ಕಾಸರಗೋಡು: ಪರೀಕ್ಷೆ ಆರಂಭಕ್ಕೂ ಮುನ್ನ ಅಭ್ಯರ್ಥಿಯ ‘ಹಾಲ್ ಟಿಕೆಟ್’ ಹೊತ್ತೊಯ್ದ ಹದ್ದು.!!, ವಿಡಿಯೋ ವೈರಲ್
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಶಿವಮೊಗ್ಗ: ಕೇರಳ ಲೋಕಸೇವಾ ಆಯೋಗದ (ಪಿಎಸ್ಸಿ) ಕಾಸರಗೋಡಿನ ಅಭ್ಯರ್ಥಿಯೊಬ್ಬರಿಗೆ ಪರೀಕ್ಷೆ ಆರಂಭವಾಗುವ ಕೆಲವೇ ನಿಮಿಷಗಳ ಮೊದಲು ಆಘಾತವಾಗಿದೆ ಯಾರು ಕನಸಿನಲ್ಲೂ ಏಣಿಸಿಕೊಳ್ಳಲಾರದಂತ ವಿಚಿತ್ರ ಹಾಗೂ ಕೌತುಕ ಘಟನೆಯೊಂದು ನಡೆದು ಹೋಗಿದೆ.! ಆಕಾಶದಲ್ಲಿ ಸೈಲೆಂಟಾಗಿ ಹಾರಡುತ್ತಿದ್ದ ಹದ್ದೊಂದು ದಿಢೀರ್ ಎಂದು ಭೂಮಿಯತ್ತ ಬಂದು ಪರೀಕ್ಷಾ ಅಭ್ಯರ್ಥಿಯೊಬ್ಬರ ಹಾಲ್ ಟಿಕೆಟ್ ( ಪರೀಕ್ಷಾ ಪ್ರವೇಶ ಪತ್ರ)ಅನ್ನು ಕಸಿದುಕೊಂಡು ಹೊದ ವಿಚಿತ್ರ ಘಟನೆ ನಡೆದಿದೆ.! ಇದು ಏಪ್ರಿಲ್ 10ರ ಬೆಳಿಗ್ಗೆ ಪರೀಕ್ಷೆ ಆರಂಭವಾಗುವುದಕ್ಕೆ ಕೇಲವು ನಿಮಿಷ ಬಾಕಿ ಇರುವಾಗ ಕಾಸರಗೋಡಿನ ಸರ್ಕಾರಿ ಯುಪಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ 300 ಕ್ಕೂ ಹೆಚ್ಚು ಅಭ್ಯರ್ಥಿಗಳು ಮತ್ತು ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ.
ವರದಿಯ ಪ್ರಕಾರ, ಅಭ್ಯರ್ಥಿಯು ಮುಂಚಿತವಾಗಿ ಪರೀಕ್ಷಾ ಸ್ಥಳಕ್ಕೆ ತೆರಳಿದ್ದರಂತೆ. ಹಾಗೂ ಹಾಲ್ ಟಿಕೆಟ್ ( ಪರೀಕ್ಷಾ ಪ್ರವೇಶ ಪತ್ರ) ಅನ್ನು ತಾನು ಕುಳಿತ ಸ್ಥಳದಲ್ಲಿ ಅದನ್ನು ಅವನು ಪಕ್ಕದಲ್ಲಿ ಇಟ್ಟಿದ್ದಾನೆ.ಕೆಲವೇ ಕ್ಷಣದಲ್ಲಿ ಹದ್ದೊಂದು ಪರೀಕ್ಷಾ ಅಭ್ಯರ್ಥಿಯ ಹತ್ತಿರಕ್ಕೆ ನೇರವಾಗಿ ಹಾರಿಬಂದು ಆಶ್ಚರ್ಯವೆಂಬುವಂತೆ ತನ್ನ ಕೊಕ್ಕಿನಲ್ಲಿ ಆತ ಪಕ್ಕದಲ್ಲಿರಿಸಿದ್ದ ಹಾಲ್ ಟಿಕೆಟ್ ಅನ್ನು ಕ್ಷಣಾರ್ಧದಲ್ಲಿ ಎತ್ತಿಕೊಂಡು ಮೇಲಕ್ಕೆ ಹಾರಿದೆ.
ಅಲ್ಲಿದ್ದವರಿಗೆ ಒಂದು ಕಡೆ ಆಶ್ಚರ್ಯ ಇನ್ನೊಂದು ಕಡೆ ಪರೀಕ್ಷಾ ಅಭ್ಯರ್ಥಿ ಹಾಲ್ ಟಿಕೆಟ್ ಇಲ್ಲದೆ ಪರೀಕ್ಷೆ ಬರೆಯುವುದಾದರು ಹೇಗೆ ಎನ್ನುವ ಪ್ರಶ್ನೆ ಅವರನ್ನು ಕಾಡಿದೆ. ತಕ್ಷಣವೇ ಅಲ್ಲಿದ್ದ ಕೆಲವರು ಹದ್ದಿನಿಂದ ಹಾಲ್ ಟಿಕೆಟ್ ಪಡೆಯಲು ಅದರತ್ತ ಕಲ್ಲುಗಳನ್ನು ಎಸೆದರು ಕೋಲುಗಳಿಂದ ಬೆದರಿಸಿದರು ಯಾವುದೇ ಪ್ರಯೋಜನವಾಗಿಲ್ಲ.!
ಕೊನೆಗೆ ಹದ್ದೆ ಹಾಲ್ ಟಿಕೆಟ್ ಸಹವಾಸ ಬೇಡ ಎಂದು ಅರಿತು ಹಾಲ್ ಟಿಕೆಟ್ ಅನ್ನು ಕೈಬಿಟ್ಟಿತು,ಅದನ್ನು ಹಿಂಪಡೆಯಲು ಮತ್ತು ಪರೀಕ್ಷಾ ಆರಂಭದ ಗಡುವಿನ ಕೆಲವೇ ಕ್ಷಣಗಳ ಮೊದಲು ಪರೀಕ್ಷಾ ಕೊಠಡಿಗೆ ತೆರಳಲು ಅವಕಾಶ ಮಾಡಿಕೊಟ್ಟಿತು.
ಅಭ್ಯರ್ಥಿಗೆ ಅದ ತೊಂದರೆ ಗೊತ್ತಿದ್ದರು ಹಾಲ್ ಟಿಕೆಟ್ ಇಲ್ಲದೆ ಯಾವುದೇ ಅಭ್ಯರ್ಥಿಗೆ ಪರೀಕ್ಷೆ ತೆಗೆದುಕೊಳ್ಳಲು ಅನುಮತಿ ಇಲ್ಲ ಎಂದು ಅಧಿಕಾರಿಗಳು ನಂತರ ತಾನು ಯಾರೆಂದು ಬಹಿರಂಗಪಡಿಸದ ಅಭ್ಯರ್ಥಿ, ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ, ಆದರೆ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.