ಶಿವಮೊಗ್ಗ : ತುಂಗಾ ನದಿಯಲ್ಲಿ ಮುಳುಗಿ DVS ಪಿಯು ಕಾಲೇಜು ವಿದ್ಯಾರ್ಥಿ ಮೃತ್ಯು.!
news.ashwasurya.in
ಪಿಳ್ಳಂಗಿರಿಯ ದೇವಸ್ಥಾನಕ್ಕೆ ತೆರಳಿದ ಪಿಯು ವಿಧ್ಯಾರ್ಥಿ ತುಂಗಾ ನದಿಯಲ್ಲಿ ಈಜಲು ಹೋಗಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಅಶ್ವಸೂರ್ಯ/ಶಿವಮೊಗ್ಗ : ತುಂಗಾ ನದಿಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಶಿವಮೊಗ್ಗ ತಾಲೂಕಿನ ಪಿಳ್ಳಂಗಿರಿ ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ ನಗರದ ಕಾಮಕ್ಷಿ ಬೀದಿಯ ನಿವಾಸಿ ಪ್ರೇಮ್ ಕುಮಾರ್(17) ಮೃತ ಬಾಲಕ. ಪ್ರೇಮ್ ಕುಮಾರ್ ಸ್ನೇಹಿತರ ಜೊತೆ ದೇವಾಲಯ ತೆರಳಿದ ವೇಳೆ ಈಜಲು ನದಿಗೆ ಇಳಿದ್ದಾಗ ಅವಘಡ ಸಂಭವಿಸಿದೆ.
ಡಿವಿಎಸ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಪ್ರೇಮ್ ಕುಮಾರ್ ಸ್ನೇಹಿತ ಜೊತೆ ಪಿಳ್ಳಂಗಿರಿಗೆ ತೆರಳಿದಾಗ ತುಂಗ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತದೇಹ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


