಹುಟ್ಟು ಹಬ್ಬವನ್ನು ಆಚರಿಸಬೇಕಾದ ತಂದೆ ಶವವಾಗಿ ಮಲಗಿದರೆ..ಸಂಭ್ರಮದ ಮನೆಯಲ್ಲಿ ಸೂತಕ ಅವರಿಸಿತ್ತು.
ಮೃತ ಮಂಜುನಾಥ್ ಅವರು ಶಾಸಕ ಮಹೇಶ್ ಟೆಂಗಿನಕಾಯಿ ಅವರ ಕಾರು ಚಾಲಕರಾಗಿದ್ದರು. ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು ಚಾಲಕನನ್ನು ಕಳೆದುಕೊಂಡ ಮಹೇಶ್ ಟೆಂಗಿನಕಾಯಿ ಕೂಡ ದುಃಖಿತರಾಗಿದ್ದಾರೆ.


