- ಸುಧೀರ್ ವಿಧಾತ
ರೇಣುಗೌಡರ ಸಾರಥ್ಯದ ಅಂತರರಾಷ್ಟ್ರೀಯ ಮಟ್ಟದ ಬೆಂಗಳೂರು ಫ್ರೆಂಡ್ಸ್ ಟ್ರೋಫಿ ಮುಡಿಗೆರಿಸಿಕೊಂಡ ಛತ್ತೀಸ್ಗಢದ ಬಾಲಾಜಿ ನಾನು ತಂಡ.!, ದ್ವೀತಿಯ ಬಹುಮಾನಕ್ಕೆ ತೃಪ್ತಿ ಪಟ್ಟ ಶ್ರೀಲಂಕಾದ ವೀನುಸ್ ಬೋಲೋಗ್ನೋ ತಂಡ
ASHWASURYA/SHIVAMOGGA
✍️ SUDHIR VIDHATA
ಅಶ್ವಸೂರ್ಯ/ಶಿವಮೊಗ್ಗ: ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯ ನಡುವೆಯು ಯಾವುದೇ ಆತಂಕವಿಲ್ಲದೆ ರೇಣುಗೌಡರ ಸಾರಥ್ಯದಲ್ಲಿ ನಾಲ್ಕು ದಿನಗಳ ಕಾಲ ಪಿಣ್ಯಾದ ಎರಡನೇ ಹಂತದಲ್ಲಿರುವ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನೆಡೆಯಿತು ಅಂತರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ.ಶ್ರೀಲಂಕಾದ ಎರಡು ಪ್ರತಿಷ್ಠಿತ ತಂಡಗಳ ಜೋತೆಗೆ ಹೊರ ರಾಜ್ಯದ ನಾಲ್ಕು ತಂಡಗಳು ಮತ್ತು ರಾಜ್ಯದ ಹತ್ತು ಶ್ರೇಷ್ಠ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿ ಈ ಪಂದ್ಯಾವಳಿಗೆ ಇನ್ನಷ್ಟು ಮೆರಗನ್ನು ಹೆಚ್ಚಿಸಿದ್ದರು ಎಂದರೆ ತಪ್ಪಾಗಲಾರದು. ಕರ್ನಾಟಕದಲ್ಲಿ ಮನೆ ಮಾತಾಗಿರುವ ” ಫ್ರೆಂಡ್ಸ್ ಸ್ಪೋರ್ಟ್ಸ್ & ಕಲ್ಬರಲ್ ಅಸೋಸಿಯೇಷನ್ ” ಬೆಂಗಳೂರು ಇವರ ಆಶ್ರಯದಲ್ಲಿ ನೆಡೆದ ಈ ಒಂದು ಪಂದ್ಯಾವಳಿಯು ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಂಡಿದೆ.ಪ್ರತಿಯೊಂದು ಪಂದ್ಯವೂ ಅಂತರರಾಷ್ಟ್ರೀಯ ಪಂದ್ಯಕ್ಕೆ ಸಮನಾಗಿ ನೆಡೆದಿದೆ, ಸಾವಿರಾರು ಮಂದಿ ಪ್ರೇಕ್ಷಕರು ಪ್ರತಿಯೊಂದು ಪಂದ್ಯವನ್ನು ವೀಕ್ಷಿಸಿಸಿದ್ದಾರೆ,ಈ ಪಂದ್ಯಾವಳಿಯ ಪ್ರತಿಯೊಂದು ಪಂದ್ಯವು ಕುತೂಹಲಕಾರಿ ಘಟ್ಟವನ್ನು ತಲುಪಿ ಕೇಲವು ತಂಡಗಳು ಸೋಲಿನ ಕಹಿ ಉಂಡರೆ ಇನ್ನೂ ಕೇಲವು ತಂಡಗಳು ಗೆಲುವಿನ ನಗೆ ಬೀರಿದ್ದಾರೆ.
ಟೆನ್ನಿಸ್ ಬಾಲ್ ಕ್ರಿಕೆಟಿನ ಶ್ರೇಷ್ಠ ತಂಡಗಳಲ್ಲಿ ಒಂದಾದ ಫ್ರೆಂಡ್ಸ್ ಬೆಂಗಳೂರು ತಂಡ ಈ ಅದ್ದೂರಿ ಅಂತರಾಷ್ಟ್ರೀಯ ಪಂದ್ಯಾವಳಿಯನ್ನು ಆಯೋಜಿಸಿ ಇನ್ನಷ್ಟು ಎತ್ತರಕ್ಕೆ ಬೆಳೆದು ನಿಂತಿದೆ. ರೇಣುಗೌಡ ಮತ್ತು ಅವರ ತಂಡದ ಸತತ ಪರಿಶ್ರಮದಿಂದೆ ಇಂದು ಕರ್ನಾಟಕದಲ್ಲಿ ಅಂತರರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯವಾಗಿದೆ.
ಉದ್ಯಾನ ನಗರಿ ಬೆಂಗಳೂರಿನ ಪಿಣ್ಯಾ ಎರಡನೆ ಹಂತದಲ್ಲಿ ರೇಣುಗೌಡರ ಸಾರಥ್ಯದಲ್ಲಿ ಅದ್ದೂರಿಯಾಗಿ ನಿರ್ಮಿಸಲಾದ ಸುಂದರ ಕ್ರೀಡಾಂಗಣದಲ್ಲಿ ಹೊರ ರಾಷ್ಟ್ರ ಶ್ರೀಲಂಕಾದ ಎರಡು ತಂಡ ಮತ್ತು ಹೊರ ರಾಜ್ಯದ ನಾಲ್ಕು ಪ್ರತಿಷ್ಠಿತ ತಂಡಗಳ ಜೋತೆಗೆ ಕರುನಾಡಿನ ನೆಚ್ಚಿನ ಹತ್ತು ತಂಡಗಳು ಭಾಗವಹಿಸಿದ್ದವು. ಈ ಒಂದು ಪಂದ್ಯಾವಳಿಯು ಏಣಿಕೆಗೂ ಮಿರಿ ಯಶಸ್ಸನ್ನು ಕಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಪಂದ್ಯಾವಳಿಯ ಪ್ರಾಯೋಜಕರಾದ ರೇಣುಗೌಡರ ಸಾರಥ್ಯದ ಬೆಂಗಳೂರು “ಫ್ರೆಂಡ್ಸ್ ಸ್ಪೋರ್ಟ್ಸ್ & ಕಲ್ಬರಲ್ ಅಸೋಸಿಯೇಷನ್” ಹೆಸರು ಜಗತ್ತಿನೆಲ್ಲೆಡೆ ಹರಿದಾಡಿದೆ. ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಾವಳಿಯನ್ನು ವೀಕ್ಷಿಸಿ ಪುನೀತರಾಗಿದ್ದರೆ. ಪ್ರತಿ ವಿಭಾಗದಲ್ಲೂ ಆ ಮಟ್ಟದ ಶ್ರೇಷ್ಠತೆಯನ್ನು ಹೊಂದಿತ್ತು ಈ ಪಂದ್ಯಾವಳಿ..!
ಈ ಒಂದು ಸಂಭ್ರಮ ಅದೇ ಪೀಣ್ಯ ಎರಡನೇ ಹಂತದ ಶ್ರೀ ರಾಮ ದೇವಸ್ಥಾನದ ಎದುರಿನ ಕ್ರೀಡಾಂಗಣದಲ್ಲಿ ಎರಡನೇ ಬಾರಿಗೆ ನೆಡೆಸಿದ ಕೀರ್ತಿಗೆ ಪಾತ್ರವಾಯಿತು ಬೆಂಗಳೂರು ಫ್ರೆಂಡ್ಸ್ ತಂಡ. ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಆಹ್ವಾನಿತ ಹದಿನಾರು ತಂಡಗಳು ಪಂದ್ಯಾವಳಿಯ ಶ್ರೇಷ್ಟತೆಗೆ ತಕ್ಕಂತೆ ಪ್ರತಿಯೊಂದು ಪಂದ್ಯವನ್ನು ಅತಿ ಶಿಸ್ತಿನಿಂದ ಅಡಿ ಹೆಮ್ಮೆಯಿಂದ ಭಾಗವಹಿಸಿ ಪಂದ್ಯಾವಳಿಗೆ ಮೆರಗನ್ನು ತಂದುಕೊಟ್ಟರು,ಈ ಪಂದ್ಯಾವಳಿಯಲ್ಲಿ ಅಂತಿಮವಾಗಿ
ನಾಲ್ಕು ತಂಡಗಳು ಸೆಮಫೈನಲ್ ಹಂತ ತಲುಪಿದ್ದವು ಈ ನಾಲ್ಕು ತಂಡಗಳಲ್ಲಿ ಎರಡು ಕರ್ನಾಟಕದ ತಂಡಗಳಾದರೆ ಒಂದು ಹೊರ ರಾಜ್ಯದ ತಂಡ ಇನ್ನೊಂದು ಹೋರ ರಾಷ್ಟ್ರದ ತಂಡ ಸೆಮಿಫೈನಲ್ಸ್ ಹಂತಕ್ಕೆ ಬಂದು ನಿಂತದ್ದು ಪಂದ್ಯಾವಳಿಯ ಘನತೆಯನ್ನು ಇನ್ನಷ್ಟು ಹೆಚ್ಚಿಸಿತ್ತು. ಸೆಮಿಫೈನಲ್ಸ್ ಹಣಾಹಣಿಯಲ್ಲಿ ಕರ್ನಾಟಕದ ಎರಡು ತಂಡಗಳು ಸೋಲಿನ ಕಹಿ ಉಂಡರೆ ದೂರದ ದ್ವೀಪರಾಷ್ಟ್ರ ಶ್ರೀಲಂಕಾದ ವೀನುಸ್ ಬೋಲೋಗ್ನೋ ಹಾಗೂ ಹೊರ ರಾಜ್ಯ ಛತ್ತೀಸ್ಗಢದ ಬಾಲಾಜಿ ನಾನು 11ತಂಡ ಶ್ರೇಷ್ಠ ಮಟ್ಟದ ಆಟವಾಡಿ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದ್ದವು. ಕರ್ನಾಟಕದ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಮತ್ತು ಆಸೆಯಂತೆ ದ್ವೀಪರಾಷ್ಟ್ರ ಶ್ರೀಲಂಕಾ ಫೈನಲ್ ಹಂತವನ್ನು ತಲುಪಿತ್ತು.! ಫೈನಲ್ ಪಂದ್ಯಾಟದಲ್ಲಿ ಶ್ರೀಲಂಕಾದ ವೀನುಸ್ ಬೋಲೋಗ್ನೋ ತಂಡ ನಿರಾಯಾಸ ಆಟದ ಪ್ರದರ್ಶನ ನೀಡಿ ಛತ್ತೀಸ್ಗಢದ ಬಾಲಾಜಿ ನಾನು 11 ತಂಡದ ಎದುರು ಸೋಲಿಗೆ ಶರಣಾಯಿತು.! ತನ್ನ ನಾಯಕತ್ವದ ಜವಾಬ್ದಾರಿಯನ್ನು ಅರಿತು ಬಾಲಾಜಿ ನಾನು 11ತಂಡದ ನಾಯಕ ದಿಲೀಪ್ ಬಿಜ್ವಾ ಜವಾಬ್ದಾರಿಯುತ ಆಟವಾಡಿದರೆ ತಂಡದ ಉಳಿದ ಆಟಗಾರರು ಶಿಸ್ತುಬದ್ದ ಬೌಲಿಂಗ್ ಮತ್ತು ಫೀಲ್ಡಿಂಗ್ ಎದುರು ಶ್ರೀಲಂಕಾ ಆಟಗಾರರು ಯಾವಕ್ಷಣದಲ್ಲೂ ಪ್ರತಿರೋಧ ತೋರದೆ ಸೋಲಿಗೆ ಶರಣಾದರು. ಈ ಅಂತರರಾಷ್ಟ್ರೀಯ ಪಂದ್ಯಾವಳಿಯ ಚಾಂಪಿಯನ್ಸ್ ಆಗಿ ಛತ್ತೀಸ್ಗಢದ ಬಾಲಾಜಿ ನಾನು 11ತಂಡ ಟ್ರೋಫಿಯನ್ನು ಎತ್ತಿಹಿಡಿದರೆ
ಪ್ರಥಮ ಸ್ಥಾನವನ್ನು ಅಲಂಕರಿಸಿದ ಛತ್ತೀಸ್ಗಢದ ಬಾಲಾಜಿ ನಾನು ತಂಡ
ದ್ವೀತಿಯ ಸ್ಥಾನವನ್ನು ದ್ವೀಪರಾಷ್ಟ್ರ ಶ್ರೀಲಂಕಾದ ವೀನುಸ್ ಬೋಲೋಗ್ನೋ ತಂಡ ತನ್ನದಾಗಿಸಿಕೊಂಡಿತು,
ದ್ವೀತಿಯ ಸ್ಥಾನವನ್ನು ಆಲಂಕರಿಸಿದ ಶ್ರೀಲಂಕಾದ ವೀನುಸ್ ಬೋಲೋಗ್ನೋ ತಂಡ
ಈ ಪಂದ್ಯಾವಳಿಯ ಸರಣಿಯ ಶ್ರೇಷ್ಠ ಆಟಗಾರನಿಗೆ ಆಕರ್ಷಕ ಟ್ರೋಫಿಯ ಜೋತೆಗೆ 25,000 ಸಾವಿರ ರೂಪಾಯಿ ನಗದನ್ನು ನೀಡಲಾಯಿತು.
ಇನ್ನುಳಿದಂತೆ ಉತ್ತಮ ಬ್ಯಾಟ್ಸ್‌ಮನ್ ಉತ್ತಮ ಬೌಲರ್ ಗಳಿಗೆ ತಲಾ 5,000 ನಗದು ಮತ್ತು ಆಕರ್ಷಕ ಟ್ರೋಫಿಯನ್ನು ನೀಡಲಾಯಿತು.
ಪ್ರಶಸ್ತಿ ವಿತರಣಾ ಕಾರ್ಯಕ್ರಮ ಕ್ಷಣ
ಈ ಟೂರ್ನಿಯ ಪ್ರಥಮ ಬಹುಮಾನ 5,00000 ಲಕ್ಷ ರೂಪಾಯಿಯ ಜೋತೆಗೆ ಆಕರ್ಷಕ ಟ್ರೋಫಿಯನ್ನು ಛತ್ತೀಸ್ಗಢ ತಂಡ ಪಾಲಾದರೆ, ದ್ವೀತಿಯ ಬಹುಮಾನ 2,50,000 ರೂಪಾಯಿ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ದ್ವೀಪ ರಾಷ್ಟ್ರ ಶ್ರೀಲಂಕಾದ ಪ್ರತಿಷ್ಠಿತ ವೀನುಸ್ ಬೋಲೋಗ್ನೋ ತಂಡ ತನ್ನದಾಗಿಸಿಕೊಂಡಿತು.
ಪೀಣ್ಯಾದ ಸುಂದರ ಕ್ರೀಡಾಂಗಣದಲ್ಲಿ ” ಆಯೋಜಕರೆ ಪ್ರಾಯೋಜಕರು ” ಎನ್ನುವ ಶೀರ್ಷಿಕೆ ಅಡಿ ಮಾರ್ಚ್ 21,22,23 ಮತ್ತು 24 ರ ವರೆಗೆ ನೆಡೆದಂತಹ ಹೊನಲು ಬೆಳಕಿನ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಹತ್ತು ಕ್ಯಾಮರಗಳು ಸೆರೆಹಿಡಿದು ನೆರ ಪ್ರಸಾರದಲ್ಲಿ ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳು ತಾವಿರುವ ಜಾಗದಲ್ಲೆ ಅಷ್ಟು ಪಂದ್ಯವನ್ನು ವೀಕ್ಷಿಸಿದ್ದಾರೆ.
ಅದೇನೇ ಇರಲಿ ರೇಣುಗೌಡರ ಈ ಸಾಹಸವನ್ನು ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗಳು ಮತ್ತು ಆಟಗಾರರು ಗೌರವಿಸಲೆ ಬೇಕು. ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಅಂತರರಾಷ್ಟ್ರೀಯ ಪಂದ್ಯಾವಳಿಯ ಮೆರಗನ್ನು ನೀಡಿ ಶ್ರೀಲಂಕಾದ ಎರಡು ತಂಡಗಳ ಜೋತೆಗೆ ಹೋರ ರಾಜ್ಯದ ನಾಲ್ಕು ತಂಡಗಳನ್ನು ಅಹ್ವಾನಿಸಿ ರಾಜ್ಯದ ಹತ್ತು ಶ್ರೇಷ್ಠ ತಂಡಗಳಿಗೆ ಆವಕಾಶ ಮಾಡಿಕೊಟ್ಟು ಹದಿನಾರು ತಂಡದ ಆಟಗಾರರ ಆತಿಥ್ಯದ ಜೋತೆಗೆ ಸಾವಿರಾರು ಮಂದಿ ಕ್ರಿಕೆಟ್ ಪ್ರೇಕ್ಷಕರನ್ನು ಒಂದೆಡೆ ಸೇರಿಸಿ ಶ್ರೇಷ್ಠ ಮಟ್ಟದ ವೀಕ್ಷಕ ವಿವರಣೆಯ ಜೋತೆಗೆ ಅಂತರಾಷ್ಟ್ರೀಯ ಮಟ್ಟದ ತೀರ್ಪುಗಾರಿಕೆಯಿಂದ ಈ ಒಂದು ಪಂದ್ಯಾವಳಿ ಶ್ರೇಷ್ಠ ಮಟ್ಟದ ಪಂದ್ಯಾವಳಿಯಾಗಿ ವಿಶ್ವದೆಲ್ಲೆಡೆ ಕ್ರಿಕೆಟ್ ಪ್ರೇಮಿಗಳ ಮನಸ್ಸು ಮುಟ್ಟಿದೆ ಈ ಒಂದು ಯಶಸ್ಸಿನ ಶಕ್ತಿಯಾಗಿ ಪ್ರತಿಯೊಂದು ಜವಾಬ್ದಾರಿಗಳನ್ನು ಹೊತ್ತ
ರೇಣುಗೌಡರು ಮತ್ತು ಇವರ ತಂಡಕ್ಕೆ ದೊಡ್ಡ ಸಲಾಂ….. ಮುಂದಿನ ಬಾರಿಯ ಪಂದ್ಯಾವಳಿಯ ನೀರಿಕ್ಷೆಯಲ್ಲಿ ನಾನು ಒಬ್ಬ…
Congrats & All the best Bangalore friend’s 🙏🙏🙏
****************************************
ದ್ವೀತಿಯ ಬಹುಮಾನದೊಂದಿಗೆ ತವರಿಗೆ ತೆರಳಿದ ಶ್ರೀಲಂಕಾ ದ ವೀನುಸ್ ಬೋಲೋಗ್ನೋ ತಂಡಕ್ಕೆ ಕಾದಿತ್ತು ಭವ್ಯಸ್ವಾಗತ.!
ದ್ವೀತಿಯ ಬಹುಮಾನದೊಂದಿಗೆ ತವರಿಗೆ ತೆರಳಿದ ಶ್ರೀಲಂಕಾ ದ ವೀನುಸ್ ಬೋಲೋಗ್ನೋ ತಂಡಕ್ಕೆ ಕಾದಿತ್ತು ಭವ್ಯ ಸ್ವಾಗತ.!
ಫ್ರೆಂಡ್ಸ್ ಬೆಂಗಳೂರು ಆಶ್ರಯದಲ್ಲಿ ಅದ್ದೂರಿಯಾಗಿ ಸತತ ನಾಲ್ಕು ದಿನಗಳ ಕಾಲ ನೆಡೆದ ಅಂತರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ದ್ವೀಪರಾಷ್ಟ್ರ ಶ್ರೀಲಂಕಾದಿಂದ ಭಾಗವಹಿಸಲು ಬಂದ ವೀನುಸ್ ಬೋಲೋಗ್ನೋ ತಂಡ ಪಂದ್ಯಾವಳಿಯ ಉದ್ದಕ್ಕೂ ಅತ್ಯುತ್ತಮ ಆಟದ ಪ್ರದರ್ಶನ ನೀಡಿದ ತಂಡದ ಅಷ್ಟು ಆಟಗಾರರು ಪಂದ್ಯಾವಳಿಯ ಫೈನಲ್ ಹಂತಕ್ಕೆ ತಲುಪಿದ್ದರು.
ಫೈನಲ್ ಹಂತದಲ್ಲಿ ಎಡವಿದ ಶ್ರೀಲಂಕಾ ತಂಡ ತನ್ನ ಜವಬ್ದಾರಿಯುತ ಆಟ ಆಡುವಲ್ಲಿ ವಿಫಲವಾಯಿತು. ಎಲ್ಲಾ ಪಂದ್ಯಗಳಲ್ಲಿ ಜವಬ್ದಾರಿಯುತ ಆಟವಾಡಿದ ಶ್ರೀಲಂಕಾ ತಂಡ ಅಂತಿಮ ಪ್ರಶಸ್ತಿ ಹಂತದ ಪಂದ್ಯದಲ್ಲಿ ಅತಿಯಾದ ನಂಬಿಕೆಯಿಂದ ಕಣಕ್ಕಿಳಿದು ಗೆಲ್ಲುವ ಪಂದ್ಯವನ್ನು ಕೈಚೆಲ್ಲಿ ಸೋಲಿಗೆ ಶರಣಾಯಿತು. ಸೋಲಲ್ಲು ಗೆಲುವು ಕಂಡ ಶ್ರೀಲಂಕಾ ತಂಡ ತನ್ನ ಪಾಲಿನ ದ್ವೀತಿಯ ಬಹುಮಾನವನ್ನು ಗೆದ್ದು ಬಿಗಿತು.ಕರ್ನಾಟಕ ಕ್ರಿಕೆಟ್ ಪ್ರೇಮಿಗಳು ಕೂಡ ಶ್ರೀಲಂಕಾ ಪರವಾಗಿದ್ದರು
ದೂರದ ದ್ವೀಪರಾಷ್ಟ್ರ ಶ್ರೀಲಂಕಾ ತಂಡ ಪ್ರಥಮ ಬಹುಮಾನ ಗೆದ್ದು ಚಾಂಪಿಯನ್ ಪಟ್ಟವನ್ನು ಆಲಂಕರಿಸಬೇಕು ಎನ್ನುವ ಸಾವಿರಾರು ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆಯಾಗಿತ್ತು. ಅದರೂ ಶ್ರೀಲಂಕಾದ ವೀನುಸ್ ಬೋಲೋಗ್ನೋ ತಂಡ ತಾನು ಆಡಿದ ಅಷ್ಟು ಪಂದ್ಯಗಳನ್ನು ಶಿಸ್ತುಬದ್ಧತೆಯಿಂದ ಅಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಶ್ರೀಲಂಕಾ ತಂಡ ದ್ವೀತಿಯ ಬಹುಮಾನದೊಂದಿಗೆ ಬೆಂಗಳೂರಿನಿಂದ ತವರು ನೆಲ ಶ್ರೀಲಂಕಾಕ್ಕೆ ತೆರಳಿದಾಗ ಅಲ್ಲಿ ಅಭಿಮಾನಿಗಳ ಭವ್ಯ ಸ್ವಾಗತ ಕಾದಿತ್ತು ಒಂದೆರಡು ದಿನ ಗೆಲುವಿನ ಸಂಭ್ರಮದಲ್ಲೆ ಕಳೆಯಿತು ವೀನುಸ್ ಬೋಲೋಗ್ನೋ ತಂಡ …..