ಕರ್ನಾಟಕದ ಅಷ್ಟೂ ಕ್ಷೇತ್ರದಲ್ಲಿ ಎಲ್ಲಿಯೂ ಬಿಜೆಪಿಯ ಗಾಳಿ ಇಲ್ಲ , ಸಂಪೂರ್ಣ ಕಾಂಗ್ರೆಸ್ ವಾತಾವರಣವಿದೆ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ; ಕರ್ನಾಟಕದಲ್ಲಿ ಎಲ್ಲಿಯೂ ಬಿಜೆಪಿ ಅಲೆಯಿಲ್ಲ ಸಂಪೂರ್ಣ ಕಾಂಗ್ರೆಸ್ ಮಯವಾಗಿವದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಗೋಕರ್ಣದಲ್ಲಿ ಹೇಳಿದ್ದಾರೆ.
ಬಿಜೆಪಿಯಲ್ಲಿ ಈಗ ಸಿದ್ದಾಂತಕ್ಕೆ ಬೆಲೆಯಿಲ್ಲ. ಪಕ್ಷ ಕಟ್ಟಿ, ಬೆಳೆಸಿ, ಪಕ್ಷಕ್ಕಾಗಿ ದುಡಿದವರು ಈಗ ಮನೆಯಲ್ಲಿದ್ದಾರೆ. ಪಕ್ಷಕ್ಕೆ ಅವರು ಬೇಕಾಗಿಲ್ಲ. ಸಿದ್ದಾಂ ತ ಇಲ್ಲದ ಹೊರಗಿನಿಂದ ಬಂದವರೇ ಈಗ ಬಿಜೆಪಿಯಲ್ಲಿ ಆಳುವವರಾಗಿದಗದಾರೆಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮಹಾಬಲೇಶ್ವರನ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಆತ್ಮಸ್ಥೈ ರ್ಯ ಹೆಚ್ಚಾಗಿದೆ. ಸರ್ಕಾ ರದ ಗ್ಯಾರಂಟಿ ಅನುಷ್ಠಾನದಿಂದ ದೇವರು ನಮಗೆ ಹೆಚ್ಚಿನ ಶಕ್ತಿ ಕೊಡುತ್ತಾನೆ ಎಂದರು.
ಕರ್ನಾ ಟಕದಲ್ಲಿ ಎಲ್ಲಿಯೂ ಬಿಜೆಪಿ ಗಾಳಿಯಿಲ್ಲ. ಎಲ್ಲಾ ಕಡೆ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರ ವಾತವರಣವಿದೆ.ಪ್ರತಿ ಲೋಕಸಭಾ ಕ್ಚೇತ್ರದಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಒಳ್ಳೆಯ ವಾತವರಣ ಸೃಷ್ಟಿಯಾಗಿದ್ದು ಬಿಜೆಪಿಗೆ ಈಗಾಗಲೇ ನಡುಕ ಶುರುವಾಗಿದೆ. ಇದೇ ಕಾರಣದಿಂದ ಈಗ ಮೋದಿ ಗ್ಯಾರಂಟಿ ಬಗ್ಗೆ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಸಿದ್ದಾಂತ ನಂಬಿ ಪಕ್ಷಕ್ಕೆ ಬರುವವರಿಗೆ ಸ್ವಾಗತ ಎನ್ನುವ ಮೂಲಕ ಪರೋಕ್ಷವಾಗಿ ಶಿವರಾಮ ಹೆಬ್ಬಾರ ಕಾಂಗ್ರೆಸ್ಸಿಗೆ ಬಂದರೆ ಪಕ್ಷ ಅವರನ್ನು ಸೇರಿಸಿಕೊಳ್ಳಲಿದೆ.ಯಾರು ವಿರೋಧ ಮಾಡಿದರೂ ಪಕ್ಷದ ತೀರ್ಮಾನವೇ ಅಂತಿಮ ಎಂದರು.