ಬಂಡಾಯ ಬಿಜೆಪಿ ಅಭ್ಯರ್ಥಿ ಈಶ್ವರಪ್ಪ ನವರು ಸಂಸದರ ತಂದೆಯ ಚಾರಿತ್ರ್ಯ ವಧೆ ಮಾಡ್ದಾಗ ಉತ್ತರ ಕೊಡಲಿಲ್ಲ.!? ಈಗ ನಮ್ಮ ಸಚಿವರ ಸಂಸ್ಕೃತಿಯ ಬಗ್ಗೆ ಮಾತನಾಡಲು ಇವರು ಯಾರು.?
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ ; ನ್ನಿನ್ನೆ ದಿವಸ ನಮ್ಮ ಸಂಸದರು ನಮ್ಮ ಜಿಲ್ಲಾ ಸಚಿವರ ಬಗ್ಗೆ ಅವರ ಸಂಸ್ಕೃತಿಯನ್ನೆಲ್ಲ ಅಳೆದಿದ್ದಾರೆ. ಸಚಿವರ ನಾಲಿಗೆ ಅವರ ಸಂಸ್ಕೃತಿಯನ್ನು ಹೇಳೊತ್ತೆ. ಅಂತದ್ದು ನಾವು ಎನು ಹೇಳಿದ್ದೇವೆ ಸಂಸ್ಕೃತಿ ಹೇಳುವಂತದ್ದನ್ನು. ಅ ತರ ಸಂಸ್ಕೃತಿಯನ್ನು ಎಲ್ಲಾದರು ಅಳೆಯಲು ಹೋಗಬಾರದು. ಹಾಗದರೆ ಸಂಸದರದ್ದು ಯಾವ ಸಂಸ್ಕೃತಿ.? ನಿಮ್ಮ ಪೂಜ್ಯ ತಂದೆಯವರ ಬಗ್ಗೆ ನಿಮ್ಮದೆ ಪಕ್ಷದ ನಾಯಕರಾಗಿರುವಂತಹ ಈಗ ಬಂಡಾಯ
ಕೆ ಎಸ್ ಈಶ್ವರಪ್ಪನವರು ಅಶ್ಲೀಲವಾಗಿ ಅಪಾರ್ಥ ಬರುವ ರೀತಿಯಲ್ಲಿ ” ಎದೆಯನ್ನು ಬಗೆದರೆ ಒಂದು ಕಡೆ ನೀವು ( ಯಡಿಯೂರಪ್ಪ ನವರ ಮಕ್ಕಳು) ಇನ್ನೊಂದು ಕಡೆ ಕೇಂದ್ರ ಸಚಿವೆ ಆಗಿದ್ದಂತಹ ಶೋಭ ಕರಂದ್ಲಾಜೆ ಅವರು ಕಾಣ್ತಾರೆ ಅಂತ ಹೇಳಿದ್ದಾರಲ್ಲ ಯಡಿಯೂರಪ್ಪ ನವರ ಮೇಲೆ ಮಾಡಿದ ಚಾರಿತ್ರ್ಯ ವಧೆ ಬೇಸರವನ್ನು ಖೇದವನ್ನು ವ್ಯಕ್ತಪಡಿಸುತ್ತಿದ್ದರೆ, ಮಕ್ಕಳು ತಾವು ಏನು ಮಾಡಿದ್ರಿ.? ಹಾಗಾದರೆ ನಿಮ್ಮದು ಯಾವ ಸಂಸ್ಕೃತಿ.? ನಿಮ್ಮ ತಂದೆಯವರಿಗೆ ಅತ್ಯಂತ ಕೀಳು ಭಾಷೆಯನ್ನು ಉಪಯೋಗಿಸಿದಾಗ ನೀವು ಪ್ರತಿಭಟಿಸಲಿಲ್ಲ. ನಮ್ಮ ತಂದೆಯವರ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆ ಇಂದ ಮಾತನಾಡಿ ಅಂತ ಗದರಿಸಲಿಲ್ಲ.? ತಂದೆಯವರಿಗೆ ಅವಮಾನವಾದಗ ಕೂಡ ತಮ್ಮ ರಾಜಕೀಯ ಬೆಳೆಯನ್ನು ಬೆಯಿಸಿಕೊಳ್ಳವಂತಹ ತಮ್ಮದು ಯಾವ ಸಂಸ್ಕೃತಿ ಅಂತ ಅರ್ಥವಾಗಲಿಲ್ಲ.!?
ಸನ್ಮಾನ್ಯ ಯಡಿಯೂರಪ್ಪ ನವರನ್ನು ಹೀನಾಯವಾಗಿ ಪಕ್ಷದಿಂದ ಹೋರ ಹಾಕಿದಾಗಲು ಕಣ್ಣಿರು ಹಾಕುತ್ತ ಬಂದ್ರಲ್ಲ ನಿಮ್ಮ ಪೂಜ್ಯ ತಂದೆಯವರು ತಾವು ಪುತ್ರರಾಗಿರುವಂತವರು ಜೋತೆಗೆ ಸಂಸದರು ಆಗಿದ್ರಿ. ನಿಮ್ಮ ತಂದೆಯ ಕಣ್ಣಿರು ನಿಮ್ಮ ಮನಸ್ಸನ್ನು ಸ್ವಲ್ಪ ಕೂಡ ವಿಚಲಿತ ಮಾಡಲಿಲ್ಲ ಕಲಕಲಿಲ್ಲ.! ಅವರ ವಿಷಾದದ ಅಧಿಕಾರದ ತ್ಯಾಗ ಇಡೀ ರಾಜ್ಯವೇ ಕಣ್ಣಿರು ಹಾಕಿದ್ರು ತಮಗೆ ಕಣ್ಣಿರು ಬರಲಿಲ್ಲ.!? ಕೇವಲ ಅಧಿಕಾರಕ್ಕೆ ಮತ್ತು ಅವರ ಆಸ್ತಿಗೆ ಮಾತ್ರ ಜೋತು ಬಿದ್ದಿರುವ ನಿಮ್ಮದು ಯಾವ ಸಂಸ್ಕೃತಿ. ಸನ್ಮಾನ್ಯ ಯಡಿಯೂರಪ್ಪ ನವರು ತಮ್ಮ ಇಳಿವಯಸ್ಸಿನಲ್ಲಿ ಬಿಜೆಪಿಯಲ್ಲಿ ನನಗೆ ಅವಮಾನ ಆಗುತ್ತಿದೆ.! ಚಾಕು ಹಾಕಿದ್ದಾರೆ.! ಪಕ್ಷ ಮೋಸಮಾಡಿದೆ ಅಂತ ಹೇಳಿ ಬಿಜೆಪಿಯಿಂದ ಹೋರ ಹೋಗಿ ಕೆಜೆಪಿ ಕಟ್ಟಿದ್ರಲ್ಲ.ಅವಾಗ ತಾವೇನಾದ್ರು ಬಿಜೆಪಿಗೆ ರಾಜಿನಾಮೆ ಕೊಟ್ಟು ತಂದೆಯವರಿಗೆ ಸಹಾಯ ಮಾಡಲು ಅವರ ಜೋತೆಗೆನಾದ್ರು ಹೋದ್ರ.? ಎಂದು ಅಯನೂರು ಮಂಜುನಾಥ್
ಪ್ರೇಶ್ನಮಾಡಿದರು.ಅಧಿಕಾದ ದುರಾಸೆಯಿಂದ ಸಂಸದ ಸ್ಥಾನಕ್ಕೆ ರಾಜಿನಾಮೆ ಕೊಡಲಾಗದೆ ಎಲ್ಲರೂ ನಿಮ್ಮ ತಂದೆಯವರ ಜೋತೆಗೆ ಹೋದರು ತಾವೇನು ಮಾಡುತ್ತಿದ್ರಿ ಸನ್ಮಾನ್ಯ ರಾಘವೇಂದ್ರ ಅವರೆ.? ಪೂಜ್ಯ ತಂದೆಯವರು ಅಂತ ಹೇಳ್ತೀರಾ ಆದರೆ ಅವರ ಜೋತೆಗೆ ಹೋಗಲಿಲ್ಲ. ಸಾಲದ್ದಕ್ಕೆ ಬಿಜೆಪಿಯಲ್ಲೆ ಎಂಪಿಯಾಗಿ ಇರ್ತಿನಿ ಕೆಜೆಪಿಗೆ ಸಪೋರ್ಟ್ ಮಾಡ್ತೀನಿ ಹಾಗಾದರೆ ನಿಮ್ಮದು ಯಾವ ಸಿದ್ಧಾಂತ ಸಂಸದರೆ.?
ನಿಮ್ಮ ಪೂಜ್ಯ ತಂದೆ ಯಡಿಯೂರಪ್ಪನವರು ಜೈಲಿಗೆ ಹೋಗಲು ಕಾರಣ ಯಾರು? ಚೆಕ್ ನಲ್ಲಿ ಹಣ ತೆಗೆದುಕೊಂಡು ಚೋಟಾ ಸಹಿ ಹಾಕಿದವರು ಯಾರು? ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದ ಕುಲಘಾತುಕರು ಯಾರು.? ಯಡಿಯೂರಪ್ಪನವರನ್ನೆ ಜೈಲಿಗೆ ಕಳುಹಿಸಿದರಲ್ಲ ಇವರದು ಯಾವ ಸಂಸ್ಕೃತಿ.? ಯಾವ ಸಂತಾನ.? ಎಂದು ವಾಗ್ದಾಳಿ ನಡೆಸಿದರು.
ಚೇಲಾ ಎಂದು ಮಧು ಬಂಗಾರಪ್ಪ ಅವರು ಹೇಳಿದ್ದಾರೆ ಎಂದು ರಾಘವೇಂದ್ರ ಆರೋಪ ಮಾಡಿದ್ದಾರೆ. ಅವರು ಸಂಸದರು. ಅವರು ಅಷ್ಟೋತ್ತಿಗಾಗಲೆ ಹಿಂದಿ ಭಾಷೆ ಕಲಿಯಬೇಕಿತ್ತು. ಚೇಲಾ ಎಂದರೆ ಹಿಂದಿಯಲ್ಲಿ ಶಿಷ್ಯರು ಎಂದು ಅರ್ಥ. ಇದನ್ನು ತಾವೇಕೆ ಅಪಾರ್ಥ ಮಾಡಿಕೊಂಡರೋ ಗೊತ್ತಿಲ್ಲ.? ಹಾಗೆಯೇ ಭ್ರಷ್ಟಾಚಾರದ ದುಡ್ಡಿಗೆ ಸಾಮಾನ್ಯವಾಗಿ ಗ್ರಾಮೀಣ ಭಾಷೆಯಲ್ಲಿ ಹಡಬೆದುಡ್ಡು ಎಂದು ಸ್ವಾಭಾವಿಕವಾಗಿ ಕರೆಯುತ್ತೇವೆ ತಪ್ಪೇನು?
ಮಧು ಬಂಗಾರಪ್ಪನವರನ್ನು ಕೆಣಕುವ ಮೊದಲು ಅವರದೇ ಪಕ್ಷದ ಈಶ್ವರಪ್ಪನವರ ಮಾತುಗಳಿಗೆ ಉತ್ತರ ಕೊಡಲಿ ಎಂದು ತೀವ್ರ ವಾಗ್ದಾಳಿ ಮಾಡಿದರು.
ಬಂಗಾರಪ್ಪನವರ ಸಾಧನೆ ಬಗ್ಗೆ ಅವರು ಮಾತನಾಡುವುದು ಸರಿಯಲ್ಲ.ಅವರು ಜನಪ್ರಿಯ ನಾಯಕ. ಅವರು ಬಡವರ ಪರ ಜಾರಿಗೆ ತಂದಿರಯವ ಅದೇಷ್ಟೋ ಯೋಜನೆಗಳು ಇಂದಿಗೂ ಚಾಲ್ತಿಯಲ್ಲಿವೆ. ರೈತರ ಪಂಪ್ ಸೆಟ್ ಗಳಿಗೆ ಕರೆಂಟ್ ಕೊಟ್ಟಿದ್ದು ಬಂಗಾರಪ್ಪನವರೇ. ನಾವು ಕೊಟ್ಟಿದ್ದು ಎಂದು ಹೇಳುವುದೇಕೆ.? ಮುಂದುವರೆಸಿದ್ದೇವೆ ಎನ್ನಲಿ. ಹಾಗೆಯೇ ವಿಮಾನ ನಿಲ್ದಾಣ ಸ್ಥಾಪನೆ. ರಸ್ತೆಗಳ ಅಭಿವೃದ್ಧಿ ಇವೆಲ್ಲವೂ ಕಾಂಗ್ರೆಸ್ ಆಡಳಿತದ ಕಾಲದಲ್ಲಿಯೂ ನಡೆದಿದ್ದವು. ಇವರ ರಸ್ತೆಗಳು, ರಿಂಗ್ ರೋಡ್, ಬೈಪಾಸ್ ರಸ್ತೆಗಳು ಎಲ್ಲಿಗೆ ಹೋಗಿ ಎಲ್ಲಿ ಸೇರಿವೆ ಎಂದು ಅವರೇ ಉತ್ತರಿಸಲಿ.ಯಾರ ಯಾರ ಆಸ್ತಿ ಇರುಜಾಗದಲ್ಲಿ ಅಭಿವೃದ್ಧಿಯಾಗಿದೆ ಎಂದು ಅವರೆ ಹೇಳಲಿ. ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರು ಬಹಿರಂಗ ಚರ್ಚೆಗೆ ಕರೆಯುತ್ತಾರ.? ಚರ್ಚೆಗೆ ಬರುವಷ್ಟು ಪುರುಸೊತ್ತು ಅವರಿಗೆ ಇದೆಯಾ? ನಾನಂತೂ ರೆಡಿ ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಎಸ್.ಕೆ. ಮರಿಯಪ್ಪ, ಕಲಗೋಡು ರತ್ನಾಕರ್ ಜಿ.ಡಿ. ಮಂಜುನಾಥ್ಪಾಶ, ಇಕ್ಕೇರಿ ರಮೇಶ್, ಶಾಂತವೀರ ನಾಯ್ಕ್, ಜಿ. ಪದ್ಮನಾಭ್, ಶಿ.ಜು. ಪಾಶ, ಹಿರಣ್ಣಯ್ಯ ಮುಂತಾದವರಿದ್ದರು